ದಲಿತ ವಿಮೋಚನಾ ಸೇನೆಯ ತಾಲೂಕ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ
Election of office bearers of Dalit Liberation Army Taluka and District Committee
ಗಂಗಾವತಿ: ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಹೊಂದಿರುವ ಹಾಗೂ ಹಲವು ದಶಕಗಳಿಂದ ರಾಜ್ಯಾದ್ಯಂತ ಸಂಘಟನೆ ಹೊಂದಿರುವ ದಲಿತ ವಿಮೋಚನಾ ಸೇನೆ ಗಂಗಾವತಿ.ಕಾರಟಗಿ ಹಾಗೂ ಯಲಬುರ್ಗಾ ತಾಲೂಕಿನ ಪದಾಧಿಕಾರಿಗಳ ಆಯ್ಕೆ ನಗರದ ಸರ್ಕಿಟ್ ಹೌಸ್ ನಲ್ಲಿ ರವಿವಾರದಂದು ಜರುಗಿತು.ಸೇನೆಯ ರಾಜ್ಯ ಉಪಾಧ್ಯಕ್ಷ ಎಸ್ ದುರಗಪ್ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಟೀಪುಡಿ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕ ಅಧ್ಯಕ್ಷರುಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸೇನೆಯ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಯಂಕಪ್ಪ ಉಪ್ಪಾರ. ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಲಿಂಗಪ್ಪ ದೊಡ್ಮನಿ ಹೇರೂರು. ಉಪಾಧ್ಯಕ್ಷರಾಗಿ ಶ್ಯಾಮ್ ಕುಮಾರ ಐಹೊಳೆ. ಗಂಗಾವತಿ ನಗರ ಘಟಕದ ಅಧ್ಯಕ್ಷರಾಗಿ ಚಿರಂಜೀವಿ ಅಕ್ಕಿ ರೊಟ್ಟಿ. ಯಲಬುರ್ಗಾ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ. ಮಾಟಲದಿನ್ನಿ. ಜಿಲ್ಲಾಧ್ಯಕ್ಷರಾಗಿ ರಮೇಶ ಸೋಮನಾಳ.ಉಪಾಧ್ಯಕ್ಷರಾಗಿ ಮಂಜು ಐಹೊಳೆ. ಇನ್ನೋರ್ವ ಜಿಲ್ಲಾ ಉಪಾಧ್ಯಕ್ಷರಾಗಿ ಮಾರುತಿ ವಕ್ಕಲಕುಂಟೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹುಲುಗಪ್ಪ ಟೀಪುಡಿ ಮರು ಆಯ್ಕೆಗೊಂಡಿದ್ದಾರೆ. ಜಿಲ್ಲಾ ಯುವ ಘಟಕದ ಅಧ್ಯಕ್ಷ ಭೀಮೇಶ ವಡ್ಡರಕಲ್. ಗಂಗಾವತಿ ತಾಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ಗಂಗಮ್ಮ ಹೊಸಳ್ಳಿ. ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹನುಮ ನಾಯಕ ಅಯೋಧ್ಯ. ಸಹ ಕಾರ್ಯದರ್ಶಿ ಶರಣಪ್ಪ ಅಗಜಲ್.ತಾಲೂಕ ಯುವ ಘಟಕದ ಅಧ್ಯಕ್ಷ ಹನುಮೇಶ ಹಣವಾಳ.ಕಾರಟಗಿ ತಾಲೂಕ ಅಧ್ಯಕ್ಷ ಯಮನೂರಪ್ಪ ಬೂದುಗುಂಪ್ಪ. ಯಲಬುರ್ಗಾ ಅಧ್ಯಕ್ಷರಾಗಿ ಮಾರುತಿ ಗುಡದೂರು. ಉಪಾಧ್ಯಕ್ಷ ಹನುಮೇಶ ಗಾಣದಾಳ. ಕುಕನೂರು ತಾಲೂಕ ಅಧ್ಯಕ್ಷರಾಗಿ ಹುಲ್ಲಪ್ಪ ದೊಡ್ಡಮನಿ ಉಪಾಧ್ಯಕ್ಷರಾಗಿ ಹನುಮಂತ ದೊಡ್ಡಮನಿ. ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಮಾನವಿ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಪ್ರಮಾಣವಚನ ಬೋಧಿಸಲಾಯಿತು.ರಾಜ್ಯ ಉಪಾಧ್ಯಕ್ಷ ಎಸ್ ದುರಗಪ್ಪ ಮಾತನಾಡಿ ರಾಜ್ಯ ಅಧ್ಯಕ್ಷರ ಆದೇಶದಂತೆ ಶೋಷಿತ ವರ್ಗದ ಧ್ವನಿಯಾದ ದಲಿತ ವಿಮೋಚನಾ ಸೇನೆ ನೂತನ ಪದಾಧಿಕಾರಿಗಳು ಶೋಷಿತ ಜನಾಂಗದ ಬದುಕಿಗೆ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡುವುದರ ಜೊತೆಗೆ ಇತ್ತೀಚಿಗೆ ಗಂಗಾವತಿಯಲ್ಲಿ ಜರುಗಿದ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಜಿಲ್ಲಾ ಸಮಾವೇಶದ ಯಶಸ್ವಿಗೆ ಸಹಕರಿಸಿದವರ ಸೇನೆಯ ಎಲ್ಲಾ ಮನಸುಗಳಿಗೆ ಅಭಿನಂದಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಟೀಪುಡಿ ಮಾತನಾಡಿ ತಮಗೆ ನೀಡಿದ ಹುದ್ದೆಯನ್ನು ಜವಾಬ್ದಾರಿಯಿಂದ ನಿಭಾಯಿಸಿ ಸಂಘಟನೆಗೆ ಸಹಕಾರ ನೀಡುತ್ತ ದಲಿತ ವಿಮೋಚನಾ ಸೇನೆಯ ಬಲವರ್ಧನೆಗೆ ಶ್ರಮಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
Kalyanasiri Kannada News Live 24×7 | News Karnataka