
ವಿಶ್ವಮಾನವತೆ- ಸಮಾಸಮಾಜ ಸಿದ್ದಾಂತ ಜಗತ್ತಿಗೆ ಮಾದರಿ : ಪ್ರೊ. ಬಿ ಕೆ ರವಿ

Kuvempu's universal humanity-social theory is a model for the world: Prof. B K Ravi

ಗಂಗಾವತಿ: ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 29.12.2025ರಂದು ಕುವೆಂಪು ಅವರ ಜನ್ಮದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 18 ವರ್ಷಗಳ ನಂತರ ಪರೀಕ್ಷಾ ಕೇಂದ್ರ ಮುಂಜೂರು ಮಾಡಿ ಪರಿಶೀಲನೆ ಮಾಡಲು ಆಗಮಿಸಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರು ಕುವೆಂಪು ಜಯಂತೋತ್ಸವದಲ್ಲಿ ಪಾಲ್ಗೊಂಡು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಟ ನಮನದ ಸಲ್ಲಿಸಿ , ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,
ಕೆ.ವಿ ಪುಟ್ಟಪ್ಪರವರನ್ನು ಕಂಡು ಅವರೊಂದಿಗೆ ಇದ್ದ ಒಡನಾಟವನ್ನು ಹಾಗೂ ಅವರಜೊತೆ ಮಾತನಾಡಿದ ಕ್ಷಣಗಳನ್ನು ನೆನೆದರು, ಅವರನ್ನು ಕoಡದ್ದು ನನ್ನ ಭಾಗ್ಯವೆಂದು ಹೇಳಿಕೊಂಡರು.
ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಪದ್ಯದ ಸಾಲುಗಳನ್ನು ಮಕ್ಕಳಿಗೆ ಹೇಳಿ ನೀವು ಕೂಡ ಚೈತನ್ಯಶೀಲರಾಗಿ ಉನ್ನತೋನ್ನತವಾಗಿ ಬೆಳೆಯುತ್ತಲೇ ಇರಬೇಕು ಹಾಗೂ ವಿಶ್ವಮಾನವತೆ ಚಿಂತನೆಯನ್ನು ಅನುಸರಿಸಿ ಎಂದು ಕಿವಿ ಮಾತು ಹೇಳಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರರಂತೆ ಕುವೆಂಪುರವರು ಕೂಡ ಸಮಸಮಾಜದ ಸಿದ್ದಾಂತದಲ್ಲಿ ಅತೀವ ನಂಬಿಕೆ ಉಳ್ಳವರಾಗಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಕರಿಗೂಳಿ ಅವರು ಮಾತನಾಡಿ ನಿಸರ್ಗದಲ್ಲಿ ವೈವಿಧ್ಯತೆ ಇರುವಂತೆ ಕುವೆಂಪುರವರ ಕನ್ನಡ ಸಾಹಿತ್ಯದಲ್ಲಿ ವಿನೂತನ ವೈಶಿಷ್ಟಗಳಿವೆ ಎಂದರು.
ಕಾವ್ಯಲೋಕದ ಅಧಿಕೃತತೆಯಲ್ಲಿ ಶ್ರೇಷ್ಠ ಸ್ಥಾನ ಪಡೆದ ಜಗದಕವಿ ಎಂದರು. ವಿಲಿಯಂ ಶೇಕ್ಸ್ಪಿಯರ್ ಅವರು ಇಂಗ್ಲಿಷ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದಂತೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಕುವೆಂಪುರವರು ಪ್ರಮುಖರು, ಕನ್ನಡ ಸಾಹಿತ್ಯದ ವೈಜ್ಞಾನಿಕತೆಯನ್ನು ಅರ್ಥೈಸಲು ಹೊಸ ವೈಧಾನಿತೆಯನ್ನು ನೀಡಿದ್ದು ಅಲ್ಲದೇ, ಸಾಹಿತ್ಯದ ಮೂಲಕ ಬದುಕಿನ ಎಲ್ಲಾ ರಂಗಗಳನ್ನು ಸ್ಪರ್ಶಿಸಿದವರು ಎಂದು ಅಭಿಪ್ರಾಯಪಟ್ಟರು. ಇಂತಹ ದುರಿತ ಕಾಲದಲ್ಲಿ ವಿಶ್ವಮಾನವ ಸಂದೇಶದ ಅಗತ್ಯತೆ ಜಗತ್ತಿಗೆ ಹೆಚ್ಚಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕರಾದ ಡಾ.ಸರಫರಾಜ್ ಅಹಮದ್ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು. ಸಹಾಯಕ ಪ್ರಾಧ್ಯಾಪಕರಾದ
ಡಾ.ಶಶಿಕುಮಾರ ಅವರು ವಂದನೆಗಳನ್ನು ಅರ್ಪಿಸಿದರು. ಹಾಗೂ ಐ.ಕ್ಯೂ.ಎ.ಸಿ. ಸಂಚಾಲಕರಾದ ರವಿಕುಮಾರ, ಅಧ್ಯಾಪಕರಾದ ವಿರೂಪಾಕ್ಷ. ಕೆ ಮಾತನಾಡಿ ಕುವೆಂಪು ರವರ ವಿಭಿನ್ನ ದೃಷ್ಟಿಕೋನದ ಪ್ರಸ್ತುತತೆಯನ್ನು ವಿವರಿಸಿದರು. ಉಪನ್ಯಾಸಕರಾದ ವೆಂಕಟರಾಜು, ಡಾ. ದೇವರಾಜ ಹೊಸಮನಿ, ಬಾಲಚಂದ್ರಪ್ಪ, ವೀರೇಶ, ಮಲ್ಲಯ್ಯ, ಡಾ. ಅಯ್ಯಪ್ಪ, ಸಾಯಿಕುಮಾರ್ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಸಹಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣಬಸವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


