
ಪಡಿತರ ವಿತರಕರ ಸಂಘ ದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ , ಚಲನಚಿತ್ರದ ಟೀಸರ್ ಬಿಡುಗಡೆ ಸಮಾರಂಭ

New Year Calendar Released by Ration Distributors Association, Movie Teaser Release Ceremony
ಬೆಂಗೂರು:ದಿ,6.1 .2026, ರಂದು ಬೆಂಗಳೂರು ಟವನ್ ಹಾಲ್ ನಲ್ಲ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸರ್ಕಾರಿ ನ್ಯಾಯಬೆಲೆ ಅಂಗಡಿ ಎಂಬ ಚಲನಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಜರುಗಿತು.
ಬೆಂಗಳೂರಿನ ಟೌನ್ ಆಲ್ ನಲ್ಲಿ ಜರುಗಿತು ಪ್ರಾಸ್ತವಿಕವಾಗಿ ರಾಜ್ಯಾಧ್ಯಕ್ಷರಾದ ಟಿ ಕೃಷ್ಣಪ್ಪ ಅವರು ಮಾತನಾಡುತ್ತಾ ನ್ಯಾಯಬೆಲೆ ಅಂಗಡಿಯ ಕುಂದು ಕೊರತೆಗಳ ಬಗ್ಗೆ ಮತ್ತು ಕಮಿಷನ್ ಹಣ ಹೆಚ್ಚಳದ ಬಗ್ಗೆ ಮಾತನಾಡಿದರು ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಸನ್ಮಾನ್ಯ ಶ್ರೀ ಕೆಎಚ್ ಮುನಿಯಪ್ಪನವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಡೀ ದೇಶದಲ್ಲಿಯೇ ಉತ್ತಮವಾಗಿ ಪಡಿತರ ವಿತರಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರದ ಪ್ರಶಸ್ತಿ ಲಭಿಸಿದ್ದು ತುಂಬಾ ಸಂತೋಷದ ವಿಚಾರ ಎಂದು ತಿಳಿಸುತ್ತಾ ಇದಕ್ಕೆ ತಾವೆಲ್ಲರೂ ಕಾರಣಿ ಭೂತರೆಂದು ತಿಳಿಸುತ್ತಾ ಆದಕಾರಣ ಸರಕಾರದಿಂದ ಇಂದಿರಾ ಕಿಟ್ ವಿತರಿಸಿದರು ತಮಗೆಲ್ಲರಿಗೂ ಕಮಿಷನ್ ವಿಷಯದಲ್ಲಿ ಕೊರತೆ ಆಗದಂತೆ ಈಗ ಇರುವ ಕಮಿಷನ್ ಹಣ ಮುಂದುವರಿಸಲು ಕ್ರಮವಹಿಸುವುದಾಗಿ ತಿಳಿಸಿದರು ಬಡ ಜನರಿಗೆ ಪಡಿತರ ವಿಚಾರಕರೆಲ್ಲರೂ ಇದೇ ರೀತಿಯಾಗಿ ಉತ್ತಮವಾಗಿ ಪಡಿತರ ವಿತರಿಸುತ್ತಾ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ವಿನಂತಿಸಿದರು.
ಈಕಾರ್ಯಕ್ರಮದ ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು . ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘದಿಂದ ಅಧ್ಯಕ್ಷರಾದ ಕೆ ಮಂಜುನಾಥ್ ಉಪಾಧ್ಯಕ್ಷರಾದ ಎಂಪಿ ಪಂಪನಗೌಡ ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್ ಹಿರಿಯರಾದ ಟಿ ಜಿ ಬಾಬು ನಾಗರಾಜ್ ನಾಯಕ್ ಹಾಗೂ ಇನ್ನೂ ಅನೇಕ ಪಡಿತರ ವಿತರಕರು ಕಾರ್ಯಕ್ರಮಕ್ಕೆ ತೆರಳಿ ಶುಭ ಕೋರಿದರು ಎಂದು ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘದಿಂದ ಅಧ್ಯಕ್ಷರಾದ ಕೆ ಮಂಜುನಾಥ್ ತಿಳಿಸಿದ್ದಾರೆ.




