
ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಭಕ್ತರಿಂದ ೨೧ ವರ್ಷದಿಂದ ಪಾದಯಾತ್ರೆ

Devotees have been trekking to Sri Etum Kotri Mallaiah Temple for 21 years
ಯಲಬುರ್ಗಾ: ಪಟ್ಡಣದ ೪ ಮತ್ತು ೫ ನೇ ವಾರ್ಡಗಳ ಮದ್ಯ ಭಾಗದಲ್ಲಿ ಬರುವ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ಜ.೬ ರಂದು ಸಂಜೆ ೭ ಗಂಟಗೆ ಸಹಸ್ರ ಬಿಲ್ವಾರ್ಚನೆ ,ಪೂಜಾ ವಿದಿ,ವಿಧಾನಗಳಿಂದ ಸಮಿತಿಯವರಿಂದ ಹಾಗು ಭಕ್ತರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಸಮಿತಿಯವರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಫಕೀರಪ್ಪ ಗಾಣಗೇರ, ಮಹೇಶ ಭೂತೆ, ಮಲ್ಲಿಕಾರ್ಜುನಗೌಡ ಪೋಲಿಸ್ ಪಾಟಿಲ್, ರಾಮಣ್ಣ ನೆರೇಗಲ್ಲ, ತಿಪ್ಪಣ್ಣ ಉಪ್ಪಾರ, ಮಲ್ಲಿಕಾರ್ಜುನ ಸಾದರಖಾನ, ವಿಜಯ ಉಪ್ಪಾರ, ಮಲ್ಲಪ್ಪ ಭೂತೆ, ಬಸವರಾಜ ಕೊಪ್ಪಳ, ಶರಣಪ್ಪ ಎನ್. ಭಾವಿಕಟ್ಟಿ, ನಾಗರಾಜ ದಿವಟರ, ಈಶಪ್ಪ ಬನ್ನಿಕೊಪ್ಪ, ಅರ್ಚಕರಾದ ರುದ್ರಮ್ಮ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು. ಈ ವೇಳೆ ಗೊರವಯ್ಯ ನಾಗಪ್ಪ ಇಟಗಿ, ಶರಣ ಸಾಹಿತ್ಯ ಪರಿಷತ್ತು ಯಲಬುರ್ಗಾ ತಾಲೂಕ ಅದ್ಯಕ್ಷ ಸಂಗಪ್ಪ ಕೊಪ್ಪಳ, ಕಿಸಾನ್ ಸಮಿತಿ ಯ. ತಾಲೂಕು ಅದ್ಯಕ್ಷ ದಾನನಗೌಡ ತೊಂಡಿಹಾಳ,ಕರ್ನಾಟಕ ರಾಜ್ಯ ರೈತ ಸಂಘದ ಯ. ತಾಲ್ಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಹಾಗು ಸಮಾಜ ಸೆವಕರಾದ ಸುರೇಶಗೌಡ ಶಿವನಗೌಡ್ರ, ಶಿವಪ್ಪ ಕೊಪ್ಪಳ ಇವರನ್ನ ಶ್ರೀ ಏಳು ಕೋಟಿ ಮಲ್ಲಯ್ಯ ಸಮಿತಿಯವರು ಸನ್ಮಾನಿಸಿದರು. ಬಳಿಕ ಭಕ್ತರು ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯಗಳೊಂದಿಗೆ ಭಕ್ತರೆಲ್ಲರು ಪ್ರಾರ್ಥಿಸಿಕೊಂಡು ,ರೈತರಿಗೆ, ಸರ್ವಜನತೆಗೆ ಮಳೆ ಬೆಳೆ ಚೆನ್ನಾಗಿ ಲಭಿಸಲಿ ಎಂದು ಮಕರ ಸಂಕ್ರಾಂತಿ ಹಬ್ಬದಂಗವಾಗಿ ಯಾದಗಿರಿ ಜಿಲ್ಲೆಯಲ್ಲಿ ಬರುವ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಯಲಬುರ್ಗಾ, ಮೂಧೋಳ,ಮಾರನಾಳ,ಜಿ.ವೀರಾಪೂರ ,ಹನುಮಾಪೂರ ಹಾಗು ಸುತ್ತಮುತ್ತಲಿನ ನೂರಾರು ಭಕ್ತರು ಪಾದಯಾತ್ರೆ ಕೈ ಗೊಂಡರು.




