
The short URL of the present article is: https://kalyanasiri.in/gqaa
ಶ್ರೀ ಹನುಮಂತ ದೇವರ ಕಾರ್ತಿಕೋತ್ಸವ
Kartikotsavam of Lord Hanuman

ಗಂಗಾವತಿ:ತಾಲೂಕಿನ ಮರಳಿ ಗ್ರಾಮದಲ್ಲಿ ಮರಳಿಯ ಆರಾಧ್ಯ ದೈವ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವದ ಅಂಗವಾಗಿ ಮರಳಿ, ಪ್ರಗತಿನಗರ, ಜಂಗಮರ ಕಲ್ಗುಡಿ ಹಾಗೂ ಶ್ರೀರಾಮನಗರದ ವಿಪ್ರ ಬಾಂದವರು ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಪ್ರತಿ ವರ್ಷದಂತೆ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ವಾಯು ಸ್ತುತಿ, ವಿಷ್ಣು ಸಹಸ್ರನಾಮ, ಹನುಮಂತ ದೇವರಿಗೆ ಪಂಚಾಮೃತ, ಮಧು ಅಭಿಷೇಕ, ವಿವಿಧ ಹೂವು, ತುಳಸಿ, ರೇಷ್ಮೆ ವಸ್ತ್ರ, ವೀಳ್ಯದೆಲೆ ಅಲಂಕಾರ ನಂತರದಲ್ಲಿ ಪಲ್ಲಕ್ಕಿ ಉತ್ಸವದ ನಂತರ ತೀರ್ಥ ಹಾಗೂ ಪ್ರಸಾದದ ವಿತರಿಸಲಾಯಿತು. ರಾತ್ರಿ ದೇವಸ್ಥಾನದ ಆವರಣದಲ್ಲಿ ದೀಪ ಹಚ್ಚಿ ಬೆಳಗಿಸಲಾಯಿತು.
ಈ ಉತ್ಸವದಲ್ಲಿ ರಮೇಶ್ ಕುಲಕರ್ಣಿ, ಶ್ರೀನಿವಾಸ ಕೌಶಿಕ್, ಮನೋಹರ ಜಾಲಿಹಾಳ, ಗಿರಿಜಾ ಕುಲಕರ್ಣಿ, ಸವಿತಾ, ರಂಜನಾ ಅಳವಂಡಿ, ಪುಷ್ಪಾ ಕುಲಕರ್ಣಿ, ಗುಂಡುರಾವ್ ಕುಲಕರ್ಣಿ, ನಾರಾಯಣಾಚಾರ್ಯ ಜೋಶಿ, ಕೃಷ್ಣ ಜೋಶಿ ಜಂತಕಲ್, ಶ್ರೀನಿವಾಸಾಚಾರ್ಯ ಮುಕ್ಕುಂದಿ ಉಪಸ್ಥಿತರಿದ್ದರು.
ಜಾಹೀರಾತು

The short URL of the present article is: https://kalyanasiri.in/gqaa




