
ಲೋಕೋಪಯೋಗಿ ಇಲಾಖೆಯಲ್ಲಿ ಜರುಗಿದ ಗಣರಾಜ್ಯೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಎಮ್ ಆರ್ ಮಂಜುನಾಥ್

MLA M R Manjunath at a preliminary meeting held at the Public Works Department as part of the Republic Day celebrations.
ವರದಿ: ಬಂಗಾರಪ್ಪ .ಸಿ .
ಹನೂರು :ಇದೇ ತಿಂಗಳು ಜರುಗುವ ಗಣರಾಜ್ಯೋತ್ಸವದ ಅಂಗವಾಗಿ ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸೇರಿದಂತೆ ಸುತ್ತಮುತ್ತಲಿನ ಕಛೇರಿಯ ಸಿಬ್ಬಂದಿಗಳು ಹಾಜರಿರಬೇಕು , ಕ್ಷೇತ್ರ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ನಡೆದ ಕಾರ್ಯಕ್ರಮಗಳನ್ನು ತಪ್ಪದೆ ನಮಗೆ ಮಾಹಿತಿ ನೀಡಬೇಕು ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ನಡೆದ ಜನವರಿ _26ರಂದು ಜರುಗುವ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಶಿಸ್ತನ್ನು ಕಾಪಾಡಬೇಕು , ಪ್ರತಿ ಕಾರ್ಯಕ್ರಮವು ವಿಶೇಷವಾಗಿರಲಿ ,ಅಂಗನವಾಡಿ ಮಕ್ಕಳಿಂದಲೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ ,ಸಾಧಕರ ಪುಸ್ತಕಗಳನ್ನು ಮಕ್ಕಳಿಗೆ ಧಾನಿಗಳ ಸಹಾಯದಿಂದ ನೀಡಿ ,ಮುಂದಿನ ದಿನಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳನ್ನು ಒಂದೆ ದಿನದಲ್ಲಿ ಆಚರಿಸೋಣ. ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದ ಕಟ್ಟಡವನ್ನು ಅಗಲಿಕರಣ ಮಾಡಿ ನಿರ್ಮಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿ ಪುರೊಷತ್ತಮ್ ರವರಿಗೆ ತಿಳಿಸಿದರು ,ಮಕ್ಕಳ ಪ್ರತಿಭೆಗಳನ್ನು ಹೊರತರವಂತಾಗಬೇಕು .
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರ ತಾ.ಪಂ.ಇಓ ಉಮೇಶ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಬಿಇಓ ಮಹೇಶ್ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಉಪನೊಂದಾಣಿ ಅಧಿಕಾರಿ ಉಷಾ ಕಾವೇರಿ ನೀರಾವರಿ ಎಇ ಕರುಣಾಮಯಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಾಜೇಶ್ ಚೆಸ್ಕ್ಂ ರಂಗಸ್ವಾಮಿ ಅಗ್ನಿ ಶಾಮಕ ಮಹೇಶ್ ಲೋಕೋಪಯೋಗಿ ಇಲಾಖೆ ಪುರುಷೋತ್ತಮ್ ಧೖಹಿಕ ಶಿಕ್ಷಕ ಕೆಂಪರಾಜು ಕೃಷಿ ಇಲಾಖೆ ನಾಗೇಂದ್ರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಪಶು ಇಲಾಖೆ ಸಿದ್ದರಾಜು ಕಂದಾಯ ರಾಜಸ್ವ ನಿರೀಕ್ಷಕ ಮಲ್ಲೇಶ್ ಸಿಡಿಪಿಓ ಅಂಬಿಕಾ ಇನ್ನಿತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.




