
ವಿಶ್ವರೂಪಿಣಿ ಶ್ರೀ ವಾಸವಿ ಚಲನಚಿತ್ರ ಪ್ರದರ್ಶನದ ಉದ್ಘಾಟನೆ.

Inauguration of the Vishwaroopini Sri Vasavi film screening.
ಗಂಗಾವತಿ.. ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ಅವರ ದಕ್ಷ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡ ಚಲನಚಿತ್ರ ಬುಧವಾರದಂದು ನಗರದ ಚಂದ್ರಹಾಸ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನವನ್ನು ಮಾಜಿ ಸಂಸದ ಎಸ್ ಶಿವರಾಮೇಗೌಡ. ಗಂಗಾವತಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯ್ಚೂರ್. ಪ್ರಧಾನ ಕಾರ್ಯದರ್ಶಿ ಈಶ್ವರ ಶೆಟ್ಟಿ. ಉಪಾಧ್ಯಕ್ಷ ಸುರೇಶ್. ಚಿತ್ರನಟ ವಿಷ್ಣುತೀರ್ಥ ಜೋಶಿ ಸೇರಿದಂತೆ ಮತ್ತಿತರರು ಜ್ಯೋತಿ ಬೆಳಗ್ಗೆ ಸೋದರ ಮೂಲಕ ಹಾಗೂ ಶ್ರೀ ವಾಸವಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್ ಶಿವರಾಮೇಗೌಡ ಮಾತನಾಡಿ. ಪ್ರಸ್ತುತ ದಿನಗಳಲ್ಲಿ ಭಕ್ತಿ ಪ್ರಧಾನವಾದ ಚಿತ್ರಗಳು ಅಪರೂಪ ಎಂಬಂತೆ ಬೆಳ್ಳಿ ತೆರೆಯ ಮೇಲೆ ಬರುತ್ತಿರುವುದು ಕೇದಕರವಾಗಿದೆ. ಯಾವುದೇ ಭಕ್ತಿ ಪ್ರಧಾನ ಚಿತ್ರಗಳು ಇರಲಿ ಪ್ರತಿಯೊಬ್ಬರು ವೀಕ್ಷಣೆ ಮಾಡುವುದರ ಮೂಲಕ ವ್ಯಕ್ತಿಗಳು ಸಂಸ್ಕಾರಯುತವಾಗಿ ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ ಎಂದು ತಿಳಿಸಿದರು. ಬಸವರಾಜ ಸ್ವಾಮಿ ಮಳೆ ಮಠ ಮಾತನಾಡಿ ಮಾತನಾಡಿ. ದೈವತ್ವ ಸಾಕಾತ್ಕಾರ ಪಡೆದುಕೊಂಡ ಮಹಾಮಹಿಮರು ಸಾಧು ಸಂತರು ದಾಸ ಮಹನೀಯರು ಹಾಗೂ ವಚನಕಾರರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿ ಅರ್ಥಪೂರ್ಣವಾದ ಜೀವನ ನಡೆಸುವಲ್ಲಿ ಇಂತಹ ಭಕ್ತಿ ಪ್ರಧಾನವಾದ ಚಿತ್ರಗಳು ದಾರಿದೀಪವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಭಾಗ್ಯ ಈಶ್ವರ್ ಶೆಟ್ಟಿ. ದರೋಜಿ ನಾಗರಾಜ್ ಶೆಟ್ಟಿ ಶ್ರೀನಿವಾಸ್ ಕೆಲೋಜಿ. ಮಂಜುನಾಥ್ ವಾಸು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಚಿತ್ರಮಂದಿರವು ಪ್ರಥಮ ಪ್ರದರ್ಶನ ಸೇರಿದಂತೆ ಮಧ್ಯಾಹ್ನ 2 ಗಂಟೆಯ ಪ್ರದರ್ಶನಕ್ಕೆ ಗಂಗಾವತಿ ಸೇರಿದಂತೆ ಸುತ್ತಮುತ್ತಲಿನ ಆರ್ಯವೈಶ್ಯ ಸಮಾಜ ಬಾಂಧವರು ಹಾಗೂ ವಿವಿಧ ಸಮಾಜದ ಆಸ್ತಿಕ ಬಂಧುಗಳು ನಿರೀಕ್ಷೆಗೂ ಮೀರಿ ಆಗಮಿಸಿಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಚಿತ್ರದ ಬಗ್ಗೆ ವೀಕ್ಷಕರಿಂದ ಅತ್ಯುತ್ತಮವಾದ ಚಿತ್ರವಾಗಿದೆ ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು




