
ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ದೇವು ನಾಗನೂರ ಆಯ್ಕೆ

Devu Naganur elected as Media Club President

ಕೊಪ್ಪಳ: ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ದೇವು ನಾಗನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಮೀಡಿಯಾ ಕ್ಲಬ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರವೀಂದ್ರ ವಿ.ಕೆ. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಪತ್ರಕರ್ತ ದೊಡ್ಡೇಶ ಯಲಿಗಾರ್ ಅವರು ದೇವು ನಾಗನೂರ ಹೆಸರನ್ನು ಸೂಚಿಸಿದರು.
ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ನೂತನ ಅಧ್ಯಕ್ಷರನ್ನು ನಿರ್ದೇಶಕರ ತಂಡ ಅಭಿನಂದಿಸಿತು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ್ ಬಾಚನಹಳ್ಳಿ, ನಿರ್ದೇಶಕರಾದ ಸೋಮರಡ್ಡಿ ಅಳವಂಡಿ, ದೊಡ್ಡೇಶ ಯಲಿಗಾರ್, ಬಸವರಾಜ ಶೀಲವಂತರ್, ಹುಸೇನ್ ಪಾಶಾ, ಸಂತೋಷ ದೇಶಪಾಂಡೆ, ಶರಣಬಸವ ಹುಲಿಹೈದರ್, ಮಹೇಶಗೌಡ ಭಾನಾಪುರ, ನಾಭಿರಾಜ್ ದಸ್ತೇನವರ್ ಇದ್ದರು.


