ಜನವರಿ 3ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಜನವರಿ 3ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

Walk-in interview in Koppal on January 3rd
 


ಕೊಪ್ಪಳ ಡಿಸೆಂಬರ್ 30 (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್‌ನ್ನು 2026ರ ಜನವರಿ 3 ರಂದು ಬೆಳಿಗ್ಗೆ 10 ರಿಂದ 1.30ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ (ಪಾಸ್ ಅಥವಾ ಫೇಲ್), ಪಿಯುಸಿ(ಪಾಸ್ ಅಥವಾ ಫೇಲ್), ಬಿ.ಕಾಂ, ಎಂಕಾಂ,  ಡಿ.ಫಾರ್ಮ್, ಬಿ.ಫಾರ್ಮ್, ಎಮ್.ಫಾರ್ಮ್, ಎಮ್.ಎಸ್‌ಸಿ-ಕೆಮಿಸ್ಟ್ರಿ, ಎಮ್.ಎಸ್‌ಸಿ-ಬಯೋಟೆಕ್, ಎಮ್.ಎಸ್‌ಸಿ-ಮೈಕ್ರೊಬಯೋಲಾಜಿ, ಬಿ.ಎಸ್‌ಸಿ-ಕೆಮಿಸ್ಟ್ರಿ, ಬಿ.ಎಸ್‌ಸಿ-ಬಯೋಟೆಕ್, ಬಿ.ಎಸ್‌ಸಿ-ಮೈಕ್ರೊಬಯೋಲಾಜಿ ಮುಗಿಸಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಆಸಕ್ತಿ 18 ರಿಂದ 32 ವರ್ಷದೊಳಗಿನ ನಿರುದ್ಯೋಗಿ ಪುರಷರು ಮತ್ತು ಮಹಿಳೆಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 3 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜ್ಯುಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mallikarjun

Share
Published by
Mallikarjun

Recent Posts

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ 300th birth anniversary of…

3 hours ago

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…

17 hours ago

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…

17 hours ago