ಕುರಿ ಕಳ್ಳತನ ಮಾಡುವ ಜಾಲ ಪತ್ತೆ ಹಚ್ಚಿ ಕುರಿಗಾರರಿಗೆ ನ್ಯಾಯ ಒದಗಿಸಬೇಕೆಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Various organizations protest demanding that the sheep theft ring be unearthed and justice be served to the sheep farmers.
ಕುರಿ ಕಳ್ಳತನ ಮಾಡುವ ಜಾಲ ಪತ್ತೆ ಹಚ್ಚಿ ಕುರಿಗಾರರಿಗೆ ನ್ಯಾಯ ಒದಗಿಸಬೇಕೆಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಯಲಬುರ್ಗಾ: ತಾಲೂಕಿನ ತುಮ್ಮರಗುದ್ದಿಯಲ್ಲಿ ಡಿ. 17ರಂದು ಮಧ್ಯರಾತ್ರಿ ಒಂದು ಗಂಟೆಗೆ ಕುರಿ ಕಳ್ಳತನ ಮಾಡಲು ಕಳ್ಳರು ಗ್ರಾಮದ ಹೊರ ವಲಯದಲ್ಲಿ ಕುರಿ ಹಟ್ಟಿಯನ್ನು ಹಾಕಿಕೊಂಡು ಅಲ್ಲಿಯೇ ಮಲಗಿದ್ದರು,ಕಳ್ಳರು ಕುರಿಗಳ ಬಾಯಿ ಮುಚ್ಚಿ, ಕೈ ಕಾಲುಗಳನ್ನು ಕಟ್ಟುವ ಪ್ರಯತ್ನದಲ್ಲಿದ್ದಾಗ ಕುರಿಗಾರರ ನಾಯಿಗಳು ಒದರಿದಾಗ ಎಚ್ಚರಕೊಂಡ ಕುರಿಗಾರರು ಕಳ್ಳರ ಹಿಂದೆ ಬೆನ್ನುತ್ತಿದಾಗ ಅವರು ಚಾಕು ಚೂರಿ ತೋರಿಸಿ ಒಡಿ ಹೋಗಿ ಪರಾರಿಯಾಗಿರುವ ಘಟನೆ ಜರುಗಿದೆ,ಆಗ ಕುರಿಗಾರರು 112 ನಂಬರ್ ಗೆ ಫೋನ್ ಮಾಡಿದಾಗ ಪೊಲೀಸ್ ಅಧಿಕಾರಿಗಳು ತಕ್ಷಣ ಬಂದು ಮಹಜರು ಮಾಡಿದ ನಂತರ ಬೋಲೋರ್ ಗಾಡಿ ವಾಹನ ಸಂಖ್ಯೆ ಕೆ.ಎ.32 AA1309 ಇ ವಾಹನ ಬಿಟ್ಟು ಇದರಲ್ಲಿ ಮೊಬೈಲ್ ಸಹ ಬಿಟ್ಟು ಹೊಗಿರುವಾಗ, ಇದುವರೆಗೆ ಕಳ್ಳರನ್ನು ಹಿಡಿದಿರುವುದಿಲ್ಲ ಎಂದು ಶ್ರೀ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದವರು ,ಹಾಗು ಕರವೇ ಸಂಘಟನೆ, ಹಾಗೂ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿಕೊಂಡು ಶ್ರೀ ಭಕ್ತ ಕನಕದಾಸ ವೃತ್ತದಿಂದ, ರಾಣಿ ಕಿತ್ತೂರ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನೆ ಜರುಗಿ ತಹಶೀಲ್ದಾರ ,ಸಿ.ಪಿ.ಐ ಇವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಕುರಿಗಾರರಿಗೆ ರಕ್ಷಣೆಗಾಗಿ ಬಂದುಕು ತರಬೇತಿ ನೀಡಿ,ಅವರಿಗೆ ಪರವಾಣಿಗೆ ನಿಡಬೇಕು, ಕುರಿ,ಕಳ್ಳತನ ಮಾಡುವ ಕಳ್ಳರನ್ನು ಬಂಧಿಸಬೇಕು, ಕುರಿ ಕಳೆದು ಕೊಂಡವರಿಗೆ ಪರಿಹಾರ ನೀಡಿ ನ್ಯಾಯ ವದಗಿಸಿ ಕೊಡಬೇಕು ಎಂದು ಪ್ರತಿಭಟನೆಯಲ್ಲಿ ತಿಳಿಸಿದರು.ಈ ವೇಳೆ ಶ್ರೀ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿ, ಉಪಾಧ್ಯಕ್ಷ ಶಿವಪ್ಪ ದಂಡಿನ, ಕಾರ್ಯದರ್ಶಿ ದ್ಯಾಮಣ್ಣ ಪರಂಗಿ, ಹಾಗೂ ಕರ್ನಾಟಕ ರಕ್ಣ ವೇದಿಕೆ ತಾಲೂಕ ಅದ್ಯಕ್ಷ ರಾಜಶೇಖರ ಶ್ಯಾಗೋಟಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ವಾಸುದೇವ ಮೇಟಿ ಬಣ) ಸಂಘದ ಅಧ್ಯಕ್ಷ ಶರಣಬಸಪ್ಪ ದಾನಕೈ, ಮುಖಂಡರಾದ ಶೇಖರ ಗುರಾಣಿ, ಬಸವರಾಜ ಗುಳಗುಳಿ, ದೊಡ್ಡಯ್ಯ ಗುರುವಿನ,ಶಿವು ರಾಜೂರ ದೇವಪ್ಪ ಬನಪ್ಪನವರ, ದೇವಪ್ಪ ಪರಂಗಿ ,ರೇವಣಪ್ಪ ಹಿರೇಕುರಬರ, ನೀಲನಗೌಡ ತಳವಗೇರಿಸೇರಿದಂತೆ ಇತರರು ಇದ್ದರು .


