
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ ಅಧ್ಯಕ್ಷ – ಕಾರ್ಯದರ್ಶಿಯಾಗಿ ಶರಣಬಸಪ್ಪ ದಾನಕೈ ಆಯ್ಕೆ

Sharanabasappa Danakai elected as President-Secretary of All India Sharan Sahitya Parishad

ಯಲಬುರ್ಗಾ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿಕೊಂಡು ಪಟ್ಟಣದ ಶ್ರೀ ವಿಜಯದುರ್ಗ ದೇವಸ್ಥಾನದಲ್ಲಿ ಡಿ.೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಸಭೆ ಸೇರಿ , ಜಿಲ್ಲಾ ಗೌರವ ಅಧ್ಯಕ್ಷ ಎಂ.ಬಿ.ಅಳವುಂಡಿ ಇವರ ನೆತೃತ್ವದಲ್ಲಿ, ಜಿಲ್ಲಾ ಅಧ್ಯಕ್ಷ ಶಿವಕುಮಾರ ಕುಕುನೂರ ಇವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ ಯಲಬುರ್ಗಾ ತಾಲೂಕ ಘಟಕ ಅಧ್ಯಕ್ಷರನ್ನಾಗಿ ಸಂಗಪ್ಪ ಕೊಪ್ಪಳ ಹಾಗು ಪ್ರಧಾನ ಕಾರ್ಯದರ್ಶಿಯನ್ನಾಗಿ ಶರಣಬಸಪ್ಪ ದಾನಕೈ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಅಂಗಡಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸೋಮನಗೌಡ ಹೊಗರನಾಳ, ಕೋಶ್ಯಾಧ್ಯಕ್ಷ ರಮೇಶ ತುಪ್ಪದ, ಹಾಗೂ ಯಲಬುರ್ಗಾ ಶರಣರಾದ ಸುರೇಶಗೌಡ ಶಿವನಗೌಡ್ರ, ದಾನನಗೌಡ ತೊಂಡಿಹಾಳ,ಅಶೋಕ ಮಾಲಿಪಾಟೀಲ, ಕೆ.ಎನ್.ಮುಳಗುಂದ, ಸಿದ್ರಾಮಗೌಡ ಮಾಲಿಪಾಟೀಲ ಸೇರಿದಂತೆ ಇತರರು ಇದ್ದರು.




