
ಗುಂಟಮಡು ಗ್ರಾಮದಲ್ಲಿ ಕರವೇ ಗ್ರಾಮ ಘಟಕ ಉದ್ಘಾಟನೆ
Karave Village Unit inaugurated in Guntamadu village
ಯಲಬುರ್ಗಾ : ತಾಲೂಕಿನ ಹಿರೇವಂಕಲಕುಂಟಾ ಹೋಬಳಿಯ ಬೋದೂರು ಗ್ರಾಪಂ ವ್ಯಾಪ್ತಿಗೆ ಬರುವ ಗುಂಟುಮಡು ಗ್ರಾಮದಲ್ಲಿ ಕರವೇ ಗ್ರಾಮ ಘಟಕ ಉದ್ಘಾಟಿಸಲಾಯಿತು.
ಗ್ರಾಮ ಘಟಕದ ನಾಮಫಲಕವನ್ನು ಗ್ರಾಪಂ ಅಧ್ಯಕ್ಷ ದ್ಯಾಮಣ್ಣ ಮೂಲಿ ಹಾಗೂ ನಿವೃತ್ತ ಶಿಕ್ಷಕ ಆರ್. ಪಾಪಣ್ಣ ಮೇಷ್ಟ್ರು ಅನಾವರಣಗೋಳಿಸಿದರು.
ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಶಿವರಾಜ ಉಳ್ಳಾಗಡ್ಡಿ, ತಾಲೂಕಾ ಕಾರ್ಯಾಧ್ಯಕ್ಷ ಶಂಕರ್ ಮೂಲಿ, ಹಿರಿಯ ಸಂಘಟನೆಗಾರ ಈಶಪ್ಪ ಮೂಲಿಮನಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ ಕುಲಕರ್ಣಿ, ಉಪಾಧ್ಯಕ್ಷ ವಿರೇಂದ್ರ ಈಳಿಗೇರ, ಕೂಕನೂರು ತಾಲೂಕಾ ಅಧ್ಯಕ್ಷ ಮಂಜುನಾಥ ಶಿಡ್ನಳ್ಳಿ, ಹೋಬಳಿ ಅಧ್ಯಕ್ಷ ಮಂಗಳೇಶ, ಹಿರೇವಂಕಲಕುಂಟಾ ಹೋಬಳಿ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಮರಕಟ್ಟು, ಸಂಜೆಯ್ ದಾಸ್, ಯಂಕೋಬ ಬಮ್ಮಸಾಳ, ಮಲ್ಲೇಶ ಯಡ್ಡೋಣಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘಟನೆಯ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಗ್ರಾಪಂ ಸದಸ್ಯರಾದ ಯಮನೂರಪ್ಪ ಹಗೇದಾಳ, ಬಾಲಪ್ಪ ಚೌಡ್ಕಿ, ಎಲ್.ಐ.ಸಿ. ಏಜೆಂಟರಾದ ಯಮನೂರಪ್ಪ ಕುರ್ನಾಳ, ಶರಣಪ್ಪ ಪವಾಡಿ, ಶರಣಯ್ಯ ಗ್ಯಾನಪ್ಪಯ್ಯನವರ್, ಹನಮಂತಪ್ಪ ಗೋಸಲ್, ಕನಕಪ್ಪ ಪೋ. ಪಾಟೀಲ್, ಸಣ್ಣ ಗಿರೇಗೌಡ ಪೋ.ಪಾಟೀಲ್, ತಾಯಪ್ಪ ತಳವಾರ, ಪಾಪಣ್ಣ ಮೇಷ್ಟ್ರು ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶರಣಯ್ಯ ಗ್ಯಾನಪ್ಪಯ್ಯನವರು ವಹಿಸಿದ್ದರು, ಈ ವೇಳೆ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕರವೇ ಪದಾಧಿಕಾರಿಗಳು : ತಾಯಪ್ಪ ಅಳ್ಳಳ್ಳಿ (ಹಿರೇವಂಕಲಕುಂಟಾ ಹೋಬಳಿ ಗೌರವ ಅಧ್ಯಕ್ಷ), ತಾಯಪ್ಪ ಟಿ. ಮನ್ನಾಪೂರ (ಹೋಬಳಿ ಅಧ್ಯಕ್ಷ), ಲಂಕೇಶ ಪೋ.ಪಾಟೀಲ್ (ಗೌರವಾಧ್ಯಕ್ಷ), ತಾಯಪ್ಪ ತಳವಾರ (ಅಧ್ಯಕ್ಷ), ಮಂಜುನಾಥ ಮೆಂಟಗೇರಿ(ಉಪಾಧ್ಯಕ್ಷ), ರಮೇಶ ಕೆ. ಹುಲೆಗುಡ್ಡ (ವಿದ್ಯಾರ್ಥಿ ಘಟಕದ ಅಧ್ಯಕ್ಷ), ಮುತ್ತು ನಾಗರಾಳ (ಪ್ರಧಾನ ಕಾರ್ಯದರ್ಶಿ), ರಮೇಶ ಪೋ.ಪಾಟೀಲ್ (ಸಂಚಾಲಕ), ನಾಗರಾಜ ಟೆಂಗುಂಟಿ (ಕಾರ್ಯದರ್ಶಿ), ವೆಂಕಟೇಶ ನಾಗರಾಳ (ಖಜಾಂಚಿ), ಆಯ್ಕೆಯಾಗಿದ್ದಾರೆ.





