
ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ಕೈ ಬಿಡುವಂತೆ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯ.

The All India Development Struggle Committee has demanded that teachers be removed from the work of revising the voter list.

ಗಂಗಾವತಿ ,31:ನಗರದ ತಾಲೂಕು ಸೌಧ ಮುಂದೆ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿ ಗ್ರೇಡ್-2-ತಹಶೀಲ್ದಾರ್ ಮಹಾOತಗೌಡ್ರ ಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಮಾತನಾಡಿ ಶಿಕ್ಷಕರು ಬೋಧನೆ ಮಾಡಲು ಮಾತ್ರ ಬಳಸಬೇಕು ಪರಿಷ್ಕರಣೆ ಕಾರ್ಯದಿಂದ ಕೈ ಬಿಡಬೇಕೆಂದು ಚುನಾವಣೆ ಆಯೋಗವನ್ನು ಒಟ್ಟಾಯಿಸಿದರು.ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು, ವಿಧಾನ ಸಭೆ, ಲೋಕಸಭೆ ಚುನಾವಣೆಗಳು ಪ್ರತಿ ಹಂತದಲ್ಲಿಯೂ ನಡೆಯುತ್ತಲೇ ಇರುತ್ತವೆ.ಇದು ನಿರಂತರ ವರ್ಷ ಪೂರ್ತಿ ಮತದಾರರ ಪಟ್ಟಿ ಕಾರ್ಯ ನಡೆಯುತ್ತದೆ ಈ ಕಾರ್ಯಕ್ಕೆ ಸರಕಾರಿ ಶಾಲೆಯ ಶಿಕ್ಷಕರನ್ನು ನಿಯೋಜನೆ ಮಾಡುತ್ತಿರುವದರಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕಲಿಕೆ ಹಿನ್ನಡೆಯಾಗುತ್ತಿದೆ. ಒತ್ತಡದರಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಪರೀಕ್ಷಾ ಸಮಯ ಸಮೀಪಿಸು ತ್ತಿದ್ದರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವದು ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಏನು ಪಾಪ ಮಾಡಿದ್ದಾರೆ ಎನ್ನುವ ಭಾವನೆ ಉಂಟಾಗುತ್ತದೆ. ಬಡವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಷ್ಟಪಟ್ಟು ಸರ್ಕಾರಿ ಶಾಲೆಗೆ ಸೇರಿಸಿ ಆತಂಕ ಪಡುತ್ತಿದ್ದಾರೆ. ಶಿಕ್ಷಕರ ಅನ್ಯ ಕೆಲಸದ ಕಾರಣದಿಂದ ಸರ್ಕಾರಿ ಶಾಲೆಗೆ ಸೇರಿಸಲು ಅನೇಕ ಪಾಲಕರು ಹಿಂದೇಟು ಹಾಕುತ್ತಿದ್ದಾರೆ.ಸರ್ಕಾರಿ ಶಾಲೆಗಳು ಉಳಿದರೆ ಬಡವರ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಜೀವನ ರೂಪಿಸಿಕೊಳ್ಳುವದು ಶಿಕ್ಷದಿಂದ ಮಾತ್ರ ಸಾಧ್ಯ. ಹಾಗೂ ಕನ್ನಡ ಭಾಷೆಯ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ಕೈಬಿಡಬೇಕು. ಇತ್ತೀಚಿಗೆ ತಂತ್ರಜ್ಞಾನ ಮುಂದುವರಿದ ಭಾಗವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ, ಜಾತಿ,ಆದಾಯ, 371(j) ವಿವಿಧ ಪರೀಕ್ಷೆಗಳು ಮತ್ತುವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ. ಅದೇ ಮಾದರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೂಡ ಆನ್ ಲೈನ್ ಮೂಲಕ ಕಾರ್ಯ ಮಾಡಲು ಕ್ರಮಕೈಗೊಳ್ಳಬೇಕು.ಇಲ್ಲವೇ ವಿವಿಧ ಇಲಾಖೆಗಳಲ್ಲಿ ಮಹತ್ವದ ದಾಖಲೆಗಳನ್ನು ನಿರ್ವಹಿಸಲು ಕOಪ್ಯೂಟರ್ ಡಾ ಟಾ ಆಪೇರೆಟ್ ರನ್ನು ನೇಮಕ ಮಾಡಿದಂತೆ ಅಥವಾ ಪದವಿಧರ ನಿರುದ್ಯೋಗಿಗಳನ್ನು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನೇಮಕ ಮಾಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಯಾಗುವುದಲ್ಲದೆ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೂ ಅನುಕೂಲವಾಗುತ್ತದೆ. ಈ ಕಾರ್ಯದಿಂದ ಶಿಕ್ಷಕರನ್ನು ಕೈಬಿಡದಿದ್ದರೇ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಹಾಗೂ ವಿವಿಧ ಸಂಘಟನೆಗಳೊಂದಿಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ತಿಳಿಸಿದರು.ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಬಸವರಾಜ್ ನಾಯಕ, ಮಂಜುನಾಥ ಚನ್ನಾದಾಸರ, ಅರವಿಂದ್ ಯೋಗಿ, ಮೇಘರಾಜ್, ಜಂಬಯ್ಯ ಸ್ವಾಮಿ, ನಾಗರಾಜ್, ಹನುಮೇಶ್, ಗಿರೀಶ್, ವೆಂಕಟೇಶ್, ಶ್ರೀ ರಾಮ, ಮತ್ತಿತರರು ಇದ್ದರು.




