Environmental awareness from the Green Green teamಹಸಿರು ಹೊನಲು ತಂಡದಿಂದ ಪರಿಸರ ಜಾಗೃತಿ

ಕೊಟ್ಟೂರು: ಪಟ್ಟಣದ ಆರಾಧ ದೖವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಡಿಸೆಂಬರ್ 8 ಸೋಮವಾರ ರಂದು ಜರುಗುವ ಹಿನ್ನೆಲೆ, ದೇವಸ್ಥಾನ ಮುಂಭಾಗ ದಲ್ಲಿನ ಅಗ್ನಿ ಕುಂಡಕ್ಕೆ ಕೊಬ್ಬರಿ ಸುಟ್ಟು ನಮಿಸುವುದು ಸಂಸ್ಕೃತಿ ಇದೆ ಅದರಂತೆ ಅಂಗಡಿ ಮಾಲೀಕರು ಬರುವ ಭಕ್ತಾದಿಗಳಿಗೆ ಕೊಬ್ಬರಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಮಾರಾಟ ಮಾಡದಂತೆ ಪೇಪರ್ ಚೀಲದಲ್ಲಿ ಕೊಬ್ಬರಿ ಮಾರಾಟ ಮಾಡಿ ಎಂದು ಅಂಗಡಿ ಮಾಲಿಕರಿಗೆ ಉಚಿತವಾಗಿ 20 ಸಾವಿರ ಪೇಪರ್ ಬ್ಯಾಗನ್ನು ಹಸಿರು ಹೊನಲು ತಂಡದ ಸದಸ್ಯರು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು.
“ಅಂಗಡಿ ಮಾಲೀಕರು ಭಕ್ತರಿಗೆ ಪ್ಲಾಸ್ಟಿಕ್ ಸಹಿತ ಒಣ ಕೊಬ್ಬರಿ ಮಾರಾಟ ಮಾಡಿದಾಗ ಅದನ್ನು ಅಗ್ನಿ ಕುಂಡಕ್ಕೆ ಎಸೆಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತೆ ಜತೆಗೆ ಅದೇ ಭಸ್ಮವನ್ನ ಮರುದಿನ ಭಕ್ತರು ಹಣೆಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಯಿಲೆ ಉದ್ಭವವಾಗುತ್ತದೆ. ಅಂಗಡಿಯ ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಿಟ್ಟು ಪೇಪರ್ ಬ್ಯಾಗ್ ಬಳಸುವಂತೆ ಬಂಜಾರ್ ನಾಗರಾಜ್ ಮನವಿ ಮಾಡಿದರು.”
ಈ ಸಂದರ್ಭದಲ್ಲಿ ಹಸಿರು ಹೊನಲು ಸೇವಾ
ಸಂಸ್ಥೆ ಗೌರವಾಧ್ಯಕ್ಷ ಸಿ.ಬಸವರಾಜ, ಅಧ್ಯಕ್ಷ ಗುರುಬಸವರಾಜ್, ಬಿ ಆರ್ ವಿಕ್ರಮ್, ಗಿರೀಶ್, ಕೊಟ್ರೇಶ್, ನಾಗಣ್ಣ, ಪತ್ತಿಕೊಂಡ ಶ್ರೀಕಾಂತ ಇತರರು ಇದ್ದರು.
Kalyanasiri Kannada News Live 24×7 | News Karnataka