ಕನಕಗಿರಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಘಟಕಕ್ಕೆ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ
All office bearers elected unopposed to Kanakagiri Taluk Karnataka Working Journalists' Unit
ಕನಕಗಿರಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್.ವೈ, ರಾಜ್ಯ ಸಮಿತಿ ಸದಸ್ಯರಾದ ವೀರಣ್ಣ ಕಳ್ಳಿಮನಿ ಅವರ ನೇತೃತ್ವದಲ್ಲಿ ಕನಕಗಿರಿ ತಾಲೂಕ ಘಟಕದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ಕನಕಗಿರಿ ತಾಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಘಟಕಕ್ಕೆ ನೂತನ ಅಧ್ಯಕ್ಷರ ಹಾದಿಯಾಗಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸೋಮಶೇಖರಯ್ಯಸ್ವಾಮಿ, ಉಪಾಧ್ಯಕ್ಷರಾಗಿ ಗೌತಮ್ ಯಾದವ್, ಮಹಾಂತೇಶ ಅಂಗಡಿ, ಪ್ರಧಾನ ಕಾರ್ಯದರ್ಶಿ ಪ್ರಲ್ಹಾದ್ ರೆಡ್ಡಿ ಮಾದಿನಾಳ, ಕಾರ್ಯದರ್ಶಿಯಾಗಿ ಹೊನ್ನುರ ಹುಸೇನ್, ಖಜಾಂಚಿಯಾಗಿ ಶ್ರೀನಿವಾಸ ಪೂಜಾರ್, ತಾಲೂಕಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮೀಕಾಂತ್, ಮಂಜುನಾಥ ಮಾಲಿ ಪಾಟೀಲ್, ಪ್ರವೀಣ್ ಕೋರಿ, ಶೇಖರ್ ಸಿಂಗ್, ಹುಲಗೇಶ ಉಪ್ಪಾರ, ಚೇತನ ಯಾದವ್, ಅಯ್ಯಪ್ಪ ವಿಶ್ವಕರ್ಮ ಆಯ್ಕೆಯಾಗಿದ್ದಾರೆ.*
ಅವಿರೋಧವಾಗಿ ನೂತನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಘಟಕ ರಚನೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಹನುಮಂತ ಹಳ್ಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್. ವೈ , ರಾಜ್ಯ ಸಮಿತಿ ಸದಸ್ಯರಾದ ವೀರಣ್ಣ ಕಳ್ಳಿಮನಿ ಅವರು
ಆನಂತ ಅನಂತ ಧನ್ಯವಾದಗಳನ್ನು ತಿಳಿಸಿದರು ಹಾಗೂ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನಕಗಿರಿ ತಾಲೂಕಿನ ಎಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಘಟಕ ಸದಸ್ಯರು ಹಾಜರಿದ್ದರು.
Kalyanasiri Kannada News Live 24×7 | News Karnataka