
ಫಲಾನುಭವಿಗಳಿಗೆ ತ್ರಿಚಕ್ರ ವಾಹನ :ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್.

MLA M.R. Manjunath distributed various equipment including a three-wheeler to the beneficiarie
ವರದಿ: ಬಂಗಾರಪ್ಪ .ಸಿ.
ಹನೂರು : ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಾಮನ್ಯ ಜನರಿಗೂ ತಲುಪಿಸಬೇಕು ಹಾಗೆಯೇ ಎಲ್ಲರಂತೆ ನಮ್ಮಲ್ಲಿರುವ ವಿಕಲಚೇತನರು ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಾಯದಿಂದ ನೆರವು ಹಾಗೂ ಸಹಕಾರಿಯಾಗುವಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಇದೊಂದು ಉತ್ತಮ ಬೆಳವಣಿಯಾಗಿದೆ ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ವಿತರಣೆ ಯಾಗಿರುವ ವಿವಿಧ ಸಲಕರಣೆಗಳು ಜಿಲ್ಲೆಯಾದ್ಯಂತ ಇರುವ ಅರ್ಹ ವಿಕಲಚೇತನರಿಗೂ ಸೌಲಭ್ಯಗಳನ್ನು ಒದಗಿಸುವಂತಾಗಬೇಕು , ಮುಂದಿನ ದಿನಗಳಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅರ್ಹ ಫಲವನುಗಳನ್ನು ಗುರುತಿಸಿ ಮತ್ತಷ್ಟು ಪರಿಕರಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಮಯದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ. ಡಾ ಕೆ ಎನ್ ಮಂಜುನಾಥ್, ಹಾಗೂ ಮುಖಂಡರುಗಳಾದ ಮಂಜೇಶ್ ಗೌಡ, ಚಿನ್ನವೆಂಕಟ್,ಎಸ್. ಆರ್ ಮಹದೇವ್,ಅಮೀನ್,ಗೋವಿಂದ,ರಾಚಪ್ಪ,ಶಿವು,ವೆಂಕಟೇಶ್,ಪ್ರಸನ್ನ, ಸೇರಿದಂತೆ ಇನ್ನಿತರರು ಹಾಜರಿದ್ದರು.




