ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ
Unveiling talent in self-confidence—Dr. Manjunatha Kukanoor
ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ ಜಾತಿ ಅಡ್ಡಬರುವದಿಲ್ಲ ಶ್ರದ್ಧೆ ಮತ್ತು ಆತ್ಮವಿಶ್ವಾಸ ಇದ್ದಲ್ಲಿ ಪ್ರತಿಭೆ ಅನಾವರಗೊಳ್ಳುತ್ತದೆ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಡಾ! ಮಂಜುನಾಥ ಕುಕನೂರ ಅಭಿಪ್ರಾಯಪಟ್ಟರು.
ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗ್ರಾಮದ ವಿದ್ಯಾರ್ಥಿ ಕರಣಕುಮಾರ ಸುಭಾಷ ಬಟಗೇರಿರವರು ಸ್ಕೂಲ್ ಗೇಮ್ಸ್ ಫೆಡ್ರೆಷನ ಆಫ್ ಇಂಡಿಯಾ ವತಿಯಿಂದ ದೇಶದ ಅರುಣಾಚಲ ಪ್ರದೇಶ ರಾಜ್ಯದ ಇಟಾ ನಗರದಲ್ಲಿ ನಡೆದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರ ನಾಗಿದ್ದಾನೆ ಎಂದು ಅಭಿಮಾನದ ನುಡಿಗಳನ್ನಾಡಿದರು. ಮುಧೋಳದ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಕರಣಕುಮಾರ ಸುಭಾಷ್ ಬೆಟಗೇರಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಯುವಕ ಮಂಡಳದವರು ಸ್ಥಳೀಯ ಹಾಲುಮತ ಸಮಾಜದವರು ಮತ್ತು ತಾಲೂಕಾ ರೈತ ಸಂಘದ (ವಾಸುದೇವ ಬಣ) ಅಧ್ಯಕ್ಷರಾದ ಶರಣಬಸಪ್ಫ ದಾನಕೈ ರವರು ವಿದ್ಯಾರ್ಥಿ ಕರಣಕುಮಾರನ ಸಾಧನೆಯನ್ನು ಮೆಚ್ಟಿ ಸನ್ಮಾನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ರಾದ ಲಿಂಗರಾಜ ಉಳ್ಳಾಗಡ್ಡಿಯವರುವಹಿಸಿಕೊಂಡಿದ್ದರು ಮುಖ್ಯ ಅತಿಥಿಯಾದ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ ಪ್ರೌಢ ಶಾಲಾ ಮಟ್ಟದಲ್ಲಿ ಇಂತ ದೊಡ್ಡ ಸಾಧನೆ ಮಾಡಿದ್ದು ನಮ್ಮ ಗ್ರಾಮಕ್ಕೆ ಅಷ್ಟೇ ಅಲ್ಲ ತಾಲೂಕು ಜಿಲ್ಲೆ ರಾಜ್ಯಕ್ಕೆ ಒಳ್ಳೆ ಹೆಸರು ತಂದಿದ್ದಾನೆ ಇದರ ಹಿಂದೆ ಪಾಲಕರ ಪೋಷಕರ ಶ್ರಮವೂ ಇದೆ ಎಂದರು ವಿವಿಧ ಸ್ಥಳಗಳಲ್ಲಿ ಬಾಲಕನಿಗೆ ತರಬೇತಿ ಕೊಡಿಸಿ ಈ ಮಟ್ಟಕ್ಕೆ ಬೆಳೆಸಿದ್ದಾರೆಂದರು ಈ ಬಾಲಕನ ಸಾಧನೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲಿ ಎಂದು ಶುಭ ಹಾರೈಸಿದರು ತಳ ಹಂತದ ಬಾಲಕನ ಸಾಧನೆ ಮೆಚ್ಚುವಂತದ್ದು ಇಂದಿನ ಯುವಕರಿಗೆ ಇದು ದಾರಿ ದೀಪ ವಾಗಿದೆ ಎಂದರು ಸನ್ಮಾನ ಸಮಾರಂಭದಲ್ಲಿ ಶ್ರೀ ಕರವೀರಭದ್ರೇಶ್ವರರ ಸೇವಾ ಸಮಿತಿಯ ಅಧ್ಯಕ್ಷರಾದ ಶರಣಪ್ಪಗೌಡ ವಿ ಪಾಟೀಲ ಶರಣ ಬಸಪ್ಪ ದಾನಕೈ ! ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ಯಾಮೀದ ಸಾಬ ಮುಲ್ಲಾ ಬಸವರಾಜ ಉಳ್ಳಾಗಡ್ಡಿ ˌಭೀಮಣ್ಣ ಬಂಡಿ ˌಮುತ್ತಣ್ಣ ಗೊಂಗಡಶೆಟ್ಟಿ ˌ ನಾಗಪ್ಪ ಸೋಮಣ್ವವರ ˌಶರಣಯ್ಯ ಮಾವಿನಗಿಡದˌ ಮಾಜೀ ಸೈನಿಕ ವೀರಣ್ಣ ಅರಳಿ ˌ ಕಳಕಪ್ಪ ರಾಟಿ ˌ ವೀರಪ್ಪ ಅಬ್ಬಿಗೇರಿ ˌಪರಶುರಾಮ ಲಮಾಣಿ ಗ್ರಾಂ ಪಂ ಸದಸ್ಯರಾದ ಮರ್ದಾನ ಸಾಬ ಮುಲ್ಲಾ ˌ ರಾಮಣ್ಣ ಹೊಕ್ಕಳದˌ ಮಂಜುನಾಥ ನಿಂಗೋಜಿ ˌನ್ಯಾಯವಾದಿ ಕೆ.ಆರ್.ಬಟಗೇರಿ ˌ ಗವಿಸಿದ್ಧಪ್ಪ ಬಟಗೇರಿ ˌ ಶರಣಪ್ಪ ಕುರಿ ˌಶರಣಪ್ಪ ಹೊಸಳ್ಳಿˌ ಯುವಕ ಮಂಡಳ ಅಧ್ಯಕ್ಷ ನಿಖಿಲ್ ಗೊಂಗಡಶೆಟ್ಟಿ ˌಮಂಜು ಬಟಗೇರಿ ˌಶರಣಪ್ಪ ಮುಗಳಿ ˌಆನಂದ ನಿಂಗೋಜಿ ˌ ಇನ್ನೂ ಮುಂತಾದವರು ಹಾಗೂ ಬೆಟಗೇರಿ ಬಂಧುಗಳು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದು ಬಾಲಕನಿಗೆ ಶುಭ ಹಾರೈಸಿದರು ನಂತರ ಕುಷ್ಟಗಿಯ ಸ್ಪಂದನ ಮ್ಯೂಜಿಕ್ ಇವೆಂಡೆಸ್ ಕಲಾ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು .
ಪ್ರಾ.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಗೌಡಪ್ಪ ಬಲಕುಂದಿ ನಿರೂಪಿಸಿದರು ˌ ಯಮನೂರಪ್ಪ ಹವಳಿ ಸ್ವಾಗತಿಸಿ ವಂದಿಸಿದರು !
ಕರವೀರಬಧ್ರೇಶ್ವರನ ರಥತೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು.
ಪ್ರಕಟಣೆಯ ಕ್ರಪೆಗಾಗಿ
ವೀರಣ್ಣ ನಿಂಗೋಜಿ
90085—85482
Kalyanasiri Kannada News Live 24×7 | News Karnataka