ಶಿಕ್ಷಣ ಕ್ಷೇತ್ರಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ: ಡಾ. ಚನ್ನಬಸಪ್ಪ ಚಿಲ್ಕರಾಗಿ
The contribution of monks to the field of education is immense: Dr. Channabasappa Chilkaragi
ಗಂಗಾವತಿ: ಪ್ರಾಚೀನ ಭಾರತದಲ್ಲಿ ಶಿಕ್ಷಣದ ಜವಾಬ್ದಾರಿಯನ್ನು ದೇವಾಲಯಗಳು ಮತ್ತು ಮಠಗಳು ವಹಿಸಿಕೊಂಡಿದ್ದವು. ರಾಜ ಮಹಾರಾಜರು ಶಿಕ್ಷಣ ಕೇಂದ್ರಗಳಿಗೆ ಉದಾರವಾಗಿ ದಾನ ದತ್ತಿಗಳನ್ನು ನೀಡಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹಿಸುತ್ತಿದ್ದರು .ಪ್ರಾಚೀನ ಕಾಲದ ಶಿಲಾ ಶಾಸನಗಳು ಶಿಕ್ಷಣ ಸಾರ್ವತ್ರಿಕ ವಾಗಿದ್ದರ ಬಗ್ಗೆ ಉಲ್ಲೇಖಿಸುತ್ತದೆ. ಜಾನಪದ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಅನುಭವ ಸಾಹಿತ್ಯಗಳು ರಚನೆಯಾಗಲು ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಕಾರಣ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ .ಮೆಕಾಲೆಯ ನಂತರ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು ಎಂಬುದನ್ನು ಒಪ್ಪಿಕೊಳ್ಳಬಹುದಾದರು ಈ ಪ್ರಾಚೀನ ಬೆಳವಣಿಗೆಗಳನ್ನು ಗಮನಿಸಿದರೆ ಅವುಗಳ ಹಿಂದಿನ ಸಾರ್ವತ್ರಿಕ ಶಿಕ್ಷಣದ ವ್ಯವಸ್ಥೆಯನ್ನು ನಿರಾಕರಿಸುವಂತಿಲ್ಲ ಎಂದು ಗಂಗಾವತಿಯ ಎಸ್. ಕೆ.ಎನ್.ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಿರಿಯ ಸಾಹಿತಿಗಳು ಆದ ಡಾ. ಸಿ. ಬಿ .ಚಿಲ್ಕರಾಗಿ ಅವರು ಅಭಿಪ್ರಾಯಪಟ್ಟರು ಅವರು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾಗಿದ್ದ ಕಲ್ಮಠದ ಲಿಂಗೈಕ್ಯ ಶ್ರೀ ಚನ್ನಬಸವ ಶಿವಯೋಗಿಗಳ ಸ್ಮರಣಾರ್ಥದ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಗಂಗಾವತಿಯಲ್ಲಿ ಶಿಕ್ಷಣ, ಸಂಗೀತ ಮತ್ತು ಸಾಹಿತ್ಯಕ್ಕೆ ಪ್ರೇರಣೆ ನೀಡಿ ಜ್ಞಾನ ದೀಪವನ್ನು ಬೆಳಗಿದ ದಿವ್ಯ ಚೇತನ ಕಲ್ಮಠದ ಚನ್ನಬಸವ ಸ್ವಾಮಿಗಳು ಅವರು ಸ್ವಾತಂತ್ರ್ಯ ಹೋರಾಟಕ್ಕೂ ಪ್ರೋತ್ಸಾಹ ನೀಡಿದ ಸಂಗತಿ ಸ್ಮರಣಾರ್ಹವಾಗಿದೆ. ಅವರು ಹಚ್ಚಿದ ಜ್ಞಾನ ದೀಪವನ್ನು ಪ್ರಸ್ತುತ ಡಾ. ಕೊಟ್ಟೂರು ಮಹಾಸ್ವಾಮಿಗಳು ಪ್ರಜ್ವಲಗೊಳಿಸಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಕೆ. ಚನ್ನಬಸಯ್ಯ ಸ್ವಾಮಿಯವರು ಸಂಸ್ಥೆವಯು ಕಳೆದ 60 ವರ್ಷಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ .ಇಲ್ಲಿ ಕೆಜಿಯಿಂದ ಪಿಜಿ ಯವರೆಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸಲಾಗಿದ್ದು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಈ ಸಂಸ್ಥೆ ಇಂದು ಹೆಮ್ಮೆರವಾಗಿ ಬೆಳೆಯುವಲ್ಲಿ ಲಿಂ. ಕಲ್ಮಠದ ಚನ್ನಬಸವ ಸ್ವಾಮಿಗಳ ದೂರದೃಷ್ಟಿಯೇ ಕಾರಣ ಹಾಗಾಗಿ ಅವರು ಗಂಗಾವತಿಯ ಜ್ಞಾನ ದೀಪವೆಂದು ಹೇಳಿದರು. ಪ್ರಾಚಾರ್ಯ ಡಾ. ರವಿ ಚವಾಣ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್, ಸಹ ಕಾರ್ಯದರ್ಶಿ ಎಚ್. ಎಂ. ಮಂಜುನಾಥ್ ವಕೀಲರು, ಕೋಶಾಧ್ಯಕ್ಷರಾದ ಸುರೇಶ ಸಿಂಗನಾಳ, ನಿರ್ದೇಶಕರಾದ ರಾಚಯ್ಯ ಸ್ವಾಮಿ ಹುಚ್ಚೇಶ್ವರ ಮಠ, ಹಾನಗಲ್ ಕುಮಾರೇಶ್ವರ ಸಹಕಾರಿ ಪತ್ತಿನ ಉಪಾಧ್ಯಕ್ಷರಾದ ಲಿಂಗಪ್ಪ ಕಮತಿಗಿ ಹಾಗೂ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಮತ್ತು ಮುಖ್ಯೋಪಾಧ್ಯಾಯರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka