ಶಕ್ತಿ ಯೋಜನೆ, ಕೈ ಬಿಡಿ. ಶಿಕ್ಷಣ ಮತ್ತು ಆರೋಗ್ಯ ಭಾಗ್ಯ ನೀಡಿ.– ಮುಖ್ಯಮಂತ್ರಿಗಳಿಗೆ ಮ್ಯಾಗಳಮನಿ ಒತ್ತಾಯ.
Give up the power scheme. Give education and health benefits.-- Magalamani urges the Chief Minister.
ಗಂಗಾವತಿ:- 14-ಚಳಿಗಾಲ ಅಧಿವೇಶನದಲ್ಲಿ ಶಿಕ್ಷಣ ಹಾಗೂ ಅರೋಗ್ಯ ಭಾಗ್ಯ ಘೋಷಣೆ ಮಾಡುವಂತೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಒತ್ತಾಯಿಸಿದ್ದಾರೆ. ಶಕ್ತಿಯೋಜನೆಯು ಸ್ತೀಯರ ಸಬಲೀಕರಣ ಯೋಜನೆ ಆಗದೇ ಸರ್ಕಾರ ಆರ್ಥಿಕ ಹೊರೆ ಅನುಭವಿಸುತ್ತಿದೆ. ಅದರ ಬದಲು ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ನೀಡಬೇಕು.ಎಲ್ಲಾ ವರ್ಗದ ಬಡ ಮಕ್ಕಳು ಡಾಕ್ಟರ್, ಇಂಜನಿಯರ್, ಐ ಟಿ ಐ, ಡಿಪ್ಲೋಮ, ನರ್ಸಿಂಗ್ ನಂತಹ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಡಮಕ್ಕಳು ವಂಚಿತರಗುತ್ತಿದ್ದಾರೆ. ಯಾವುದೇ ಶುಲ್ಕ ಇಲ್ಲದೇ ಉಚಿತ ಶಿಕ್ಷಣ ಸರ್ಕಾರ ನೀಡಬೇಕು ಹಾಗೂ ಹೃದಯ, ಕಿಡ್ನಿ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ಬಳಲುವ ಬಡ ರೋಗಿಗಳು ಬಿ ಪಿ ಎಲ್ ಕಾರ್ಡ್ ತೋರಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ.ಸರ್ಕಾರಿ ಆಸ್ಪತ್ರೆಗಳು ಹೆಸರಿಗಷ್ಟೇ ಆಸ್ಪತ್ರೆಗಳು ಇಲ್ಲಿ ಎಲ್ಲಾ ಸೌಲಭ್ಯಗಳಿರುವದಿಲ್ಲ. ಇದರಿಂದ ಖಾಸಗಿ ಕೇಂದ್ರಗಳಿಗೆ ಶಿಫಾರಸ್ಸು ಮಾಡುತ್ತಾರೆ. ಬಡವರಿಗೆ ಬಹಳ ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯದ ಖಾಸಗಿ ಆಸ್ಪತ್ರೆ ಸೇರಿದಂತೆ ಯಾವುದೇ ಆಸ್ಪತ್ರೆಗಳಲ್ಲಿ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ ಉಚಿತ ಚಿಕಿತ್ಸೆ ನೀಡಬೇಕು.ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತುಖಾಸಗಿ ಆಸ್ಪತ್ರೆಗಳು ವಾಣಿಜ್ಯ ಕೇಂದ್ರಗಳಾಗಿವೆ. ಹಣ ಮಾಡುವದೇ ಇವರ ದೊಡ್ಡ ಗುರಿ ಮತ್ತು ಉದ್ದೇಶವಾಗಿದೆ. ಸರ್ಕಾರ ಕೂಡ ಇವುಗಳ ನಿಯಂತ್ರಣ ಮಾಡುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರಿಕರಣವಾಗುತ್ತಿದೆ.ಇವುಗಳು ಬಡವರ ಕೈಗೆ ದೊರಕುತ್ತಿಲ್ಲ, ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿವೆ ಹಾಗಾಗಿ ತಾವುಗಳು ಬಡವರ ಪರವಾಗಿರುವ ಮುಖ್ಯ ಮಂತ್ರಿಗಳು ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉಚಿತವಾಗಿ ನೀಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಈ ಅಧಿವೇಶನದಲ್ಲಿ ಘೋಷಣೆ ಮಾಡಬೇಕೆಂದು ಮ್ಯಾಗಳಮನಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್ ಬಿ ಕೆ,ಬೋಗೇಶ್, ಹನುಮೇಶ್ ಖಾಟಾಪುರ, ಪಂಪಾಪತಿ ಕುರಿ,ಜಂಬಣ್ಣ,ಡೇವಿಡ್, ಸೋಮಶೇಖರ್,ಉದಯಕುಮಾರ್, ಲಕ್ಕಣ್ಣ, ಬಲಕುಂದಪ್ಪ, ಅನ್ವರ್, ನರಸಪ್ಪ, ಹುಲ್ಲೇಶ್, ಮತ್ತಿತರರು ಇದ್ದರು.
Kalyanasiri Kannada News Live 24×7 | News Karnataka