
ವಿಶೇಷ ಗಮನ ಸೆಳೆದ ಎಜ್ಯುಕೇರ್ ಶಾಲೆಯ ಯಂಗ್ ಮೈಂಡ್ ಎಕ್ಸ್ಪೋ

Educare School's Young Mind Expo attracts special attention
ಕೊಪ್ಪಳ, ೧೮- ವಿಜ್ಞಾನ ವಸ್ತು ಪ್ರರ‍್ಶನದಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳವಾಗುತ್ತದೆ ಶಾಲಾ ವರ‍್ಷಿಕೋತ್ಸವಕ್ಕಿಂತ ವಸ್ತು ಪ್ರರ‍್ಶನ ಮಾಡುವುದು ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನರ‍್ದೇಶಕ ಸೋಮಶೇಖರಗೌಡ ಬಿ ಹೇಳಿದರು.
ಅವರು ಇಲ್ಲಿನ ಚನ್ನಬಸವ ನಗರದಲ್ಲಿರುವ ಎಜ್ಯುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಹಮ್ಮಕೊಂಡಿದ್ದ ಯಂಗ್ ಮೈಂಡ್ ಎಕ್ಸ್ಪೋ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳ ಶೈಕ್ಷಣಿಕ ಬೆಳವಣಿಗೆ ಅವರ ಕಲಿಕೆ ಮತ್ತು ಸ್ವ ಇಚ್ಚಾಶಕ್ತಿಯಿಂದ ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ, ವಿಶ್ವಮಟ್ಟದಲ್ಲಿ ವಿಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಮಕ್ಕಳಿಗೆ ಬಾಲ್ಯದಲ್ಲೆ ಅದರ ಅರಿವು ಹಾಗೂ ಜ್ಞಾನ ನೀಡುವುದು ಅಗತ್ಯ ಎಂದರು.
ಎಜ್ಯುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಉತ್ತಮ ಆಟದ ಮೈದಾನ ಹಾಗೂ ಉತ್ತಮವಾದ ಕಟ್ಟಡದೊಂದಿಗೆ ಮಕ್ಕಳ ಕಲಿಕೆಗೆ ಒಳ್ಳೆಯ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲೆಯಲ್ಲಿ ಕೇವಲ ಪಾಠದ ಶಿಕ್ಷಣಕ್ಕೆ ಮಕ್ಕಳನ್ನು ಸಿಮಿತ ಗೋಳಿಸದೆ, ಆಟ , ಸಂಗೀತ ,ಕರಾಟೆ, ನೃತ್ಯ, ಚಿತ್ರಕಲೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ನಿಯಮಾನುಸಾರ ಶಿಕ್ಷಣ ನೀಡುತ್ತಿರುವುದು ಇತರರಿಗೆ ಮಾದರಿ ಎಂದರು.
ಈ ಸಂರ‍್ಭದಲ್ಲಿ ಮಕ್ಕಳು ತಯಾರಿಸಿದ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದ ಸೊಗಡಿನ ಛದ್ಮ ಭೂಷಣ, ಬಂಡಿ ವಸ್ತು ಪ್ರರ‍್ಶನ , ಹಸು, ಕೋಳಿ ಸಾಕಾಣಿಕೆ, ಬಾವಿ ನೀರು ಸೇದುವುದು, ಕುಟ್ಟುವುದು, ಬೀಸುವ ಕಲೆ ಪ್ರರ‍್ಶನ ಅಲ್ಲದೇ ತರಕಾರಿ ಸೇರಿದಂತೆ ಆಹಾರ ಪದರ‍್ಥಗಳ ಮಾರುಕಟ್ಟೆ, ರಾಜ್ಯದ ಅದ್ಬುತಗಳ ಚಿತ್ರದ ವಿವರಣ ವಿಧಾನ, ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ಚಿತ್ರದೊಂದಿಗೆ ವಿವರಣಾ ವಿಧಾನ ಗಮನ ಸೆಳೆಯಿತು.
ಈ ಸಂರ‍್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ, ಕನ್ನಡಪ್ರಭ ಪತ್ರಿಕೆಯ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ ಮಾತನಾಡಿ ,ನಿವೃತ್ತ ಉಪನ್ಯಾಸಕ ಬಸವರಾಜ ಸವಡಿ, ಇನ್ರ‍್ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧು ಪಾವಲಿಶೆಟ್ಟರ್, ಹಿರಿಯ ಉಪನ್ಯಾಸಕ ಗಿರಿಜಾಪತಿಸ್ವಾಮಿ, ಶಿಕ್ಷಕ ಆಬಿದ್ಹುಸೇನ್ ಸೇರಿದಂತೆ ಅನೇಕ ಗಣ್ಯರು, ಶಾಲಾ ಶಿಕ್ಷಕರು, ಪಾಲಕರು ಇದ್ದರು.




