
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ: ರಾಜ್ಯಶಾಸ್ತ್ರ ವಿಭಾಗದಿಂದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಾಗಾರ ಆಯೋಜನೆ

Dr. Manmohan Singh Bangalore City University: Department of Political Science organizes one-day special lecture workshop

ಬೆಂಗಳೂರು:ಡಿ.31: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ “21ನೇ ಶತಮಾನದಲ್ಲಿ ರಾಜಕೀಯ ವಿಜ್ಞಾನ ಸಂಶೋಧನೆ ಮತ್ತು ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನದ ನಡವಳಿಕೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ದಿನದ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ವೀಣಾದೇವಿ, ಹಿರಿಯ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ, ಡಾ.ನಾಗೇಶ ಕೆ.ಎಲ್. ಸಂಶೋಧಕರು, ಸದಸ್ಯರು ಲೋಕನೀತಿ, ನವದೆಹಲಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಆರ್.ಜಲಜಾ, ಉಪನ್ಯಾಸಕರಾದ ಡಾ. ರವಿಕುಮಾರ್ ಕೆ, ಡಾ.ಅಮರ್, ಡಾ ನಾಗರಾಜು, ಡಾ.ರಾಕೇಶ್, ಡಾ ಪ್ರಕಾಶ್, ಕುಮಾರಿ ಮಾನ್ಸಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.




