
ಇ-ಆಸ್ತಿ ತಂತ್ರಾಂಶದ ಶಿಬಿರ ಡಿ.23ರಿಂದ

E-asset software camp from December 23rd


ಇ-ಆಸ್ತಿ ತಂತ್ರಾಂಶದ ಶಿಬಿರ ಡಿ.23ರಿಂದ
ಗಂಗಾವತಿ : ನಗರಸಭೆಯಿಂದ ಡಿ.23 ರಿಂದ 2026ರ ಜನವರಿ 28 ರ ವರೆಗೆ ನಗರದ ವಿವಿಧ ವಾರ್ಡ್ ನಲ್ಲಿಇ-ಆಸ್ತಿ ತಂತ್ರಾಂಶದ ಕುರಿತು ಶಿಬಿರ ಹಮ್ಮಿಕೊಳ್ಳಲಾಗಿದೆ.
ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿನ ಐದು ಸ್ಥಳದಲ್ಲಿ 1ನೇ ಹಂತದ ಆಸ್ತಿಗಳನ್ನು ಇ-ಖಾತಾ ತಂತ್ರಾಂಶದಲ್ಲಿ ನೋಂದಣಿ ಮಾಡಲು ದಾಖಲಾತಿ ಪಡೆದುಕೊಳ್ಳಲು ಶಿಬಿರ ಹಮ್ಮಿಕೊಳ್ಳಲಾಗಿದೆ.
ಡಿ.23 ರಂದು ವಾಲ್ಮೀಕಿ ಸರ್ಕಲ್ ಹತ್ತಿರ ಆಂಜನೇಯ ದೇವಸ್ಥಾನ ಹತ್ತಿರ 30 ರಂದು ನಗರದ ಪ್ರಶಾಂತ್ ನಗರ ಈಶ್ವರ ದೇವಸ್ಥಾನ ಹತ್ತಿರ , 2026ರ ಜನವರಿ 06 ಲಕ್ಷ್ಮಿ ಕ್ಯಾಂಪ್ ಹತ್ತಿರ ಆಂಜನೇಯ ದೇವಸ್ಥಾನ ಹತ್ತಿರ , ಜನವರಿ 13 ಬನ್ನಿ ಗಿಡ ಕ್ಯಾಂಪ್ ಹತ್ತಿರದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ .
ಜನವರಿ 20 ರಂದು ಪಂಪಾಪತಿ ದೇವಸ್ಥಾನ ಹತ್ತಿರ ಹಾಗೂ ಜನವರಿ 28 ರಂದು ಆನಂದ್ ನರ್ಸಿಂಗ್ ಹೋಮ್ ಹತ್ತಿರ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಆಸ್ತಿ ಮಾಲೀಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಗಂಗಾವತಿ ನಗರಸಭೆ ಆಡಳಿತಾಧಿಕಾರಿ ಮತ್ತು ನಗರಸಭೆಯ ಪೌರಾಯುಕ್ತರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


