
ಗಂಗಾವತಿಯ ಶರಣಬಸವೇಶ್ವರ ನಗರದಲ್ಲಿ ಯಶಸ್ವಿಯಾಗಿ ಜರುಗಿದ
ನಾದಯೋಗಿ ಜನಪದ ಸಂಗೀತ ಸಂಭ್ರಮ
Nadayogi folk music festival successfully held in Sharanabasaveshwara Nagar, Gangavathi

ಗAಗಾವತಿ: ಡಿಸೆಂಬರ್-೨೫ ರಂದು ಶ್ರೀ ನಾದಯೋಗಿ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆ (ರಿ) ಗಂಗಾವತಿ ಇವರಿಂದ ನಗರದ ಶರಣಬಸವೇಶ್ವರನಗರದ ಸರಕಾರಿ ಶಾಲೆಯ ಆವರಣದಲ್ಲಿ ನಾದಯೋಗಿ ಜನಪದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲೆಯ ಜನಪದ ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ್ ಲಿಂಗದಳ್ಳಿ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ, ಈಗಿನ ಕಾಲದಲ್ಲಿ ಸಂಗೀತ ನಶಿಸಿ ಹೋಗುತ್ತಿದೆ, ಮೂಲ ಜಾನಪದಗಳು ಮರೆಯಾಗುತ್ತಿವೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಕಲಾವಿದ ಹುಟ್ಟಬೇಕು, ಅಶ್ಲೀಲ ಜಾನಪದಗಳಿಗೆ ಮಾರುಹೋಗದೇ, ಶಾಸ್ತçಬದ್ಧವಾಗಿ ಹಾಡುವುದನ್ನು ಕಲಿಯಬೇಕು, ಇದಕ್ಕಾಗಿ ಗಂಗಾವತಿಯಲ್ಲಿ ಶ್ರೀಮತಿ ಸಂಗೀತ ಶರಣಪ್ಪ ರವರು ಸಂಗೀತ ಶಾಲೆ ಪ್ರಾರಂಭಿಸಿ, ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲಿದ್ದಾರೆ. ಇದಕ್ಕಾಗಿ ಎಲ್ಲಾ ಪಾಲಕರು ಮಕ್ಕಳಲ್ಲಿ ಸಂಗೀತ ಆಸಕ್ತಿ ಬೆಳೆಸುವ ಮೂಲಕ ಸಂಗೀತವನ್ನು ಉಳಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಮಾಜಿ ನಗರಸಭೆ ಸದಸ್ಯರಾದ ಶ್ರೀಮತಿ ಪಾರ್ವತಮ್ಮ ದುರ್ಗೇಶ್ ದೊಡ್ಡಮನಿ ವಹಿಸಿ ಮಾತನಾಡಿ, ನಿಜವಾದ ಸಂಗೀತ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಮೊದಲಿನ ಸಂಗೀತಕ್ಕೂ ಈಗಿನ ಸಂಗೀತಕ್ಕೂ ಬಹಳ ವ್ಯತ್ಯಾಸವಿದೆ. ಹಳ್ಳಿಯ ಸೊಗಡು, ರೈತರ ಒಂದು ಭಾವನೆ, ಪ್ರೀತಿ ವಿಶ್ವಾಸವನ್ನು ಕುರಿತು ಸಾಹಿತ್ಯಗಳು ಸೃಷ್ಟಿಯಾಗುತ್ತಿದ್ದವು ಆದರೆ ಈಗಿನ ಹಾಡುಗಳನ್ನು ಕೇಳಿದರೆ ಮನಸ್ಸಿಗೆ ಬಹಳ ಬೇಸರವಾಗುತ್ತದೆ, ಹಾಡುಗಳು ಒಬ್ಬ ಕಲಾವಿದ ಹಾಡಿದರೆ ಮನಸ್ಸು ಹಗುರವಾಗುವುದು ನೆಮ್ಮದಿ ಸಿಗುವುದು, ಆದರೆ ಈಗಿನ ಹಾಡುಗಳಿಂದ ಹೃದಯಾಘಾತವಾಗುವ ಸಂಭವ ಉದ್ಭವಿಸಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸರಿಗಮ ಹನುಮಂತಪ್ಪ, ಶಿವಣ್ಣ ನೀಲಕಮಲ್, ಸಿದ್ದಪ್ಪ ಅಧಿಕಾರಿ, ಪಕೀರಪ್ಪ ಅರಿಕೇರಿ, ಮಂಜುನಾಥ ಕನಕಗಿರಿ, ನವೀನ್ ಕುಮಾರ್, ಮಲ್ಲಪ್ಪ ಹಿರೇನಂದಿಹಾಳ, ಅಮೀದ್ ಮುಲ್ಲಾ, ಯಮನೂರ ಹತ್ತಿಮರದ, ಬಸವರಾಜ ಹಡಪದ ಅವರುಗಳು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಕೀಬೋರ್ಡ್ನ್ನು ರಾಮಚಂದ್ರಪ್ಪ ಉಪ್ಪಾರ್ ಕೊಪ್ಪಳ, ತಬಲ ವಾದನವನ್ನು ಮಾರುತಿ ಬಿನ್ನಾಳ ದೊಡ್ಡಮನಿ, ರಿದಂಪ್ಯಾಡ್ನ್ನು ಪುಟ್ಟರಾಜ್ ಕೊಪ್ಪಳ ನುಡಿಸಿದರು, ಸಹ ಕಲಾವಿದರಾಗಿ ಮಲ್ಲೇಶಪ್ಪ ವಡ್ಡಟ್ಟಿ, ಅಲ್ಲಾಭಕ್ಷಿ ಭೀಮನೂರ್, ನರಸಿಂಹ ದರೋಜಿ, ಶ್ರೀಮತಿ ಸಂಗೀತ ಶರಣಪ್ಪ, ಗವೀಶ್ ನರೇಗಲ್, ಬಸವರಾಜ್ ಅರಸಿನಕೇರಿ, ಕುಮಾರಿ ಸೃಷ್ಟಿ, ನಯನ, ಚಾಂದಿನಿ, ಕೈಲಾಶ್, ಧನ್ಯಶ್ರೀ ಸೇರಿದಂತೆ ಇತರ ಕಲಾವಿದರು ಭಾಗವಹಿಸಿದ್ದರು.



