oplus_0
ತುಂಗಭದ್ರಾ ಜಲಜಾಗೃತಿ ಪಾದಾಯಾತ್ರೆ ಚಾಲನೆಗೆ ಸುಭಾಷ್‌ಚಂದ್ರ ಬೋಸ್ ಮೊಮ್ಮಗಳು
೧೬೦ ಕಿಲೋಮೀಟರ್ ಪಾದಯಾತ್ರೆ ನಾಳೆ ಆರಂಭ: ಬಹುಸಂಖ್ಯೆಯಲ್ಲಿ ಪಾಲೊಗಳ್ಳಿ: ಪರಣ್ಣ ಮುನವಳ್ಳಿ
Subhash Chandra Bose’s granddaughter to launch Tungabhadra Water Awareness Walk 160-kilometer walk begins tomorrow: Palogalli in large numbers: Paranna Munavalli

ಗಂಗಾವತಿ: ದೇಶದ ಬಹುತೇಕ ನದಿಗಳು ಕುಡಿಯಲು ಯೋಗ್ಯವಾಗದಷ್ಟು ಕಲುಷಿತಗೊಂಡಿರುವ ಕುರಿತು ವರದಿಗಳು ಸ್ಪಷ್ಟಪಡಿಸುತ್ತಿದ್ದು, ಭವಿಷ್ಯತ್ತಿನ ಹಿತದೃಷ್ಟಿಯಿಂದ ತುಂಗಭದ್ರ ನದಿಯ ಮಲೀನ್ಯ ತಡೆಯಬೇಕಾದ ಅನಿವಾರ್ಯತೆಯಿದೆ ಸರಕಾರದ ಗಮನಸೆಳೆಯಲು ಮತ್ತು ಜನಜಲಜಾಗೃತಿಗಾಗಿ ನಾಳೆ ಡಿ.೨೭ ಬೆಳಗ್ಗೆ ೧೦.೩೦ಕ್ಕೆ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾಪತಿ ದೇವಸ್ಥಾನದ ವೇದಿಕೆ ಕಾರ್ಯಕ್ರಮದ ನಂತರ ಮಂತ್ರಾಲಯದವರೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು, ವರ್ತಕರು, ಗಣ್ಯರು ಸರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ಅವರು ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಲಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿಯಾನದ ಪ್ರಮುಖರಾದ ಬಸವರಾಜ್ ಬಸವರಾಜ್ ವೀರಾಪುರ ಮಾತನಾಡಿ, ಅತಿಯಾದ ರಸಾಯನಿಕ ಬಳಕೆ, ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಬಿಡುತ್ತಿರುವುದರಿಂದ ದೇಶದ ೮೦ಕ್ಕು ಹೆಚ್ಚು ನದಿಗಳು ಕಲುಷಿತಗೊಂಡಿದ್ದು, ತುಂಗಭದ್ರ ನದಿಯು ಇದಕ್ಕೆ ಹೊರತಾಗಿಲ್ಲ, ಶಿವಮೊಗ್ಗಾದಿಂದ ಕಿಷ್ಕಂಧೆವರೆಗೆ ಎರಡು ಹಂತದ ಪಾದಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು, ಮೂರನೆ ಹಂತದ ಪಾದಯಾತ್ರೆ ಗಂಗಾವತಿಯಿAದ ಆರಂಭಗೊಳ್ಳಲಿದೆ, ನದಿಯಲ್ಲಿನ ಮರಳು ಗಣಗಾರಿಕೆಯಿಂದ ಭೂ ಸವಕಳಿ, ರೈತರು ಕ್ರಿಮಿ ನಾಶಕ ಬಳಸಿದ ಹೊಲಗದ್ದೆಗಳ ನೀರು ಹಾಗು ಶೌಚಾಲಯಗಳ ನೀರು ಹಳ್ಳಗಳ ಮೂಲಕ ನದಿ ಸೇರುವುದಿರಂದ ಕಲುಷಿತಗೊಳ್ಳುತ್ತಿದ್ದು ಇದಕ್ಕಾಗಿ ಜನ ಜಾಗೃತಿ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು ಅತ್ಯಗತ್ಯವಾಗಿದ್ದು, ಪಾದಯಾತ್ರೆ ವೇದಿಕೆ ಕಾರ್ಯಕ್ರಮವನ್ನು ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗಳು ಕೊಲ್ಕೊತ್ತಾದ ರಾಜಶ್ರೀ ಚೌದರಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಲಜಾಗೃತಿ ಕ್ರಾಂತಿಯ ರಾಜೇಂದ್ರ ಸಿಂಗ್ ರಾಜಸ್ತಾನ್, ಗದಗಿನ ಡಿ.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಪಾಲ್ಗೊಳ್ಳಲಿದ್ದಾರೆ ಎಂದರು. ನಿರ್ಮಲ ತುಂಗಭದ್ರ ಜಾಗೃತಿ ಅಭಿಯಾನದ ಕೊಪ್ಪಳ ಜಿಲ್ಲಾ ಸಂಚಾಲಕರಾದ ಶಿವುಕುಮಾರ್ ಮಾಲಿಪಾಟೀಲ್ ಮಾತನಾಡಿ, ಅಭಿಯಾನಕ್ಕೆ ಹಲವಾರು ಜನತೆ ಸಾತ್ ನೀಡಿದ್ದು, ವೈದ್ಯರು, ಸಾಹಿತಿಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳು ಹಾಗು ಗಣ್ಯಮಾನ್ಯರು ಸಹಕಾರೊಂದಿಗೆ ಪಾದಯಾತ್ರೆ ಯಶಸ್ವಿಗೊಳ್ಳುವ ಭರವಸೆ ಇದೆ, ಪಾದಯಾತ್ರೆಗೆ ಹಲವಾರು ಜನರು ಹೆಸರು ನೊಂದಾಯಿಸಿದ್ದು, ಪ್ಲಾಸ್ಟಿಕ್ ಮುಕ್ತವಾಗಿರಲಿದೆ, ವೇದಿಕೆ ಕಾರ್ಯಕ್ರಮಕ್ಕೆ ಎಂಟನೂರಕ್ಕು ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಜಲಜಾಗೃತಿ ಪಾದಯಾತ್ರೆ ಪೋಷ್ಟರ್ ಬಿಡುಗಡೆಗೊಳಿಸಲಾಯಿತು. ನಿರ್ಮಲ ತುಂಗಭದ್ರ ಜನಜಾಗೃತಿ ರಾಯಬಾರಿ ಲಲಿತಾರಾಣಿ ಶ್ರೀ ರಂಗದೇವರಾಯಲು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಜಗನ್ನಾಥ ಆಲಂಪಲ್ಲಿ, ವಿಷ್ಣುತೀರ್ಥ ಜೋಷಿ, ಪವನ್ ಕುಮಾರ್ ಗುಂಡೂರು, ಮಂಜುನಾಥ ಕಟ್ಟಿಮನಿ, ಅರ್ಜುನ್ ಹಾಗು ಶಿವುಕುಮಾರ ಇತರರಿದ್ದರು.



