ಅಖಿಲ ಭಾರತ ಗೃಹರಕ್ಷಕದಳದ 63ನೇ ವರ್ಷದ ದಿನಾಚರಣೆ.
63rd Anniversary of the All India Home Guards.
ಕೊಪ್ಪಳ: 63ನೇ ಅಖಿಲ ಭಾರತ ಗೃಹರಕ್ಷಕದಳದ ದಿನಾಚರಣೆಯನ್ನು ಕೊಪ್ಪಳದ ಜಿಲ್ಲಾ ಗೃಹರಕ್ಷಕದಳದ ಆವರಣದಲ್ಲಿ ನೆರವೇರಿಸಲಾಯಿತು.ಗೃಹರಕ್ಷಕ ದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್ 6ರಂದು ದೇಶದಾದ್ಯಂತ ಆಚರಿಸಲಾಗುತ್ತದೆ ಈ ದಿನಾಚರಣೆಯು ಭಾರತೀಯ ಗೃಹರಕ್ಷಕ ದಳದ ಸ್ಥಾಪನೆಯ 1946ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ ಮತ್ತು ನಾಗರಿಕ ರಕ್ಷಣೆ ಸಂಸ್ಥೆಗಳ ಮಹತ್ವವನ್ನು ಸ್ಮರಿಸುತ್ತದೆ.ಅದರ ಅಂಗವಾಗಿ 63ನೇ ಗೃಹರಕ್ಷಕದಳ ದಿನಾಚರಣೆಯನ್ನು ಕೊಪ್ಪಳದ ಗೃಹ ರಕ್ಷಕ ದಳದ ಕಾರ್ಯಾಲಯದ ಮುಂದೆ ದಿನಾಚರಣೆಯನ್ನು ಶನಿವಾರ ದಿನದಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆ ಲಕ್ಷ್ಮಣ ಕಡೆಮನಿ ಸಮಾದೇಷ್ಟರು ಗೃಹರಕ್ಷಕದಳ ಕೊಪ್ಪಳ ರವರು ಮಾತನಾಡಿ ಹಲವು ದಶಕಗಳಿಂದ ಪೊಲೀಸ್ ಇಲಾಖೆಯೊಂದಿಗೆ ಗುರುತಿಸಿಕೊಂಡಿರುವ ಗೃಹರಕ್ಷಕರಿಗೆ ಹಾಗೂ ಕುಟುಂಬ ವರ್ಗಕ್ಕೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುವುದರ ಮೂಲಕ ನೆರವು ಕಲ್ಪಿಸಲು ಮುಂದಾಗಬೇಕು. ರಾಷ್ಟ್ರೀಯ ಹಬ್ಬ ಸೇರಿದಂತೆ ನಾಡ ಹಬ್ಬಗಳಲ್ಲಿ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪೊಲೀಸರೊಂದಿಗೆ ಸೇವೆಗೆ ಮುಂದಾಗುವ ಗೃಹರಕ್ಷಕರಿಗೆ ಮಾಸಿಕ ವೇತನವನ್ನು ನೀಡಬೇಕು. ವೈದ್ಯಕೀಯ ವೆಚ್ಚ. ಪರಸ್ಥಳದ ಗೃಹ ಸೇವೆಗೆ ಉಚಿತ ಸಾರಿಗೆ ವ್ಯವಸ್ಥೆ ಪಾಸ್ ಕಲ್ಪಿಸುವುದು ಕರ್ತವ್ಯದಲ್ಲಿರುವ ಗೃಹರಕ್ಷಕರು ನೋವು ಸಾವು ಆಕಸ್ಮಿಕ ಘಟನೆಗಳು ಸಂಭವಿಸದಲ್ಲಿ ಅಂತಹ ಕುಟುಂಬಗಳ ವಿವಿಧ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅಭಿವೃದ್ಧಿಗಾಗಿ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೀರಣ್ಣ ಬಡಿಗೇರ್ ಸಿಸಿ ಕಮಾಂಡರ್. ರವೀಂದ್ರ ಬಾಕಳೆ ಗವಿಸಿದ್ದಪ್ಪ ಮತ್ನಾಳ.ಸರಸ್ವತಿ ನಾಗರಾಜ.ಸೇರಿದಂತೆ ಅಧಿಕಾರಿಗಳು ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka