
ಕುಟುಂಬ ನಿರ್ವಹಣೆಗೆ ಮಹಿಳೆಯರ ಪಾತ್ರ ಬಹುಮುಖ್ಯ ಪ್ರಕಾಶ್ ರಾವ್

Prakash Rao: Women's role is crucial in managing the family

ಕನಕಗಿರಿ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿಸಿ ಕಾರಟಿಗಿ ಮತ್ತು ಕನಕಗಿರಿ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಗ್ರಾಮೀಣ ಧರ್ಮಸ್ಥಳ ಗ್ರಾಮೀಣ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಜೀವನ ಸ್ವಾವಲಂಬಿಗಳಾಗಿ ನಿರ್ವಹಣೆ ಮಾಡಲು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಕಾರಿ ಯಾಗಿದೆ ಆಗಿದೆ ಇಡೀ ದೇಶದಲ್ಲಿ 40% ಮಹಿಳೆಯರು ಕೈಗಾರಿಕಾ ಉದ್ಯೋಗದಲ್ಲಿ ಪಾಲ್ಗೊಂಡಿರುವುದು ಶ್ಲಾಘನಿಯ ತಾಯಂದಿರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಮಕ್ಕಳ ಜೀವನವನ್ನು ಹಾಳು ಮಾಡುತ್ತಿರುವುದು ಕಂಡರೆ ಬಹಳ ದುಃಖದ ಸಂಗತಿಯಾಗಿದೆ ಎಂದರು .
ಈ ಸಂದರ್ಭದಲ್ಲಿ ಪ.ಪಂ ಮಾಜಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಯೋಜನಾಧಿಕಾರಿ ನಿಂಗಪ್ಪ ಡಿ.ಅಗಸರ್, ಶಿಕ್ಷಕಿ ಅನ್ನಪೂರ್ಣ ಕಾರಟಗಿ, ಗೀತಾ, ವಲಯದ ಮೇಲ್ವಿಚಾರಕರಾದ ಎಲ್ಆರ್ಇ ಶಿವಾಜಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ, ಭಾಗವಹಿಸಿದರು.


