
ಕುವೆಂಪುರವರ. ಆದರ್ಶವೆ ನಮಗೆ ಮಾಧರಿ ,ಬಿಜೆಪಿ ಮುಖಂಡರಾದ ವೆಂಕಟೆಗೌಡ ಅಭಿಮತ .

Kuvempu's ideal is Madhari, BJP leader Venkat Gowda's opinion.

ವರದಿ: ಬಂಗಾರಪ್ಪ .ಸಿ.
ಹನೂರು: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವಮಾನವ ಒಕ್ಕಲಿಗರ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುವೆಂಪು ಅವರು ರಚಿಸಿದ ನಾಡಗೀತೆಗೆ ಶತಮಾನೋತ್ಸವ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅನ್ನಸಂತರ್ಪಣೆ ಆಯೋಜಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ಮುಖಂಡ ವೆಂಕಟೇಗೌಡ ಮಾತನಾಡಿ, ರೈತ ಕುಟುಂಬದಲ್ಲಿ ಜನಿಸಿ ರಾಷ್ಟ್ರಕವಿ ಎಂಬ ಖ್ಯಾತಿ ಪಡೆದ ಕುವೆಂಪು ಅವರು ನೀಡಿದ ವೈಚಾರಿಕ ಚಿಂತನೆಗಳನ್ನು ಇಂದು ನಾವು ಜೀವನದಲ್ಲಿ ಅನುಸರಿಸುವಲ್ಲಿ ವಿಫಲರಾಗುತ್ತಿದ್ದೇವೆ. ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದುಂದು ವೆಚ್ಚಗಳಿಗೆ ವಿರೋಧವಾಗಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹ ಸಂದರ್ಭದಲ್ಲಿ ಮಂತ್ರಮಾಂಗಲ್ಯ ಬೋಧನೆ ಮಾಡಿ, ಧರ್ಮ–ಜಾತಿ ಮೀರಿ “ನಾನು ವಿಶ್ವಪಥದತ್ತ ಸಾಗುತ್ತಿದ್ದೇನೆ” ಎಂದು ಸಾರಿದ ಮಹಾನ್ ಕವಿ ಎಂದು ಅವರು ಸ್ಮರಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಯಾಗಿ ಕುವೆಂಪು ಅವರು ಸದಾ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಹ ವೈಚಾರಿಕ ಬೆಳಕು ಚೆಲ್ಲಿದ್ದಾರೆ. ಮನುಷ್ಯನು ವಿಶ್ವಮಾನವನಾಗಬೇಕೆಂಬ ಸಂದೇಶವನ್ನು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ನೀಡಿದ್ದು, ಅವರ ತತ್ವಗಳನ್ನು ಜೀವನಪೂರ್ತಿ ಅಳವಡಿಸಿಕೊಳ್ಳಬೇಕು ಎಂದರು.
ಕುವೆಂಪು ಜಯಂತಿ ಪ್ರಯುಕ್ತ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಟ್ಟಣದ ನಾಗರಿಕರಿಗೆ ಸಿಹಿ ಹಂಚಲಾಯಿತು. ಜೊತೆಗೆ ಕುವೆಂಪು ಅವರು ರಚಿಸಿದ ನಾಡಗೀತೆಗೆ ನೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆನಂದ್ ಕುಮಾರ್, ನಾಮನಿರ್ದೇಶಿತ ಸದಸ್ಯ ಮಹಾದೇಶ್, ಬಸವರಾಜು, ಮಾಜಿ ಉಪಾಧ್ಯಕ್ಷ ಮಾದೇಶ್,ಗೀರಿಶ್ ,ಆನಂದ್ ಕುಮಾರ್ , ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಬಿಜೆಪಿ ಮುಖಂಡರಾದ ವೆಂಕಟೆಗೌಡರು, ಹನೂರು ಕಸಾಪ ಕಾರ್ಯದರ್ಶಿ ಅಭಿಲಾಶ್, ಮುಖಂಡರಾದ ರಾಜೇಶ್ ರವಿ, ಬಸವೇಗೌಡ, ಶಂಕರ್, ರಮೇಶ್ ನಾಯ್ಡು, ಸತೀಶ್, ಸಮುದಾಯದ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಯುವಕರಾದ ವೆಂಕಟೇಶ್,ಹನೂರು ಪಟ್ಟಣದ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್,ಕೊಳ್ಳೇಗಾಲ ಯಳಂದೂರು ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್ ,ಹನೂರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಿ ,ಪತ್ರಕರ್ತರಾದ ಚೇತನ್, ಮಹಾದೇವಸ್ವಾಮಿ ,ರವಿ ,ಕಾರ್ತಿಕ್ ,,ಚಾ ನಗರ ಜಿಲ್ಲಾ ಕಾಂಗ್ರೆಸ್ ನ ಯುವ ಪ್ರಧಾನ ಕಾರ್ಯದರ್ಶಿ ಮಂಜುನಾಥ್ , ನಂದೀಶ್, ವೆಂಕಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


