
ಚನ್ನಬಸವೇಶ್ವರ ಹಾಗೂ ಮಾರುತೇಶ್ವರ ಜಾತ್ರಾ ಮಹೋತ್ಸವ ಚನ್ನಮಲ್ಲ ಶ್ರೀಗಳಿಂದ ಚಾಲನೆ

Channabasaveshwara and Maruteshwara fairs inaugurated by Channamalla Sri

ಕನಕಗಿರಿ : ತಾಲ್ಲೂಕಿನ ಮುಸಲಾಪುರ ಗ್ರಾಮದ ಚನ್ನಬಸವೇಶ್ವರ ಹಾಗೂ 17 ನೇ ವರ್ಷದ ಜಾತ್ರೆ ಮಹೋತ್ಸವ ಹಾಗೂ ಮಾರುತೇಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ಕನಕಗಿರಿಯ ವಿರಕ್ತಮಠದ ಶ್ರೀ ಚನ್ನಮಲ್ಲ ಮಹಾಸ್ವಾಮಿ ಶುಕ್ರವಾರ ಸಂಜೆ ಚಾಲನೆ ನೀಡಿದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಚನ್ನಬಸವೇಶ್ವರ ಹಾಗೂ ಮಾರುತೇಶ್ವರ ದೇವರ ಅಗ್ನಿಕುಂಡ, ಅನ್ನಪಾಯಸ, ಹಾಲು ಓಕುಳಿ, ರಥಕ್ಕೆ ಅನ್ನಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.
ತೇರು ಬೀದಿ, ಮನೆ, ಮಾಳಿಗೆ ಮೇಲೆ ನಿಂತ ಭಕ್ತರು ಬಾಳೆಹಣ್ಣು, ಉತ್ತುತ್ತಿ, ಹೂ ಎಸೆದು ಧನ್ಯತೆ ಮೆರೆದರು. ದೇವಸ್ಥಾನದ ಆವರಣದಲ್ಲಿ ಅನ್ನ ದಾಸೋಹ ನಡೆಯಿತು. ರಥೋತ್ಸವದ ನಿಮಿತ್ತ ಜನ ಮೆಚ್ಚಿದ ಯಾರ ಹೂ ಯಾರ ಮುಡಿಗೆ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಕೊಪ್ಪಳ, ಕುಷ್ಟಗಿ, ಮುಸಲಾಪುರ, ರಾಂಪುರ, ಕನಕಗಿರಿ, ಓಬಳಬಂಡಿ, ಚಿಕ್ಕಮಾದಿನಾಳ, ಹುಲಸನಹಟ್ಟಿ, ಹಾಸಗಲ್ ಸೇರಿದಂತೆ ಸುತ್ತಮುತ್ತಲ್ಲಿನ ಸಾವಿರಾರು ಭಕ್ತರು ಹಾಗೂ ಜನ ಪ್ರತಿನಿಧಿಗಳು ಭಾಗವಹಿಸಿದ್ದರು.




