
ಗ್ರಾಮ ಪಂಚಾಯತಿ ಆನೆಗುಂದಿ ವತಿಯಿಂದ 10 ನೇ ತರಗತಿ ಫಲಿತಾಂಶ ಸುಧಾರಣೆಗಾಗಿ ಮಿಷನ್ 40 ಸಲಕರಣೆ ವಿತರಣೆ.

Distribution of Mission 40 equipment for improving 10th class results by Gram Panchayat Anegundi.

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಗ್ರಾಮೀಣ ಸ್ಥಳೀಯ ಸರಕಾರಗಳು ಪಂಚಾಯತಿ ವ್ಯಾಪ್ತಿಯ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಬೇಕಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕಾಂಪೌಂಡ್, ಮೈದಾನ, ಅಡುಗೆ ಕೋಣೆ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಆನೆಗುಂದಿ ಗ್ರಾಮ ಪಂಚಾಯತಿಯು, ಪಂಚಾಯತಿ ವ್ಯಾಪ್ತಿಯ ಮಕ್ಕಳ SSLC ಫಲಿತಾಂಶ ಸುಧಾರಣೆಗಾಗಿ ಅಗತ್ಯವಿರುವ ಮಿಷನ್ 40 ಪರಿಕರಗಳನ್ನು ಒದಗಿಸಿಕೊಟ್ಟಿದೆ .
ಪಂಚಾಯತ್ ಒಂದು ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ನ ಪಾಸಾಗಿ ಮಕ್ಕಳು ಮುಂದಿನ ವಿದ್ಯಾಭ್ಯಾಸ ಕುಂಠಿತವಾಗದಂತೆ ದೂರಾಲೋಚನೆ ಮಾಡಿರುವುದು ಮಾದರಿಯಾಗಿದೆ.
ಹಿನ್ನೆಲೆ : ಕಳೆದ ಒಂದುವಾರದ ಹಿಂದೆ ಶಾಲೆಯಲ್ಲಿ ಎಸ್ಡಿಎಂಸಿ ರಚನೆಯಾಗಿದೆ, ರಚನೆಯಾದ ನಂತರ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಫಲಿತಾಂಶ ಸುಧಾರಣೆಗಾಗಿ ಮಾಡಬಹುದಾದ ಕ್ರಮಗಳಬಗ್ಗೆ ಸದಸ್ಯರು ಮತ್ತು ಚರ್ಚಿಸಿ, ವಿಶೇಷ ತರಗತಿಗಳು ಹಮ್ಮಿಕೊಳ್ಳುವುದು, ಬಸ್ ವ್ಯವಸ್ಥೆ, ಮಿಷನ್ 40 ಕುರಿತು ಚರ್ಚೆಯಾಗಿದ್ದು.
ಈಗಾಗಲೇ ಅಂಜನಾದೇವಿ ಅವರ ನೇತೃತ್ವದಲ್ಲಿ ಪಂಚಾಯತಿ ಲೈಬ್ರರಿಯಲ್ಲಿ ಸಾಯಂಕಾಲ ಮತ್ತು ಬೆಳಿಗ್ಗೆ ವಿಶೇಷ ತರಗತಿಗಳು ನಡೆಯುತ್ತಿವೆ.
ಇದೀಗ ಪಂಚಾಯತಿ ವತಿಯಿಂದ ಮಿಷನ್ 40 ಪರಿಕರಗಳನ್ನು ಇಂದು ಪ್ರಾರ್ಥನಾ ಅವಧಿಯಲ್ಲಿ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ, ಎಸ್ಡಿಎಂಸಿ ಅಧ್ಯಕ್ಷರಾದ ತಿಮ್ಮೊತಿ, ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಗ್ರಾಮ ಸದಸ್ಯರಾದ ಮಲ್ಲಿಕಾರ್ಜುನ ಹೆಚ್ ಎಂ, ಪೂರ್ಣಿಮಾ, ಹೊನ್ನಪ್ಪ ಶಾಲಾ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.


