Agriculture Department gives advice to farmers on various crop managementಕೊಪ್ಪಳ ಡಿಸೆಂಬರ್ 11, (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ಕೊಪ್ಪಳ ಹಾಗೂ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ವತಿಯಿಂದ ಜಿಲ್ಲೆಯ ರೈತರಿಗೆ ಭತ್ತ, ಕಡಲೆ, ಜೋಳ, ಸೂರ್ಯಕಾಂತಿ, ಅಲಸಂದಿ, ಹುರುಳಿ, ತೊಗರಿ, ಬೆಳೆಯಲ್ಲಿ ಬರುವ ಕೀಟ ಮತ್ತು ರೋಗ ಬಾಧೆ ನಿಯಂತ್ರಣ ಹಾಗೂ ನಿರ್ವಹಣೆಗೆ ರೈತರಿಗೆ ಸಲಹೆಯನ್ನು ನೀಡಲಾಗಿದೆ.
ಭತ್ತ ಬೆಳೆಯು ನರ್ಸರಿ ಹಂತದಲ್ಲಿರುವಾಗ ಭತ್ತದ ನರ್ಸರಿಯಲ್ಲಿ ಕಣೆ ನೊಣದ ಬಾಧೆಯನ್ನು ನಿರ್ವಹಣೆ ಮಾಡಲು ಥೈಯೋಮಿಥಾಕ್ಸಮ್ 0.2 ಗ್ರಾಂ ಅಥವಾ ಪ್ರಿಪೋನಿಲ್ 2.0 ಮಿ.ಲೀ. ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಣೆ ಹುಳು ಆಶ್ರಯಿಸುವ ಹುಲ್ಲಿನ ಜಾತಿಯ ಕಳೆಗಳನ್ನು ನಾಶಪಡಿಸಬೇಕು.
ಕಡಲೆ ಬೆಳೆಯು ಬೆಳವಣಿಗೆ ಅಥವಾ ಹೂವಾಡುವ ಹಂತದಲ್ಲಿದ್ದಾಗ ಕಡಲೆಯಲ್ಲಿ 35-40 ದಿನದ ಬೆಳೆಯಲ್ಲಿ ಕುಡಿ ಚಿವುಟುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಸಹಾಯವಾಗುವುದಲ್ಲದೇ ಹೆಚ್ಚಿನ ಇಳುವರಿ ಪಡೆಯಬಹುದು. ಕಡಲೆ ಹೂವು ಬಿಡುವ ಸಮಯದಲ್ಲಿ ಚಿಕ್‌ಪೀ ಮ್ಯಾಜಿಕ್ @ 10 ಗ್ರಾಂ ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಯಕೊರಕದ ಬಾಧೆಯನ್ನು ಕಡಿಮೆ ಮಾಡಲು 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ. ಅಥವಾ 0.1 ಮಿ.ಲೀ. ಸ್ಪೆöÊನೋಸ್ಯಾಡ್ 45 ಎಸ್.ಸಿ. ಪ್ರತಿ ಲೀ.ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಕಡಲೆ ಬೆಳೆಯಲ್ಲಿ ಸೊರಗು ರೋಗ ನಿರ್ವಹಣೆ ಮಾಡಲು 2.5 ಗ್ರಾಂ ಸಾಫ್ ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹಿAಗಾರಿ ಜೋಳ ಬೆಳೆಯು ಬೆಳವಣಿಗೆ ಹಂತದಲ್ಲಿದ್ದಾಗ ಸೈನಿಕ ಹುಳು (ಲದ್ದಿ ಹುಳು) ಕಂಡುಬAದಾಗ 0.5 ಗ್ರಾಂ ಇಮಾಮೆಕ್ಟಿನ್ ಜೆಂಜೊಯೇಟ್ 5 (ಎಸ್‌ಜಿ) ಅಥವಾ ಕೊರೆಂಟ್ರಾಯನ್ ಇಲಿಪ್ರೋಲ 0.4 (ಜಿಆರ್) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೆಳೆಗೆ ಶಿಫಾರಸಿನ ಉಳಿದ ಶೇ 50 ರಷ್ಟು ಸಾರಜನಕವನ್ನು ಬಿತ್ತಿದ 30 ದಿನಗಳ ನಂತರ ಮೇಲು ಗೊಬ್ಬರವಾಗಿ ಕೊಡಬೇಕು.
ಸೂರ್ಯಕಾಂತಿ ಬೆಳೆಯು ಬೆಳವಣಿಗೆ ಹಂತದಲ್ಲಿದ್ದಾಗ ರಸ ಹೀರುವ ಕೀಟಗಳು (ಹಸಿರು ಜಿಗಿ ಹುಳು/ಥ್ರಿಪ್ಸ್ ನುಶಿ/ ಬಿಳಿನೊಣ) 0.2 ಗ್ರಾಂ. ಥಯೋಮಿಥಾಕ್ಸಾಮ್ (25 WG) ಅಥವಾ 1 ಮಿ.ಲೀ. ಫಿಪ್ರೊನಿಲ್ (5 SP) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಅಲಸAದಿ ಬೆಳೆಯು ಕಾಯಿಕಟ್ಟುವ ಹಂತದಲ್ಲಿದ್ದಾಗ ಸಸ್ಯ ಹೇನು ನಿರ್ವಹಣೆಗಾಗಿ ಇಮಿಡಾಕ್ಲೋಪ್ರಿಡ್ 17.8 ಎಸ್.ಸಿ. 0.5 ಮಿ.ಲೀ. ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು. ಹುರುಳಿ ಬೆಳೆಯು ಬೆಳವಣಿಗೆ ಹಂತದಲ್ಲಿದ್ದಾಗ ಬೂದಿ ರೋಗ ನಿರ್ವಹಣೆಗಾಗಿ ಹೆಕ್ಸಾಕೋನೋಜೆಲ್ 1.0 ಮಿ.ಲೀ. ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು.
ತೊಗರಿ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಕಾಯಿಕೊರಕದ ಬಾಧೆಯನ್ನು ಕಡಿಮೆ ಮಾಡಲು 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ. ಅಥವಾ 0.1 ಮಿ.ಲೀ. ಸ್ಪೆöÊನೋಸ್ಯಾಡ್ 45 ಎಸ್.ಸಿ. ಪ್ರತಿ. ಲೀ.ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಗೊಡ್ಡುರೋಗ ನಿರ್ವಹಣೆಗೆ ನೀರಿನಲ್ಲಿ ಕರಗುವ ಗಂಧಕ 2 ಗ್ರಾಂ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಗೊಡ್ಡುರೋಗ ಬಾಧಿತ ಗಿಡಗಳನ್ನು ಕಿತ್ತು ಸುಟ್ಟು ಹಾಕಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka