
MPs have clarified that they will not allow the establishment of Baldot factory - Magala Mani
ಬಲ್ದೊಟ್ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡಲ್ಲವೆಂದು ಸಂಸದರು ಸ್ಪಷ್ಟನೆ ನೀಡಿದ್ದಾರೆ-ಮ್ಯಾಗಳ ಮನಿ


ಗಂಗಾವತಿ -25-ಕೊಪ್ಪಳದ ಸಮೀಪ ಬಲ್ದೊಟ ಕಾರ್ಖಾನೆ ಸ್ಥಾಪನೆ ಮಾಡುವ ವಿಚಾರ ಸಂಸದ ರಾಜಶೇಖರ್ ಹಿಟ್ನಾಳ್ ಆವರಿಗೆ ಕೊಪ್ಪಳ ಜಿಲ್ಲಾ ಸರ್ವಾO ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯು ಗುರುವಾರ ಮನವಿ ಸಲ್ಲಿಸಲಾಯಿತು ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ಪ್ರಗತಿ ಪರ ಹಾಗೂ ಕೆಲ ಸಂಘಟನೆಗಳು ಸ್ಥಾಪನೆಗೆ ವಿರೋಧಿಸಿ ಹೋರಾಟ ಮಾಡುತ್ತಿವೆ.
ಮತ್ತೊಂದಡೆ ರೈತರು ಹಾಗೂ ಕೆಲ ಸಂಘಟನೆಗಳು ಪ್ರಾರಂಭಿಸಲು ಹೋರಾಟ ಮಾಡುತ್ತಿವೆ. ಈ ಸಮಸ್ಯೆ ಗಂಭೀರ ವಿಷಯ ಆಗುತ್ತಿದೆ.
ಕ್ಷೇತ್ರದ ಜನತೆಗೆ ತಕ್ಕOತೆ ಹಾಗೂ ಅಭಿವೃದ್ಧಿಗೆ ಪೂರಕ ಪರವಾಗಿ ಇರಬೇಕಾದ ಜನಪ್ರತಿನಿದಿಗಳು ಹಾಗಾಗಿ ಕಾರ್ಖಾನೆ ಬೇಕು ಅಂತ ತಮ್ಮ ನಿರ್ಧಾರವಿದ್ದರೆ ವಿರೋಧಿಸುವವರಿಗೆ ಅದರ ಸಾಧಕದ ಬಗ್ಗೆ ಮನವರಿಕೆ ಮಾಡಿ ಮನವೊಲಿಸಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.
ಇಲ್ಲವೇ ಬೇಡವೆಂದಾದಲ್ಲಿ ಸ್ಥಾಪನೆ ಮಾಡುವ ಪರವಾಗಿ ಹೋರಾಟ ಮಾಡುವವರಿಗೆ ಅದರ ಭಾದಕದ ಬಗ್ಗೆ ಮನವರಿಕೆ ಮಾಡಿ ಅವರ ಮನವೊಲಿಸಿ ಸ್ಥಾಪನೆ ಮಾಡುವದನ್ನು ನಿಲ್ಲಿಸಲು ಮುಂದಾಗ ಬೇಕು.
ತಾವುಗಳು ಮುಖ್ಯ ಮಂತ್ರಿಗಳ ಆಪ್ತರಾಗಿರುವದರಿಂದ ಸರ್ಕಾರದ ಮಟ್ಟದಲ್ಲಿ ತಮ್ಮ ಈ ಕೆಲಸ ಬೇಗ ಇತ್ಯರ್ಥವಾಗುತ್ತದೆ. ಆದ್ದರಿಂದ ಕಾರ್ಖಾನೆ ಬೇಕೋ ಅಥವಾ ಬೇಡವೋ ಎಂಬುದನ್ನು ಮೊದಲು ಮಾಧ್ಯಮದ ಮೂಲಕ ಸ್ಪಷ್ಟ ಪಡಿಸಿ ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು ಕಾರ್ಖಾನೆ ಸ್ಥಾಪನೆಗೆ ಆ ಆಕಾಶ ನೀಡಲ್ಲ. ನಾವು ಕೊಪ್ಪಳ ಜನತೆಯ ಅರೋಗ್ಯ ಮತ್ತು ಹಿತ ಕಾಪಾಡುವ ಕೆಲಸ ಮಾಡುತ್ತೇವೆ.
ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಅವರ ಭೂಮಿ ಅವರಿಗೆ ಕೊಡಿಸುತ್ತೇವೆ. ರೈತರ ಪರವಾಗಿ ಇದ್ದೇವೆ. ಇದರ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗ ಬಾರದೆಂದು ಸ್ಪಷ್ಟಪಡಿಸಿದ್ದಾರೆಂದು ಮ್ಯಾಗಳಮನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಬಸವರಾಜ್ ನಾಯಕ,ಅರವಿಂದ್ ಯೋಗಿ,ಮೇಘರಾಜ್, ಗಣೇಶ್ ಬಿ,ಕೆ, ಬೋಗೇಶ್ ಆನೆಗುಂದಿ ಮತ್ತಿತರರು ಇದ್ದರು.


