
ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ಪ್ರಥಮ ಬಾರಿಗೆ ಅಧಿವೇಶನ ವೀಕ್ಷಣೆ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ ೭೫ ಮಹಿಳಾ ಶಾಸಕಿಯರು : ತಂಗಡಗಿ

Koppal District Women's Congress observes session for the first time
If women's reservation is implemented, there will be 75 women MLAs in the House: Thangadgi

ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ನಿAದ ಪ್ರಥಮ ಬಾರಿಗೆ ಬೆಳಗಾವಿ ಚಳಿಗಾಲದ ಅಧಿವೇಶನ ವೀಕ್ಷಣೆ ಮಾಡಲು ತೆರಳಿದ ಸಂದರ್ಭದಲ್ಲಿ ಮಹಿಳಾ ಮುಖಂಡರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಮಾತನಾಡಿದರು. ಜೊತೆಗೆ ಅಧಿವೇಶನ ವೀಕ್ಷಣೆಗೆ ಅವಕಾಶ ಮಾಡಿಸಿಕೊಟ್ಟು, ಮುಂದೆ ಮಹಿಳೆಯರಿಗೆ ಇಲ್ಲೇ ಕುಳಿತು ಮಾತನಾಡುವ ಅವಕಾಶ ಸಿಗುತ್ತದೆ, ಶೇ. ೩೩% ಮೀಸಲು ಬಂದರೆ ೭೫ ಮಹಿಳಾ ಶಾಸಕರು ಸದನದಲ್ಲಿ ಇರುತ್ತೀರಿ, ಮಹಿಳಾ ಕಾಂಗ್ರೆಸ್ನ ವಿನೂತನ ಕಾರ್ಯ ಮೆಚ್ಚುವಂತಹದು, ಸರಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕೆಲಸ ಜೊತೆಗೆ ಸರಕಾರದ ಸಾಧನೆ ವಿವರಿಸುವ ಕೆಲಸ ಮಾಡಿರಿ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜ್ಯೋತಿಯ ಗೊಂಡಬಾಳ ಮಾತನಾಡಿ, ನಾವೆಲ್ಲ ಸಂಘಟಿತರಾಗಿ ಮುಂದೆ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಬರುವಂತೆ ಮಾಡಬೇಕಿದೆ, ಜಿಲ್ಲೆಯ ಐದೂ ವಿಧಾನಸಭೆಯಲ್ಲಿ ನಮ್ಮ ಶಾಸಕರು ಇರಬೇಕು, ಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ನಮ್ಮ ಗುರಿಯಾಗಿದ್ದು, ಹೆಚ್ಚಿನ ಸ್ಥಾನ ಗೆಲ್ಲುವಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ, ಸಣ್ಣಪುಟ್ಟ ಮನಸ್ಥಾಪಗಳು ಏನೇ ಇದ್ದರೂ ಬಿಟ್ಟು ಮುಂದೆ ಸಾಗಬೇಕು ಆಗ ಮಾತ್ರ ರಜಕೀಯ ಪಕ್ಷ ಕಟ್ಟಲು ಸಾಧ್ಯವಾಗುತ್ತದೆ, ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಸ್ಥಳಿಯ ನಾಮ ನಿರ್ದೇಶನಗಳಲ್ಲಿ ಅವಕಾಶ ಕೊಟ್ಟಿದ್ದಾರೆ, ಬರುವ ದಿನಗಳಲ್ಲಿ ರಾಜ್ಯಮಟ್ಟದ ಅವಕಾಶಗಳೂ ಸಿಗುತ್ತದೆ ಎಂದರು. ಮಹಿಳೆಯರು ವಿಧಾನಸಭೆ ಮತತು ಪರಿಷತ್ ಕಾರ್ಯಕಲಾಪ ವೀಕ್ಷಿಸಿ, ವಿಧಾನಸೌಧವನ್ನು ನೋಡಿದರು.
ಈ ವೇಳೆ ವೀಕ್ಷಣೆಗೆ ತೆರಳಲು ಅವಕಾಶ ಮಾಡಿಕೊಟ್ಟ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿಯಾಗಿ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ಅವರು ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ನೀಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜ್ಯೋತಿಯ ಗೊಂಡಬಾಳ ನೇತೃತ್ವದಲ್ಲಿ ಡಿಸಿಸಿ ಸದಸ್ಯೆ ಸುಮಂಗಲಾ ನಾಯಕ, ಡಿಎಂಸಿ ಸದಸ್ಯೆ ದೀಪಾ ರಾಠೋಡ, ಆರೋಗ್ಯ ಇಲಾಖೆ ಡಿಐಎಂಸಿ ಸದಸ್ಯೆ ರೇಷ್ಮಾ ಖಾಜಾವಲಿ, ಕಾರಟಗಿ ಬ್ಲಾಕ್ ಅಧ್ಯಕ್ಷೆ ಸೌಮ್ಯ ಕಂದಗಲ್, ಕುಷ್ಟಗಿ ಬ್ಲಾಕ್ ಅಧ್ಯಕ್ಷೆ ಶಕುಂತಲಾ ಹಿರೇಮಠ, ಗ್ಯಾರಂಟಿ ಸದಸ್ಯರಾದ ಪದ್ಮಾ ಬಸ್ತಿ, ರೇಣುಕಮ್ಮ ಕಾರಟಗಿ, ತಾವರಗೇರಾ ಪ.ಪಂ. ಸದಸ್ಯೆ ಬೇಬಿ ರೇಖಾ, ಭಾಗ್ಯನಗರ ಪ.ಪಂ. ಸದಸ್ಯೆ ಸವಿತಾ ಗೋರಂಟ್ಲಿ, ಆಶ್ರಯ ಸಮಿತಿ ಸದಸ್ಯರಾದ ಕಾವೇರಿ ರ್ಯಾಗಿ, ಶಿಲ್ಪಾ, ಮಹಿಳಾ ಕಾಂಗ್ರೆಸ್ ಮುಖಂಡರಾದ ಸೌಭಾಗ್ಯ ಗೊರವರ, ರೇಣುಕಾ ಪುರದ, ಯಶೋಧಾ ಮರಡಿ, ಗಂಗಮ್ಮ ನಾಯಕ, ಚನ್ನಮ್ಮ, ಪ್ರಮೀಳಾ, ಅನಿತಾ ಇತರರು ಇದ್ದರು.




