
ಕ್ರಿಸ್ ಮಸ್ ಅಂಗವಾಗಿ ಬೆಥಸ್ಟಾ ಎಟರ್ನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಟ್ಟೆ ಮತ್ತು ಬೆಡ್ ಸಿಟ್ ವಿತರಣೆ

Bethesda Eternal Charitable Trust distributes clothes and bed sheets as part of Christmas

ಗಂಗಾವತಿ: ಬೆಥಸ್ಟಾ ಎಟರ್ನಲ್ ಚಾರಿಟೇಬಲ್ ಟ್ರಸ್ಟ್ ವಿದ್ಯಾನಗರ ವತಿಯಿಂದ ಕ್ರಿಸ್ ಮಸ್ ಅಂಗವಾಗಿ ದಿನಾಂಕ 18.12.2025 ಗುರುವಾರದಂದು ಟ್ರಸ್ಟ್ ಮುಖ್ಯ ಕಚೇರಿಯಲ್ಲಿ ವೈರುಧ್ಯರಿಗೆ ಮತ್ತು ಅಂಗವಿಕಲರಿಗೆ ವಿಧವೆಯರಿಗೆ ಸೇರಿದಂತೆ ಇನ್ನೂ ಅನೇಕ ಜನರಿಗೆ ಬೆಡ್ ಶೀಟ್ ಸೀರೆ ಬಟ್ಟೆ ಯಂತಹ ಉಪಯೋಗಿಸುವ ವಸ್ತುಗಳನ್ನು ವಿತರಣೆ ಮಾಡಲಾಯಿತು.
ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೊಳ್ಳ ಈಶ್ವರ್ ಪ್ರಸಾದ್ ಹೈಕೋರ್ಟ್ ವಕೀಲರು ಹೈದರಾಬಾದ್ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವೀರಯ್ಯಸ್ವಾಮಿ ಹೆಡ್ ಮಾಸ್ಟರ್ ಪೊದುಟೂರು (ಆಂಧ್ರ ಪ್ರದೇಶ). ಭಾಗವಹಿಸಿದ್ದರು. ಅತಿಥಿಯಾಗಿ ತೊಟ್ಟ ಆನಂದ ಹೊಸಪೇಟೆ. ಆರ್ ಡಿ ರಾಜು ಹೊಸಪೇಟೆ. ಭಾಗವಹಿಸಿದ್ದರು.
ಸಾನಿಧ್ಯವನ್ನು ಟ್ರಸ್ಟಿನ ಮುಖ್ಯಸ್ಥರಾದ ಜೀವ ಪ್ರಕಾಶ ವಲ್ಲಿ ಮತ್ತು ವಿ ಜ್ಯೋತಿ. ಸತೀಶ. ವಿ.ಲೀಡಿಯಾ. ಟ್ರಸ್ಟಿನ ಮುಖ್ಯಸ್ಥ ಜೀವ ಪ್ರಕಾಶ್ ವಲ್ಲಿ ಮಾತನಾಡಿ ಕಳೆದ 23 ವರ್ಷಗಳಿಂದ ಬಡವರಿಗೆ ವಯೋವೃದ್ದರಿಗೆ ಅಂಗವಿಕಲರಿಗೆ ವಿಧವೆಯರಿಗೆ ಬಟ್ಟೆಗಳನ್ನು ಮತ್ತು ಬೆಡ್ ಶೀಟ್ ಗಳನ್ನು ವಿತರಣೆ ಮಾಡುತ್ತಾ ಬಂದಿದ್ದೇವೆ.
18ನೇ ತಾರೀಕ ನಂದು ವಿದ್ಯಾನಗರದಲ್ಲಿ ವಿತರಿಸಿದ್ದೇವೆ. 19ನೇ ತಾರೀಕಿನಂದು ದಾಸನಾಳದಲ್ಲಿರುವ ಅಂದ ಮಕ್ಕಳ ಪಾಠಶಾಲೆಗೆ ತೆರಳಿ ಹಣ್ಣು ಮತ್ತು ಹಂಪಲಗಳನ್ನು ಹಂಚಿ ಕ್ರಿಸ್ಮಸ್ ದಿನಾಚರಣೆ ಶುಭಾಶಯಗಳು ಕೋರಿದೆವು.
ನಂತರ ಸಿಂಧನೂರು ತಾಲೂಕಿನ ಹಂಚಿನಾಳ ಗ್ರಾಮಕ್ಕೆ ತೆರಳಿ ಅಲ್ಲಿ ಇದೇ ರೀತಿಯಾದಂತ ಬಟ್ಟೆಗಳನ್ನು ನಮ್ಮ ಟ್ರಸ್ಟ್ ನಿಂದ ಕಡು ಬಡತನದಲ್ಲಿರುವ ವಯರ್ದ್ದ ರಿಗೆ ಅಂದರಿಗೆ ಅಂಗವಿಕಲರಿಗೆ ವಿಧವೆಯರಿಗೆ ವಿತರಣೆ ಮಾಡಿ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಕೋರಿದೆವು ನಂತರ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಆ ಭಗವಂತ ಎಲ್ಲರಿಗೂ ಆರೋಗ್ಯ ಆಯಸ್ಸು ಕರುಣಿಸೆಲೆಂದು ಪ್ರಾರ್ಥಿಸಿ ಮಹಾಪ್ರಸಾದವನ್ನು ವ್ಯವಸ್ಥೆ ಮಾಡಿ ಹಬ್ಬಕ್ಕೆ ಶುಭಾಶಯ ಕೋರಿದೆವು ಎಂದು ಹೇಳಿದರು. ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಗುಂಟೂರು ವಂದನಂ. ಗೆದುಲೂರು ಬಾಲಯ್ಯ ಸ್ವಾಮಿ. ಪೋದುಟೂರು ಜಗನ್ ಮೋಹನ್. ಗುಂಟೂರು ರವಿ. ಮಂಜುನಾಥ ವಿದ್ಯಾನಗರ. ಸೇರಿದಂತೆ ವಿದ್ಯಾನಗರದ ಹಿರಿಯರು ಮುಖಂಡರು ಭಾಗವಹಿಸಿದ್ದರು.


