
ಅರಣ್ಯ ಇಲಾಖೆಯ ಅಧಿಕಾರಿಗಳ ಬೆಜಾವ್ದಾರಿಯಿಂದ ಕಾಡಾನೆ ದಾಳಿಗೆ ಜೋಳದ ಬೆಳೆ ನಾಶ ರೈತನ ಕಂಗಾಲು.

Farmers’ grief as wild elephants attack corn crop due to negligence of forest department officials

ವರದಿ: ಬಂಗಾರಪ್ಪ .ಸಿ .
ಹನೂರು : ಇತ್ತಿಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಪ್ರಾಣಿಗಳು ಲಗ್ಗೆ ಇಡುತ್ತಿದ್ದು ಮುಂದೊಂದು ದಿನ ಮಾನವನಿಗೂ ಮತ್ತು ಕಾಡು ಪ್ರಾಣಿಗಳಿಗೂ ಸಂಘರ್ಷವಾಗುವತ್ತ ಸಾಗುತ್ತದೆ ಅದಕ್ಕೆಲ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳ ಸೋಮಾರಿತನವೆ ಎನ್ನಲಾಗಿದೆ ಎಂದು ರೈತ ಮುಖಂಡರಾದ ಹನೂರು ತಾಲ್ಲೂಕು ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ ತಿಲಿಸಿದರು.
ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಪಾಳ್ಯದ ಜಮೀನಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡು ಗ್ರಾಮದ ರೈತರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಮತ್ತೇ ಅದೇ ಜಮೀನಿಗೆ ಸೋಮವಾರ ರಾತ್ರಿ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಹೂಗ್ಯ ಗ್ರಾಮದ ರೈತ ಚಿನ್ನಪ್ಪ ಎಂಬುವರು ಭಾನುವಾರ ರಾತ್ರಿ ಕಾವಲು ಕಾಯಲು ಜಮೀನಿಗೆ ತೆರಳಿದ್ದ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಕಾಡಾನೆಯೊಂದು ಮುಸುಕಿನ ಜೋಳದ ಫಸಲನ್ನು ತಿಂದು, ತುಳಿದು ನಾಶಪಡಿಸಿದ್ದು ಅಲ್ಲದೆ ಜತೆಗೆ ರೈತನ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಕಾಲು ಮುರಿತಕ್ಕೊಳಗಾದ ಚಿನ್ನಪ್ಪ ಅವರು ತಮಿಳುನಾಡಿನ ಹಂದಿಯೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಿರುವಾಗ ರಾತ್ರಿ ಕಾಡುಪ್ರಾಣಿಗಳು ಇದೇ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿವೆ. ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಡದಂತೆ ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ತಿಳಿಸಿದರು.




