
ನಗರ ಸಭೆಯ ಅಧಿಕಾರಿಗಳ ವಿರುದ್ಧ ಹೆಚ್ ಆರ್ ಎಸ್ ಕಾಲೋನಿ ನಿವಾಸಿಗಳಿಂದ ಹಿಡಿ ಶಾಪ


HRS Colony residents curse city council officials
ಗಂಗಾವತಿ: ಇಲ್ಲಿನ ನಗರಸಭೆ ವ್ಯಾಪ್ತಿಯ ಈ ಹಿಂದಿನ 21ನೆಯ ವಾರ್ಡ್ ಹಾಗೂ ಪ್ರಸ್ತುತ 31ನೆಯ ವಾರ್ಡ್ ಆಗಿರುವ ಎಚ್ ಆರ್ ಎಸ್ ಕಾಲೋನಿಯ ನಿವಾಸಿಗಳು ನಗರಸಭೆಯ ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿ ಕಿಡಿಕಾರಿದರು.
ಮಂಗಳವಾರದಂದು ಅಲ್ಲಿನ ಆ ವ್ಯವಸ್ಥೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಚರಂಡಿಯನ್ನು ಸ್ವಚ್ಛ ಗೊಳಿಸದ ಪ್ರಯುಕ್ತ ಮಗುವೊಂದು ಚರಂಡಿಗೆ ಬಿದ್ದು ಸಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದೆ. ಚರಂಡಿಯಲ್ಲಿ ನೀರುತುಂಬಿ ಆಶ್ರಯ ಯೋಜನೆಯ ನಿವಾಸಿಗಳ ಮನೆಯೊಳಗೆ ನುಗ್ಗಿ ರೋಗ ರುಜಿನಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಕುರಿತು ಹಲವು ಬಾರಿ ನಗರ ಸಭೆಗೆ ಮನವಿ ಪತ್ರ ಸಲ್ಲಿಸಿದರು ಸಹ ಕಣ್ಣು.ಕಿವಿ.ಬಾಯಿ ಇಲ್ಲದ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮುಂದಿನ ನಗರಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು.ಮೂರು ದಿನ ಒಳಗೆ ಚರಂಡಿ ಸ್ವಚ್ಛತೆ ಮುಂದಾಗದಿದ್ದರೆ ನಗರ ಸಭೆಯ ಆವರಣದ ಮುಂದೆ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಲ್ಲಿನ ಚರಂಡಿಯ ಬಗ್ಗೆ ಗಮನಹರಿಸಿದಾಗ ಅವೈಜ್ಞಾನಿಕತೆಯಿಂದ ಕಾಮಗಾರಿ ನಡೆಸಿದ್ದು ಕಂಡುಬಂದಿತ್ತು. ಚರಂಡಿ ನೀರು ಸಮರ್ಪಕವಾಗಿ ಮುಂದೆ ಹೋಗದೆ ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ನೀರು ರಸ್ತೆ ಬದಿಯಲ್ಲಿ ಬರಲು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಉಮಾದೇವಿ.ಪದ್ದಮ್ಮ ಹೇಮ. ಶೈನಾಜ್. ಶಂಕ್ರಮ್ಮ. ಶಾಂತ. ಪಾರ್ವತಮ್ಮ. ರೇಣುಕಾ. ಮುನ್ನಿ.ನೇತ್ರಾ. ಗೌರಮ್ಮ.ಜ್ಯೋತಿ.ಮಂಗಲಪ್ಪ.ಯಮನೂರ. ಚಂದ್ರು ಕುಮಾರ. ಮಂಜುನಾಥ. ಸೇರಿದಂತೆ ನಿವಾಸಿಗಳು ಇದ್ದರು.




