
ಗ್ರಾಮಗಳ ಅಭಿವೃದ್ಧಿಗೆ ಮೊದಲ ಪ್ರಯ್ನವೆ ರೈತ ಸಂಘಗಳಿಂದ :ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ.

The first step towards the development of villages is from the farmers' associations: Goudegowda, district vice-president of the farmers' association.
ವರದಿ: ಬಂಗಾರಪ್ಪ .ಸಿ.
ಹನೂರು : ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿಯು ಸಹ ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಮಾಡುವ ಮೂಲಕ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ತಿಳಿಸಿದರು.
ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯ ರೈತ ಸಂಘಟನೆ ಸಾಕಷ್ಟು ವರ್ಷಗಳಿಂದ ಅನೇಕ ಚಳುವಳಿಗಳನ್ನ ಮಾಡಿಕೊಂಡು ಬಂದಿದೆ. ಚಳುವಳಿಗಳ ಫಲವಾಗಿಯೇ ಇಂದು ಅನೇಕ ಸೌಲಭ್ಯಗಳನ್ನು ನಾವು ಅನುಭವಿಸುತ್ತಿದ್ದೇವೆ. ಅದರಂತೆ ಹನೂರು ತಾಲೂಕಿನಲ್ಲೂ ಸಹ ಕಾಡಂಚಿನ ಗ್ರಾಮದ ವರೆಗೂ ಸಹ ನಾವು ಸೌಲಭ್ಯಗಳನ್ನು ತಲುಪಿಸುವಲ್ಲಿ ಕಾರ್ಯೊನ್ಮುಖರಾಗಿದ್ದೇವೆ. ಜೊತೆಗೆ ಇಂತಹ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕಗಳು ಹೆಚ್ಚೆಚ್ಚು ಉದ್ಘಾಟನೆಗಳಾಗಲಿ ಹೆಚ್ಚೆಚ್ಚು ಸದಸ್ಯರು ಸೇರ್ಪಡೆಗೊಳ್ಳಲಿ ಆ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಲಿ ಎಂದರು.
ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಶಾಲುಗಳನ್ನು ದೀಕ್ಷೆ ಪಡೆದಿದ್ದೀರಿ. ಈ ಶಾಲುಗಳು, ಯಾವತ್ತಿಗೂ ಕೆಳಗಿಳಿಸಬಾರದು. ಜೊತೆಗೆ ತುಂಬಾ ಮುಖ್ಯವಾಗಿ ಈ ಸಾಲುಗಳನ್ನ ಧರಿಸಿದ ತಾವು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಬಾರದು. ಅಂತಹ ದುಷ್ಪೃತ್ಯಗಳಲ್ಲಿ ಭಾಗಿಯಾದರೆ ಸಂಘ ಜವಾಬ್ದಾರಿಯಾಗಿರುವುದಿಲ್ಲ. ತಮ್ಮ ಕಷ್ಟ ಸುಖಗಳಿಗೆ ನ್ಯಾಯಯುತವಾದ ಬೇಡಿಕೆಗಳಿಗೆ ಸಂಘ ಸದಾ ನಿಮ್ಮೊಟ್ಟಿಗೆ ಇರುತ್ತದೆ. ನಿಮ್ಮ ಗ್ರಾಮದಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಅದಕ್ಕೂ ಮಿಗಿಲಾಗಿ ನೀವೆಲ್ಲರೂ ಇಂದು ಇರುವಂತಹ ಉತ್ಸಾಹವನ್ನೇ ಪ್ರತಿನಿತ್ಯ ಉಳಿಸಿಕೊಂಡು ಬೆಳೆಸಬೇಕು ಎಂದರು.
ಗ್ರಾಮದಲ್ಲಿನ ಸಮಸ್ಯೆಗಳು : ನೂತನವಾಗಿ ಗ್ರಾಮ ಘಟಕ ಆರಂಭದ ದಿನವೇ ಗ್ರಾಮದಲ್ಲಿ ಸಾಕಷ್ಟು ವರ್ಷಗಳಿಂದ ಸ್ಮಶಾನವಿಲ್ಲದೆ ಜನರು ಪರಿತಪಿಸುವಂತಾಗಿದೆ. ಅಲ್ಲದೆ ಕುಡಿಯುವ ನೀರು ಸ್ವಂತ ಅಂಗನವಾಡಿ ಕೇಂದ್ರ ಇಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದೇವೆ. ಇದೀಗ ಈ ಸಂಘಟನೆ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ದಾಸ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಗೌಡ, ಜಿಲ್ಲಾ ಕಾಯಂ ಸದಸ್ಯರಾದ ರವಿ ನಾಯ್ಡು, ಶಿವಮಲ್ಲು, ಅಜ್ಜೀಪುರ ಘಟಕದ ಗೌರವಾಧ್ಯಕ್ಷ ರಾಜಣ್ಣ, ತವಮಣಿ, ಕೂಡಲೂರು ವೆಂಕಟೇಶ್, ಮುತ್ತುಸ್ವಾಮಿ, ಮಾದೇಶ,ಮಾದೇವು, ವೇಲು ಸ್ವಾಮಿ, ಗುಂಡ್ಲುಪೇಟೆ ಘಟಕದ ಅಧ್ಯಕ್ಷರಾದ ದಿಲೀಪ್ ಸೇರಿದಂತೆ ನೂರಾರು ರೈತರು ಇದ್ದರು.




