
ಹಂಪಿ ಕನ್ನಡ ವಿ.ವಿ ಎಂ.ಪಿ.ಎ ಸ್ನಾತಕೋತ್ತರ
ಸಂಗೀತ ಪದವಿಯಲ್ಲಿಕುಮಾರಿ ರಂಜನಿ ಆರತಿ
ಪ್ರಥಮ ರ‍್ಯಾಂಕ್.

Hampi Kannada VV MPA Post GraduateKumari Ranjani Aarti in music degreeFirst rank.
ಗಂಗಾವತಿ: ಹಂಪಿ ಕನ್ನಡ ವಿಶ್ವವಿದ್ಯಾಯದ ೨೦೨೫-೨೬ನೇ ಸಾಲಿನಸ್ನಾತಕೋತ್ತರ ಸಂಗೀತ ಪದವಿಯ ಫಲಿತಾಂಶದಲ್ಲಿ ನಗರದ
ಕುಮಾರಿ ರಂಜನಿ ಆರತಿ ತಂ. ದಿ, ಪರಸಪ್ಪ ಆರತಿ ಅವರುವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕೊಪ್ಪಳ ಜಿಲ್ಲೆಹಾಗೂ ಗಂಗಾವತಿಗೆ ಕೀರ್ತಿ ತಂದಿರುತ್ತಾರೆ.
ಗಂಗಾವತಿ ನಗರದ ನಿವಾಸಿಯಾದ ಕುಮಾರಿ ರಂಜನಿ ಆರತಿ ಅವರುಮೂಲವಾಗಿ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದ ಇವರಿಗೆ ಸಂಗೀತಗುರುಗಳಾದ ಡಾ. ತಿಮ್ಮಣ್ಣ ಭೀಮರಾಯ ಅವರು ಸಂಗೀತ ಶಿಕ್ಷಣನೀಡಿ, ಶಾಸ್ತ್ರೀ ಯ ಸಂಗೀತಾಭ್ಯಾಸಕ್ಕೆ ಒತ್ತು ಕೊಡಲು ತಿಳಿಸಿದ್ದರಿಂದಸದರಿ ರಂಜನಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಎ
(ಹಿಂದೂಸ್ತಾನಿ ಗಾಯನ) ದಲ್ಲಿ ದಾಖಲಾತಿ ಪಡೆದು, ಪ್ರಸಕ್ತ ಸಾಲಿನಫಲಿತಾಂಶದಲ್ಲಿ ವಿ.ವಿ ಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.
ಕುಮಾರಿ ರಂಜನಿ ಆರತಿಯವರಿಗೆ ಹಂಪಿ ಕನ್ನಡ. ವಿ.ವಿಕುಲಪತಿಗಳು, ಆಡಳಿತ ವರ್ಗದವರು, ಇನ್ನೋರ್ವ ಸಂಗೀತಗುರುಗಳಾದ ಪಂ. ವಿರುಪಾಕ್ಷಪ್ಪ ಇಟಗಿ, ತಾಯಿಯವರಾದ ರತ್ನಮ್ಮ
ಆರತಿ, ವಿಶೇಷ ಪೋಷಕರಾದ ದಲಿತ ಸಂಘರ್ಷ ಸಮಿತಿಯಸಂಸ್ಥಾಪಕ ಡಾ. ಆರ್.ಮೋಹನರಾಜ್, ಬಂಧು-ಬಳಗದವರು,ಗಂಗಾವತಿಯಸಾರ್ವಜನಿಕರುಅಭಿನಂದಿಸಿಹರ್ಷವ್ಯಕ್ತಪಡಿಸಿದ್ದಾರೆ.




