18 ಗ್ರಾಪಂಗಳಿಂದ 33.71 ಲಕ್ಷ ರೂ. ತೆರಿಗೆ ಸಂಗ್ರಹ-ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಮಾಹಿತಿ
Rs 33.71 lakh tax collected from 18 gram panchayats - Ram Reddy Patil, Executive Officer of TAPAM, informedಗಂಗಾವತಿ : ತಾಲೂಕಿನ 18 ಗ್ರಾಮ ಪಂಚಾಯತ್ ಗಳಲ್ಲಿ 2025-26ನೇ ಸಾಲಿನಲ್ಲಿ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, *ಡಿ.17ರಂದು ನಡೆದ* ಒಂದ ದಿನದ ಕರ ವಸೂಲಾತಿಯಲ್ಲಿ ಎಲ್ಲ ಗ್ರಾ.ಪಂ.ಗಳಿಂದ ಒಟ್ಟು 33,71,856 ರೂ. ಸಂಗ್ರಹವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ತಿಳಿಸಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗದ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ನಿವೇಶನ ಮತ್ತು ನೀರಿನ ತೆರಿಗೆ , ಪೆಟ್ರೋಲ್ ಬಂಕ್ ಗಳು, ಖಾಸಗಿ ಶಾಲೆ-ಕಾಲೇಜುಗಳು, ವಾಣಿಜ್ಯ ಆಸ್ತಿಗಳ ತೆರಿಗೆ ಸೇರಿದಂತೆ ಇತರೆ ಎಲ್ಲಾ ಸಣ್ಣ/ದೊಡ್ಡ ವ್ಯಾಪಾರಿಗಳು ಪರವಾನಗಿ ನವೀಕರಿಸಿಕೊಳ್ಳುರವಂತೆ ಮನೆ – ಮನೆ ಭೇಟಿ ನೀಡಿ ಕರ ವಸೂಲಾತಿ ಆಂದೋಲನ ಕುರಿತು ಜಾಗೃತಿ ಮೂಡಿಸಲಾಗಿತ್ತು. ಗ್ರಾಪಂ ಕರವಸೂಲಿಗಾರರು, ಗ್ರಾಪಂ ಎಲ್ಲ ಸಿಬ್ಬಂದಿಗಳು ಅಭಿಯಾನದಲ್ಲಿ ಕರ ಸಂಗ್ರಹಿಸಿದ್ದಾರೆ. ತಾಲೂಕಿನ ಮಲ್ಲಾಪುರ ಗ್ರಾಪಂ 90000, ಡಣಾಪುರ ಗ್ರಾಪಂ 52376, ಸಣಾಪುರ ಗ್ರಾಪಂ 22745, ಆನೆಗೊಂದಿ ಗ್ರಾಪಂ 153444, ಸಂಗಾಪುರ ಗ್ರಾಪಂ 21859, ಮರಳಿ ಗ್ರಾಪಂ 104118, ಜಂಗಮರ್ ಕಲ್ಗುಡಿ ಗ್ರಾಪಂ 200001, ಆಗೋಲಿ ಗ್ರಾಪಂ 20266, ಹೊಸಕೆರಾ ಗ್ರಾಪಂ 36663, ಕೇಸರಹಟ್ಟಿ ಗ್ರಾಪಂ 122750, ಚಿಕ್ಕಬೆಣಕಲ್ ಗ್ರಾಪಂ 63636, ಹೇರೂರು ಗ್ರಾಪಂ 48864, ವೆಂಕಟಗಿರಿ ಗ್ರಾಪಂ 412000, ಬಸಾಪಟ್ಟಣ ಗ್ರಾಪಂ 112902, ಚಿಕ್ಕಜಂತಕಲ್ ಗ್ರಾಪಂ 68487, ಶ್ರೀರಾಮನಗರ ಗ್ರಾಪಂ 321402, ವಡ್ಡರಹಟ್ಟಿ ಗ್ರಾಪಂನಲ್ಲಿ1464921 ರೂ. ಸೇರಿ 18 ಗ್ರಾಪಂಗಳಿಂದ 33,71,856 ರೂ.
ಕರ ವಸೂಲಿ ಸಂಗ್ರಹವಾಗಿದೆ. ಸಂಗ್ರಹವಾಗಿರುವ ಕರದಲ್ಲಿ ಗ್ರಾಪಂ ಸಿಬ್ಬಂದಿಗಳ ವೇತನ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
Kalyanasiri Kannada News Live 24×7 | News Karnataka
