
ಎ.ಐ.ಕೆ.ಕೆ.ಎಂ.ಎಸ್ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಕೃಷಿ ಸಲಕರಣೆಗಳನ್ನು ವಿತರಿಸಲು ಮತ್ತು ಅಂಬಾ ಮಠಕ್ಕೆ ಬಸ್ ಕಲ್ಪಿಸಲು ರೈತ ಮುಖಂಡರ ಆಗ್ರಹ.

Farmer leaders appeal to distribute adequate agricultural equipment to farmers on time and provide buses to Amba Math

ಗಂಗಾವತಿ: ಎ.ಐ.ಕೆ.ಕೆ.ಎಂ.ಎಸ್ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಕೃಷಿ ಸಲಕರಣೆಗಳನ್ನು ವಿತರಿಸಲು ಅಗ್ರಹಿಸಿ ಮಾನ್ಯ ಸಹಾಯಕ ಕೃಷಿ ನಿರ್ದೇಶಕರಿಗೆ ಮತ್ತು ಸಿದ್ದಾಪುರ ಬಸ್ ನಿಲ್ದಾಣದಿಂದ ಉಳೇನೂರು ನಂದಿಹಳ್ಳಿ ಮಾರ್ಗವಾಗಿ ಸಿಂಗಾಪುರ ಅಂಬಾಮಠದವರೆಗೆ ಹೊಸದಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಸಂಘದ ಕಾರ್ಯಕರ್ತರು ಗಂಗಾವತಿ ಸಾರಿಗೆ ವಿಭಾಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ AIKKMS ತಾಲ್ಲೂಕು ಕಾರ್ಯಕರ್ತರು ಮಾತನಾಡಿ ಪ್ರತಿ ವಾರ್ಷಿಕ ಬೆಳೆಯಲ್ಲಿ ರೈತರಿಗೆ ಲಭ್ಯವಾಗಬೇಕಿದ್ದಂತಹ ಟ್ರ್ಯಾಕ್ಟರ್ ಉಪಕರಣಗಳು, ಔಷಧ ಉಪಕರಣಗಳು, ಬಿತ್ತನೆ ಮತ್ತು ಕಟಾವಿಗೆ ಸಂಬಂಧಿಸಿದಂತೆ ಇನ್ನಿತರ ರೈತರಿಗೆ ಅವಶ್ಯಕ ವಾಗಿರುವ ಕೃಷಿ ಸಲಕರಣೆಗಳು ಬಡ ರೈತ ಕೃಷಿ ಕಾರ್ಮಿಕರಿಗೆ ತಲುಪುತ್ತಿಲ್ಲ. ಹಾಗೆಯೇ ಈ ಕೃಷಿ ಸಲಕರಣೆಗಳ ಕುರಿತಂತೆ ಅನೇಕ ಹಳ್ಳಿ ಭಾಗದ ರೈತರಿಗೆ ಮಾಹಿತಿಯೇ ತಿಳಿದಿಲ್ಲ ಮತ್ತು ಉಪಕರಣಗಳು ಅವರಿಗೆ ಲಭ್ಯವಾಗುತ್ತಿಲ್ಲ. ಹಾಗೆಯೇ ಪ್ರತಿ ವರ್ಷ ಬೆಳೆ ಬೆಳೆದ ನಂತರ ರೈತರಿಗೆ ಮಣ್ಣಿನ ಫಲವತ್ತತೆಯ ಕುರಿತಂತೆ ಯಾವುದೇ ಮಾಹಿತಿಯು ಲಭ್ಯವಾಗುತ್ತಿಲ್ಲ.ಕೂಡಲೇ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಕೃಷಿ ಸಲಕರಣೆಗಳು ತಲುಪುವಂತೆ ಕ್ರಮ ವಹಿಸಬೇಕು ಹಾಗೂ ಸರಿಯಾದ ಅನುದಾನದ ಮೂಲಕ ಸಲಕರಣೆಗಳ ವಿತರಣೆಯ ಕಾರ್ಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕೆಂದರು.
ನಂತರ ಉಳೇನೂರು ನಂದಿಹಳ್ಳಿ ಮಾರ್ಗವಾಗಿ ಸಿಂಗಾಪುರ ಅಂಬಾಮಠದವರೆಗೆ ಹೊಸದಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಗಂಗಾವತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಸಿಂಗಾಪುರದಿಂದ ಗಂಗಾವತಿಗೆ ಹಲವಾರು ಸಾರ್ವಜನಿಕರು ಪ್ರಯಾಣ ಮಾಡುತ್ತಿರುವುದರಿಂದ, ಹಾಗೆಯೇ ಸಿದ್ದಾಪುರ ಈಳಿಗನೂರು,ಉಳೇನೂರು, ಬೆನ್ನೂರು ಕೊಕ್ಕರುಗಳ್, ನಂದಿಹಳ್ಳಿಯಿಂದಲೂ ಕೂಡ ಸಿಂಗಾಪುರ ಮತ್ತು ಅಂಬಾಮಠಕ್ಕೆ ಹೋಗುವಂತಹ ಪ್ರಯಾಣಿಕರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ. ಸಾರ್ವಜನಿಕರು ಅಂಬಾ ಮಠ ಸಿಂಗಾಪುರದಿಂದ ಗಂಗಾವತಿಗೆ ಪ್ರಯಾಣ ಮಾಡುವಂತಹ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ. ಸಾರ್ವಜನಿಕರ ಬೇಡಿಕೆಯು ಕೂಡ ಇರುವುದರಿಂದ. ಸಿದ್ದಾಪುರ ದಿಂದ ನಂದಿಹಳ್ಳಿ ಮಾರ್ಗವಾಗಿ ಅಂಬಾಮಠದವರೆಗೆ ಹೊಸದಾಗಿ ಎರಡು ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಿಬೇಕು ಎಂದರು.
ಸಂಘಟನೆಯ ತಾಲ್ಲೂಕು ಮುಖಂಡರಾದ ಅಮರೇ ಗೌಡ ಅಂಜನಪ್ಪ ಹಳ್ಳಳ್ಳಿ,ಬಸವರಾಜಪ್ಪ, ಯಮನೂರು ಕಾರಟಗಿ ಸದಸ್ಯರಾದ ನಿರೂಪಾದಿ ನಾಯಕ್, ಶರಣಪ್ಪ ನಾಯಕ್,ಮಲ್ಲಯ್ಯ, ವೆಂಕಟೇಶ್ ಇಟಗಿ ಹೊನ್ನೂರಪ್ಪಪಾಳೆ,ಗಾದಿಲಿಂಗಪ್ಪ ಕುರುಬರ,ಹೊನ್ನೂರಪ್ಪ,ಗಂಗರಾಜ ಅಳ್ಳಳ್ಳಿ ಮತ್ತು ಇತರರಿದ್ದರು


