ಅಂಜನಾದ್ರಿ ಬೆಟ್ಟ ಸಮೀಪದಋಷಿಮುಖ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಶಿಬಿರ.
Cleanliness camp in the area around Rishimukh near Anjanadri Hill.
ಗಂಗಾವತಿ:ಅಂಜನಾದ್ರಿ ಬೆಟ್ಟ ಸಮೀಪದ ಋಷಿಮುಖ ಪರ್ವತದಲ್ಲಿ ಮಂಗಳವಾರ ಸ್ವಚ್ಛತೆ ಹಾಗೂ ಪರಿಸರ ಜಾಗೃತಿಯ ಉದ್ದೇಶದಿಂದ ಎಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) – ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್ (SFD) ಆಯಾಮ ಹಾಗೂ ಹಕ್ಕ ಬುಕ್ಕ ಬ್ರಿಗೇಡ್ ಇವರ ಸಂಯುಕ್ತ ಸಹಯೋಗದಲ್ಲಿ ಸ್ವಚ್ಛತಾ ಶಿಬಿರ ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರದ ಭಾಗವಾಗಿ ಪ್ರದೇಶದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಜೊತೆಗೆ ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮವೂ ನಡೆಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ಗಂಗಾವತಿ ನಗರ ಕಾರ್ಯದರ್ಶಿ ಕಿರಣ್ ವಸ್ತ್ರದ್ ಅವರು ಉಪಸ್ಥಿತರಿದ್ದು, ಪರಿಸರ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದದ್ದೆಂದು ತಿಳಿಸಿದರು.
ಸಂಘಟನೆಯ ಕಾರ್ಯಕರ್ತರಾದ ಗಣೇಶ್ ಜೆ.ಎಸ್., ವಿನಯ್ ರೆಡ್ಡಿ, ಸುಪ್ರೀತ್, ಗೌತಮ್, ಕಾರ್ತಿಕ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯದಲ್ಲಿ ಶ್ರಮಿಸಿದರು.
ಅದೇ ವೇಳೆ ಹಕ್ಕ ಬುಕ್ಕ ಬ್ರಿಗೇಡ್ ಪ್ರಮುಖರಾದ ವೀರೇಶ್ ಅಂಜನಾದ್ರಿ ಹಾಗೂ ಮುತ್ತು ನಾಯಕ್ ಅವರು ಉಪಸ್ಥಿತರಿದ್ದು, ಪರಿಸರ ಜಾಗೃತಿ ಮೂಡಿಸುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರಾದ ಅಕ್ಕನಾಗಮ್ಮ, ಆಶಾಲತಾ, ಚೈತ್ರ, ಜಯಶ್ರೀ, ಪೂಜಾ ಹಾಗೂ ಗಾಯತ್ರಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಈ ಸ್ವಚ್ಛತಾ ಹಾಗೂ ಸಸಿ ನೆಡುವ ಶಿಬಿರವು ಸಮಾಜದಲ್ಲಿ ಪರಿಸರ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಸಹಾಯಕವಾಯಿತು. ಮುಂದಿನ ದಿನಗಳಲ್ಲಿ ಇಂತಹ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರೆಸುವುದಾಗಿ ಆಯೋಜಕರು ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka