
ಪ್ರಶಸ್ತಿ ಹಾಗೂ ಸನ್ಮಾನಗಳಿಂದ ಶಿಕ್ಷಣ ಕ್ಷೇತ್ರದ ಜವಾಬ್ದಾರಿ ಹೆಚ್ಚಿಸಿದೆ-ಜಗನ್ನಾಥ್ ಆಲಂಪಲ್ಲಿ

Awards and honors have increased the responsibility of the education sector - Jagannath Alampalli
ಗಂಗಾವತಿ.. ನಗರದ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ದೇವಸ್ಥಾನ ಟ್ರಸ್ಟ್ ಕಮಿಟಿಯ ನೇತೃತ್ವದಲ್ಲಿ ಶುಕ್ರವಾರದಂದು ವಿಪ್ರ ಸಮಾಜದ ಸಾಧಕರುಗಳಾದ ಶಿಕ್ಷಣ ತಜ್ಞ ಎಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಹಾಗೂ ನೂತನ ನೋಟರಿಯಾಗಿ ಆಯ್ಕೆಗೊಂಡ ಭೀಮಾಚಾರ್ ದೊಟಿ ಹಾಳ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಜಗನ್ನಾಥ ಆಲಂಪಲ್ಲಿ ಮಾತನಾಡಿ ಶಿಕ್ಷಕರ ತರಬೇತಿಯನ್ನು ಮುಗಿದ ಬಳಿಕ ಅನುದಾನಿತ ಶಾಲೆಗಳಿಗೆ ಶಿಕ್ಷಕರಾಗಿ ಸೇವಿಸಲು ಪ್ರಯತ್ನಿಸಿದರು ಅದು ಫಲಪ್ರದವಾಗಲಿಲ್ಲ ಬಳಿಕ ತಮ್ಮ ಸಹೋದರ ನರ ಸಿಂಹ ಮೂರ್ತಿ ಆಲಂಪಲ್ಲಿ ಅವರ ಮಾರ್ಗದರ್ಶನದ ಮೇರಿಗೆ ಸ್ವತಂತ್ರ ಶಿಕ್ಷಣ ಸಂಸ್ಥೆ ಒಂದು ಸ್ಥಾಪಿಸಿ ದಿವಂಗತ ಕೃಷ್ಣಚಾರ ನಿವಾಸದಲ್ಲಿ 108 ವಿದ್ಯಾರ್ಥಿ ಗಳೊಂದಿಗೆ ಆರಂಭಗೊಂಡ ಶಿಕ್ಷಣದ ಕ್ರಾಂತಿ ಇಂದು ಸರ್ ಎಂ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ 1,800 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಹರಿ ವಾಯು ಗುರುಗಳ ಹಾಗೂ ಕುಟುಂಬಸ್ಥರ ಸಮಾಜ ಬಾಂಧವರ ಮತ್ತು ಸ್ನೇಹಿತರ ತುಂಬು ಸಹಕಾರವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನೂತನ ನೋಟರಿ ಆಗಿ ನೇಮಕ ಗೊಂಡ ಭೀಮರಾವ್ ಸನ್ಮಾನ ತಗೊಂಡು ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುರುಳಿಧರ್ ಮಾತನಾಡಿ. ಪ್ರತಿವರ್ಷದಂತೆ ಧನುರ್ಮಾಸ ಆಚರಣೆಯ ಜೊತೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸುತ್ತಾ ಬಂದಿರುವ ಜಗನ್ನಾಥ ಅ ಲಂಪಲ್ಲಿ ಕುಟುಂಬದವರು ಅತ್ಯಂತ ದೈವ ಭಕ್ತರು ಎಂದು ಹೇಳಿದರು ಜೊತೆಗೆ ಜಗನ್ನಾಥ್ ಆಲಂಪಲ್ಲಿ ಅವರ ವಿವಾಹ ಮಹೋತ್ಸವದ ಆಚರಣೆಯು ಒಂದಾಗಿದ್ದು ಗುರುಗಳು ಸೇರಿದಂತೆ ಹಿರಿಯರ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ. ರಾಘವೇಂದ್ರ ಮೇಗರ್. ಆನಂದ ವೆಂಕಟೇಶ್. ಪ್ರಹ್ಲಾದ. ಗುರುರಾಜ್ ಚಿ ರ್ಚನ ಗುಡ್ಡ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು




