
ರಾಷ್ಟ್ರೀಯ ನೆಟ್‌ಬಾಲ್ ಸಾಹಿತ್ಯ ಗೊಂಡಬಾಳಗೆ ಚಿನ್ನದ ಗರಿ

Golden feather for National Netball Literature Gondaba

ಕೊಪ್ಪಳ: ಇಲ್ಲಿನ ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಮಂಜುನಾಥ ಗೊಂಡಬಾಳ ೧೯ ವರ್ಷದೊಳಗಿನ ಕರ್ನಾಟಕ ತಂಡದಲ್ಲಿ ಆಡಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದಲ್ಲಿ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇವರ ಆಶ್ರಯದಲ್ಲಿ ಡಿ. ೨೫ ರಿಂದ ಡಿ. ೨೯ ರವರೆಗೆ ಆಯೋಜನೆಗೊಂಡಿದ್ದ ೧೯ ವರ್ಷದೊಳಗಿನ ಬಾಲಕ ಬಾಲಕಿಯರ ರಾಷ್ಟ್ರೀಯ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ೧೨ ಜನರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ, ಕ್ಯಾಂಪನಲ್ಲಿ ತರಬೇತಿ ಹೊಂದಿ ಕರ್ನಾಟಕದ ಐತಿಹಾಸಿಕ ದಾಖಲೆಯ ಮೊದಲ ಬಾರಿ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಇಲ್ಲಿನ ಸಮಾಜ ಸೇವಕರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ದಂಪತಿಯ ಪುತ್ರಿ ಬಹುಮುಖ ಪ್ರತಿಭೆ ಕು. ಸಾಹಿತ್ಯ ಎಂ. ಗೊಂಡಬಾಳ ೨೦೨೩-೨೪ ನೇ ಸಾಲಿನ ಬಹುಮುಖ ಪ್ರತಿಭೆ ವಿಭಾಗದಲ್ಲಿ ಸಂಗೀತ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ಗಿಟಾರ್ ವಾದನ, ಕೀಬೋರ್ಡ, ಹಾರ್ಮೋನಿಯಂ ನುಡಿಸುವದು, ಮತ್ತು ಮೌಥ್ ಪಿಯಾನೋದಲ್ಲಿ ಪರಿಣತಿಯನ್ನು ಹಾಗೂ ಕ್ರೀಡಾ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪಡೆದಿದ್ದಳು.
ಕೊಪ್ಪಳಕ್ಕೆ ಮೊದಲ ಸಲಾ ರಾಜ್ಯಮಟ್ಟದ ದಸರಾ ಸಿಎಂ ಕಪ್ ನೆಟ್‌ಬಾಲ್ ಕಂಚಿನ ಪದಕ, ಪೆಂಕಾಕ್ ಸಿಲತ್‌ನಲ್ಲಿ ರಾಜ್ಯ ಮತ್ತು ರಾಷ್ಟಮಟ್ಟದ ಪದಕ ಪಡೆದಿದ್ದು, ಜಂಪ್ ರೋಪ್ ಕ್ರೀಡೆ, ಕರಾಟೆ, ಏರ್‌ರೈಫಲ್‌ನಲ್ಲಿ ಸಹ ತರಬೇತಿ ಹೊಂದುತ್ತಿದ್ದಾಳೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ಡಿಡಿಪಿಯು ರಾಜೇಶ್ವರಿ, ಪ.ಪೂ. ಶಿಕ್ಷಣ ಇಲಾಖೆಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಶಿವಮಾದಯ್ಯ, ಪ.ಪೂ. ಶಿಕ್ಷಣ ಇಲಾಖೆಯ ರಾಜ್ಯ ಕ್ರೀಡಾ ಸಂಯೋಜಕ ಗೋಪಾಲಗೌಡ, ಕಾರ್ಯಕ್ರಮ ಸಂಘಟಕ ಪ್ರೇಮನಾಥ ಶೆಟ್ಟಿ, ತಂಡದ ಮ್ಯಾನೇಜರ್ ಅಪರ್ಣಾ ಸೇರಿ ಅನೇಕರು ಇದ್ದರು.
ಕೊಪ್ಪಳ ಜಿಲ್ಲೆಯ ಡಿಡಿಪಿಯು ಜಗದೀಶ ಅವರ ಪರವಾಗಿ ಜಿಲ್ಲಾ ಪಪೂ ಕ್ರೀಡಾ ಸಂಯೋಜ ತಿರುಪತಿ ನಾಯಕ, ನೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಜಾಕ್, ಕ್ರೀಡಾ ನಿರ್ದೇಶಕ ಗವಿಸಿದ್ದಪ್ಪ, ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಸತೀಶ ಅವರು ಅಭಿನಂದಿಸಿದ್ದಾರೆ.
ರಾಷ್ಟ್ರೀಯ ನೆಟ್ ಬಾಲ್ ವಿಜೇತ ಕರ್ನಾಟಕದ ಬಾಲಕಿಯರ ತಂಡ : ನಿಖಿತಾ, , ಸುಪ್ರಿಯಾ ಹೆಚ್. ಎಸ್., ಸಾಹಿತ್ಯ ಎಂ. ಗೊಂಡಬಾಳ, ಹೇಮಾ ಮನ್ನೂರ, ಹರ್ಷಿತಾ ಎಲ್., ತಪಸ್ಯಾ ಎಸ್. ನಾಯಕ್, ರಕ್ಷಾ, ಸಿಂಚನಾಲಾವಣ್ಯ ಎಂ. ಎನ್., ಲಕ್ಷ್ಮೀ ಮಹಾದೇವ, ಇಂದು ಜಿ., ನಿಸರ್ಗ ಹೆಚ್. ಎಸ್., ನಿತ್ಯಾಶ್ರೀ, ದೀಪ್ತಿ ಹೆಚ್. ಎಸ್., ಸಂದ್ಯಾ, ವಿದ್ಯಾ, ಅನ್ವಿತಾ.




