ಶಿಕ್ಷಣ ತಜ್ಞ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ-ಜಗನ್ನಾಥ್ ಆಲಂ ಪಲ್ಲಿ
Educationist Award has increased responsibility-Jagannath Alam Palli
ಗಂಗಾವತಿ:ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ದಿನಾಂಕ 28ರಿಂದ ಮೂರು ದಿನಗಳ ಕಾಲ ಯಾದಗಿರಿಯಲ್ಲಿ ಜರುಗಲಿರುವ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಒಂದು ಕಡೆ ಸಂತಸವಾದರೆ ಮತ್ತೊಂದು ಕಡೆ ಮತ್ತಷ್ಟು ಜವಾಬ್ದಾರಿ ಅನುಸರಿಸಬೇಕಾದ ಅವಶ್ಯಕತೆ ಇದೆ ಎಂದು ಲಿಟಲ್ ಹಾಟ್ ಶಾಲೆಯ ಹಾಗೂ

ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲಮಾ ಧ್ಯಮ ಶಾಲೆಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹೇಳಿದರು. ಅವರು ಸ್ವಾಮಿ ವಿವೇಕಾನಂದ ಆಂಗ್ಲಭಾಧ್ಯಮ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಂದ ಅಭಿನಂದನ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ನಿರ್ದಿಷ್ಟವಾದ ಗುರಿ ಹಾಗೂ ಗುರುಗಳ ಅನುಗ್ರಹದಿಂದ ಸಾಧನೆಗೆ ಪ್ರೇರಕವಾಗುತ್ತದೆ. ಎಂದು ತಾವು ನಡೆದು ಬಂದ ದಾರಿಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯಾರಾದ ಶಾರುಣ್ ಕುಮಾರಿ. ಶಿಕ್ಷಕರಾದ ಅಪರ್ಣ. ಭುವನೇಶ್ವರಿ. ಸುನಿತಾ ಶಾಂತ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡು ಸಂತೋಷವನ್ನು ವ್ಯಕ್ತಪಡಿಸಿದರು.
Kalyanasiri Kannada News Live 24×7 | News Karnataka