ಪಚ್ಚೆದೊಡ್ಡಿ ಶಾಲೆಗೆ ಆನೆ ದಾಳಿ
ಪೀಟೋಪಕರಣಗಳು ನಾಶ
Elephant attacks Pachedoddy school, artillery equipment destroyed.

ವರದಿ: ಬಂಗಾರಪ್ಪ .ಸಿ .
ಹನೂರು :ಇತ್ತಿಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಭೆಜಾವಬ್ದಾರಿಯೆ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .
ತಾಲ್ಲೂಕಿನ ಪಚ್ಚೆದೊಡ್ಡಿಯಲ್ಲಿನ
ಶಾಲೆಗೆ ಕಾಡನೆಯು ಲಗ್ಗೆಯಿಟ್ಟಿದ್ದು ಶಾಲೆಯ ಸುತ್ತುಗೋಡೆ , ಕುಡಿಯುವ ನೀರಿನ ಪೈಪ್‌ಗಳು ಸೇರಿದಂತೆ ಇನ್ನಿತರ ವಸ್ತುಗಳು ಹಾಳಾಗುತ್ತಿದ್ದು, ಗ್ರಾಮಸ್ಥರು
ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು .
ಗ್ರಾಮದ ರೈತ ಮುಖಂಡರಾದ ಬಸವರಾಜು ಕಾಂಚಳ್ಳಿ ಮಾತನಾಡಿ ನಮ್ಮ ಗ್ರಾಮವು ಕಾಡಂಚಿನಲ್ಲಿದ್ದು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅಧಿಕಾರಿಗಳು ವಿಪಲವಾಗಿದ್ದಾರೆ ,ಇದೆ ವಿಷಯವಾಗಿ ಶಿಕ್ಷಣ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಗ್ರಾಮಕ್ಕೆ ಉಂಟಾದ ನಷ್ಟವನ್ನು ಭರಿಸಬೇಕಾಗಿದೆ ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .

Kalyanasiri Kannada News Live 24×7 | News Karnataka