
ಜುಮಲಾಪುರ ದಿವ್ಯಾಂಗರ ಸಮನ್ವಯ ಸಭೆ

Jumalapur Divyang Coordination Meeting

ಕುಷ್ಟಗಿ : ತಾಲೂಕಿನ ಜುಮಲಾಪುರ ಗ್ರಾಮ ಪಂಚಾಯಿತಿ ಯಲ್ಲಿ ದಿವ್ಯಾಂಗರ ವಿಶೇಷ ಸಮನ್ವಯ ಗ್ರಾಮ ಸಭೆ ನಡೆಯಿತು.
ಸೋಮವಾರ ದಿ. 30 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ತು ಗ್ರಾಮಗಳ ದಿವ್ಯಾಂಗರ ವಿಶೇಷ ಸಮನ್ವಯ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಕವಿತಾ ಪಾಟೀಲ ರವರು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರಪ್ಪ ನಾಯಕ ಮಾತನಾಡಿ ಶೇಕಡಾ 5% ಅನುದಾನ ಬಳಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಹಾಗೂ ಸೆಲ್ಕೋ ಫೌಂಡೇಶನ್ ಅವರ ಸಂಯೋಗದೊಂದಿಗೆ ಈಗಾಗಲೇ ಪಂಚಾಯತ್ ವ್ಯಾಪ್ತಿಯ ಐವತ್ತು ವಿಶೇಷ ಚೇತನರಿಗೆ ಟೆಲರಿಂಗ್ ಮಷೀನ್ ಸೇರಿದಂತೆ ಸೋಲಾರ್ ಬಲ್ಬ್ ಗಳನ್ನು ನೀಡಲಾಗಿದೆ ಎಂದರು.
ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಆದಪ್ಪ ಮಾಲಿಪಾಟೀಲ ಮಾತನಾಡಿ ಅಂಗವಿಕಲರ ಸಬಲಿಕರಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಂಘ ಸಂಸ್ಥೆಗಳು ವಿಶೇಷ ಚೇತನ ವ್ಯಕ್ತಿಗಳ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿದ್ದು ಶಿಕ್ಷಣ ಉದ್ಯೋಗ ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಪಡೆದುಕೊಂಡು ನಾವು ವಿಕಲಾಂಗವನ್ನು ಮರೆತು ಸ್ವಾಭಿಮಾನದ ಬದುಕು ಸಾಗಿಸಬೇಕು, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನಾವು ಕೂಡ ಸಕ್ರಿಯವಾಗಬೇಕು. ಇಲಾಖೆಯ ಆಧಾರ ಯೋಜನೆ, ಯಂತ್ರ ಚಾಲಿತ ವಾಹನ ಸೇರಿದಂತೆ ಸಾಧನ ಸಲಕರಣೆ ವಿಧ್ಯಾರ್ಥಿ ವೇತನ, ಬ್ರೖಲ್ ವಾಚ್, ವಾಕರ್ ಮುಂತಾದ ಸೌಲಭ್ಯ ಪಡೆದು ಕೊಳ್ಳಬೇಕು, ನಮ್ಮ ಪಂಚಾಯಿತಿ ಸದಾ ನಮ್ಮ ಬೆಂಬಲಕ್ಕೆ ನಿಂತಿರುವುದು ತಮಗೂ ತಿಳಿದ ವಿಚಾರ ಎಂದರು.
ಗ್ರಾಮ ಪಂಚಾಯತ್ ಸದಸ್ಯರು ವಿಶೇಷ ಚೇತನರು ಆದ ಶರಣಪ್ಪ ನಾಯಕ ಮಾತನಾಡಿ ಶೖಕ್ಷಣಿಕವಾಗಿ ಅಭಿವೃದ್ಧಿ ಆಗುವ ಮೂಲಕ ಮನೋಬಲವನ್ನು ಹೆಚ್ಚಿಸಿಕೋಳ್ಳಬೇಕು ಎಂದರು.
ಪಿಡಿಒ ರವರು ಭೇಡಿಕೆಗಳನ್ನು ಇಂದು ಬರೆಯಿಸಿ 2026-27 ನೇ ಸಾಲಿನಲ್ಲಿ ಕ್ರೀಯಾ ಯೋಜನೆ ರೂಪಿಸಲು ಅನುಕೂಲ ಆಗುತ್ತೆ, ಸರ್ಕಾರದ ಆದೇಶದಂತೆ ಕಾಮಗಾರಿ ಗೆ ಬಳಸಲು ಅವಕಾಶ ಇದೆ ಎಂದರು.
ಈ ಸಂದರ್ಭದಲ್ಲಿ ಕಿಲಾರಹಟ್ಟಿ ಗ್ರಾಮ ಪಂಚಾಯತ್ ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ರಾಯನಗೌಡ ಪಾಟೀಲ, ವಿಶೇಷ ಚೇತನ ಪ್ರಮುಖರಾದ ಅಮರೇಶಪ್ಪ ಗೊರೆಬಾಳ, ಯಮನೂರಪ್ಪ, ಅಮರೇಶ ಗೋನಾಳ, ದುರಗಪ್ಪ ಗಂಗಾಮತ, ಮಂಜುನಾಥ್ ಕೊಡಗಲಿ ಸೇರಿದಂತೆ ಇತರರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಇದ್ದರೂ.




