ಶಂಕರ ಮಠದಲ್ಲಿ ದತ್ತ ಜಯಂತಿ ಆಚರಣೆ.
ಜನ್ಮ ಸಾರ್ಥಕತೆ ಗೆ ಗುರುವಿನ ಅನುಗ್ರಹ ಅವಶ್ಯಕ. ನಾರಾಯಣರಾವ್ ವೈದ್ಯ.
Datta Jayanti celebration at Shankara Math.
Guru's grace is necessary for the meaning of birth. Narayana Rao Vaidya.
ಗಂಗಾವತಿ.. ಹರ ಮುನಿದರೂ ಗುರು ಕಾಯುವನಂತೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಾರ್ಥಕತೆಗೆ ಗುರುಗಳ ಅನುಗ್ರಹ ಅತ್ಯವಶ್ಯವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು. ಅವರು ನಗರದ ಶಂಕರ ಮಠದ ಶಾರದಾ ಮಂದಿರದಲ್ಲಿ ಗುರುವಾರದಂದು ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಜಯಂತೋತ್ಸವ ಸಮಾರಂಭದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಮಠದ ನಿರ್ಮಾಣಕ್ಕೆ ಪೂರ್ವದಲ್ಲಿ ಹಲವು ದಶಕಗಳಿಂದ ಶ್ರೀ ಶಂಕರಾಚಾರ್ಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಲವು ವೈವಿಧ್ಯಮಯವಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಧರ್ಮ ಜಾಗೃತಿ ಹಾಗೂ ಸಮಾಜದ ಸಂಘಟನೆಗೆ ಗಮನಹರಿಸುತ್ತಾ ಬರ ಲಾಗಿದೆ
ದಿವಂಗತ ಭೀಮಸೇನ್ ರಾವ್ ಅಳವಂಡಿ ಕರ್ ಅವರ ಪರಿಶ್ರಮದಿಂದ ಹಾಗೂ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವ ಭಾರತೀ ಹಾಗೂ ವಿದುಶೇಖರ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಸರ್ವಜನಾಂಗದವರ ಸಹಕಾರ ದಿಂದನಗರದಲ್ಲಿ ಶೃಂಗೇರಿ ಪೀಠದ ಉಭಯ ಜಗದ್ಗುರುಗಳ ಅನುಗ್ರಹದಿಂದ ಶ್ರೀ ಮಠ ಸ್ಥಾಪಿಸಿ ಎಂಟು ವರ್ಷಗಳು ಪೂರೈಸಿದ್ದುಶ್ರೀ ಮಠದ ಎಲ್ಲಾ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದತ್ತಾತ್ರೇಯ ಪಾದುಕೆಗಳಿಗೆ ಅಭಿಷೇಕ. ಅಷ್ಟೋತ್ತರ ಪಾರಾಯಣ. ಪಾಲಕಿ ಉತ್ಸವ ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಮಹೇಶ್ ಭಟ್ ಜೋಷಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಅವರು ನಡೆಸಿಕೊಟ್ಟ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಂಪನ್ನ ಗೊಂಡಿತು.
ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿ ಕ.ರ. ಬಾಲಕೃಷ್ಣ ದೇಸಾಯಿ. ಶೇಷಗಿರಿ ಗಡಾದ್. ಭೀಮಾಶಂಕರ್ ಹೊಸಳ್ಳಿ. ನಾಗೇಶ್. ಅನಿಲ್ ಭಟ್. ಕಾಶಿನಾಥ್ ಭಟ್ ಜೋಶಿ. ಸೇರಿದಂತೆ ವಿವಿಧ ಬಜನಾ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು
Kalyanasiri Kannada News Live 24×7 | News Karnataka