
ಸಿ ಪಿಎಸ್ ಶಾಲಾ ವಿದ್ಯಾರ್ಥಿಗಳಿಂದ ಪಲ್ಸ್ ಪೋಲಿಯೋ ಹಾಗೂ ಸಾರ್ವಜನಿಕ ಇಲಾಖೆಗಳ ಮಾಹಿತಿ.

Information from CPS school students about pulse polio and public departments.

ಗಂಗಾವತಿ. ಶಿಕ್ಷಣ ಇಲಾಖೆ ಹಾಗೂ ಎನ್ ಸಿಇ ಆರ್ ಟಿ ಸಿ ಆದೇಶದ ಅನ್ವಯ ಶನಿವಾರದಂದು ನಗರದ ಸಿಪಿಎಸ್ ಶಾಲೆಯ ವಿದ್ಯಾರ್ಥಿಗಳಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಇಲಾಖೆಗಳ ಕೆಲಸ ಕಾರ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಬೃಹತ್ ಜಾಥಾ ಮೂಲಕ ನಡೆಸಲಾಯಿತು. ಸಿಪಿಎಸ್ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಫರಿದಾ ಬೇಗಂ ಜಾಥಾ ಕಾರ್ಯಕ್ರಮ ಕುರಿತು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪಲ್ಸ್ ಪೋಲಿಯೋ ಕಾರ್ಯಕ್ರಮ ರವಿವಾರದಿಂದ ಆರಂಭಗೊಳ್ಳಲಿದ್ದು ಐದು ವರ್ಷದ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದರ ಮೂಲಕ ಪೋಲಿಯೋ ನಿರ್ಮೂಲನಕ್ಕೆ ಸರ್ವರು ಸಹಕಾರ ನೀಡಬೇಕೆಂದು ತಿಳಿಸಿದರು. ಶಾಲೆಯ ದೈಹಿಕ ಶಿಕ್ಷಕ ಸಿಪಿಎಸ್ ಶಾಲೆಯ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಂದ ಪೋಲಿಯೋ ಲಸಿಕೆ ಸೇರಿದಂತೆ ಸಾರ್ವಜನಿಕ ಇಲಾಖೆಗಳಾದ ಪೊಲೀಸ್ ಇಲಾಖೆ ಅಂಚೆ ಇಲಾಖೆ ನ್ಯಾಯಾಲಯದ ಸಂಕಿರಣ. ಪತ್ರಿಕಾ ಭವನ ಸೇರಿದಂತೆ ಗ್ರಂಥಾಲಯದ ಹಾಗೂ ಇಲಾಖೆಗಳ ಕೆಲಸ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು. ಪಲ್ಸ್ ಪೋಲಿಯೋ ಲಸಿಕೆ ಕುರಿತು ವಿವಿಧ ಘೋಷಣೆಗಳನ್ನು ಕೂಗುತ್ತಾ ಜಾಥಾವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು






