
ಎಚ್ ಎನ್ ಪ್ರಶಸ್ತಿಗೆ ಭಾಜನರಾದ ಲಿಟಲ್ ಹಾರ್ಟ್ ಸ್ಕೂಲ್ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಅವರಿಗೆ ಆಡಳಿತ ಮಂಡಳಿ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಅಭೂತಪೂರ್ವ ಸನ್ಮಾನ

Little Heart School Secretary Jagannath Alampalli, who received the HN Award, received an unprecedented honor from the management board, teaching staff, non-teaching staff and school children.


ಯಾದಗಿರಿ: ಡಿಸೆಂಬರ್ 28 29 ಮತ್ತು 30ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಐದನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಿಂದ ಶ್ರೀ ಎಚ್ ಎನ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಾಲೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಅವರಿಗೆ ಲಿಟಲ್ ಹಾರ್ಟ್ಸ್ ನ ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಈ ದಿನ ಶಾಲೆಯಲ್ಲಿ ಅಭೂತಪೂರ್ವ ವಾಗಿ ಸ್ವಾಗತಿಸಿ ಪಟಾಕಿ ಸಿಡಿಸಿ ಸನ್ಮಾನಿಸಿ ತುಂಬಾ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಈ ಸನ್ಮಾನ ಸಮಾರಂಭದಲ್ಲಿ ಶಾಲೆಯ ಖಜಾಂಚಿಗಳಾದ ಶ್ರೀ ಪ್ರಭಾಕರ್ ಚೆನ್ನುಪಾಟಿ ಮುಖ್ಯೋಪಾಧ್ಯಾಯನೀ ಶ್ರೀಮತಿ ಪ್ರಿಯಾ ಕುಮಾರಿ ಪಾಲಕರಾದ ಶ್ರೀ ಮಲ್ಲಿಕಾರ್ಜುನ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕಿಯರು ಆಯಗಳು ವಾಚ್ಮನ್ ಗಳು ಮಕ್ಕಳು ಜಗನ್ನಾಥ್ ಆಲಂಪಲ್ಲಿ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮದಿಂದ ಸನ್ಮಾನಿಸಿದರು.
ಶ್ರೀ ಪ್ರಭಾಕರ್ ಚೆನ್ನುಪಾಟಿ ಮಾತನಾಡಿ ಸತತ ಕಠಿಣ ಪರಿಶ್ರಮದಿಂದ ಯಾವುದೇ ಕೆಲಸವನ್ನು ಮಾಡಿದ ವ್ಯಕ್ತಿಗೆ ಈ ಸಮಾಜ ಖಂಡಿತ ಗುರುತಿಸುತ್ತದೆ ಆದ್ದರಿಂದ ಮಕ್ಕಳಿಗೆ ಕಷ್ಟಪಟ್ಟು ಓದಲು ಕರೆ ನೀಡಿದರು ಮುಖ್ಯೋಪಾಧ್ಯಾಯನಿ ಪ್ರಿಯಕುಮಾರಿ ಶಾಲೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಅವರ ಸಾಧನೆ ಕುರಿತು ಮಕ್ಕಳಿಗೆ ತಿಳಿಸಿದರು.
ಸನ್ಮಾನಿತರಾದ ಜಗನ್ನಾಥ್ ಆಲಂಪಲ್ಲಿ ಮಾತನಾಡಿ ತಮ್ಮ ಲಿಟಲ್ ಹಾರ್ಟ್ಸ್ ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಜೀವನದಲ್ಲಿ ತಾವು ಮತ್ತು ಪ್ರಿಯಾಕುಮಾರಿಯವರು ಈ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.
ಡಿಸೆಂಬರ್ 28 29 ಮತ್ತು 30ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಐದನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಿಂದಎಚ್ ಎನ್ ಪ್ರಶಸ್ತಿಗೆ ಭಾಜನರಾದ ಲಿಟಲ್ ಹಾರ್ಟ್ ಸ್ಕೂಲ್ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಅವರಿಗೆ ಆಡಳಿತ ಮಂಡಳಿ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಅಭೂತಪೂರ್ವ ಸನ್ಮಾನ ಶ್ರೀ ಎಚ್ ಎನ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಾಲೆಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಅವರಿಗೆ ಲಿಟಲ್ ಹಾರ್ಟ್ಸ್ ನ ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಈ ದಿನ ಶಾಲೆಯಲ್ಲಿ ಅಭೂತಪೂರ್ವ ವಾಗಿ ಸ್ವಾಗತಿಸಿ ಪಟಾಕಿ ಸಿಡಿಸಿ ಸನ್ಮಾನಿಸಿ ತುಂಬಾ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು




