ಅಂಬಿಗರ ಚೌಡಯ್ಯ ಪೀಠಾಧಿಪತಿಗಳಿಗೆ ಸಮುದಾಯದಿಂದ ಅದ್ಧೂರಿ ಸ್ವಾಗತ
ಮೀಸಲಾತಿ ಹೋರಾಟದಲ್ಲಿ ಒಗ್ಗಟ್ಟಾಗಿ ಪಾಲ್ಗೊಳ್ಳಿ: ಶಾಂತಭೀಷ್ಮ ಶ್ರೀಗಳು
Participate unitedly in the reservation struggle: Shantabhishma Shri
ಗಂಗಾವತಿ, ಡಿ.03: ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು 10ನೇಯ ಶರಣ ಸಂಸ್ಕøತಿ ಉತ್ಸವ-2026 ನಿಮಿತ್ಯ ಮಂಗಳವಾರದಂದು ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಗಂಗಾಮತ ಸಮುದಾಯದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಗರದ ಸುಣಗಾರ ಓಣಿಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಗಳಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 2026ರ ಜನೇವರಿ 14 ಮತ್ತು 15ರಂದು ಶರಣ ಸಂಸ್ಕøತಿ ಉತ್ಸವ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಕೇಂದ್ರ ಮಂತ್ರಿಗಳು, ನಾಡಿನ ಪೂಜ್ಯರು, ದಾರ್ಶನಿಕರು ಹಾಗೂ ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ. ಉತ್ಸವ ನಿಮಿತ್ತ ಸಾಮೂಹಿಕ ಉಚಿತ ವಿವಾಹ, ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ ಸೇರಿದಂತೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವದ ಜೊತೆಗೆ ಜನೇವರಿ 14ರಂದು ಅಂಬಿಗರ ಚೌಡಯ್ಯನವರ ಐಕ್ಯಸ್ಥಳದಲ್ಲಿ ಸಂಜೆ 7 ಗಂಟೆಗೆ ಗಂಗಾ ಆರತಿ ಆಯೋಜಿಸಲಾಗಿದ್ದು, ಆ ದಿನ ರಾತ್ರಿಯಿಡೀ ಸಾಂಸ್ಕøತಿ ಕಾರ್ಯಕ್ರಮಗಳು ಜರುಗಲಿವೆ. ಜನೇವರಿ 15ರ ಬೆಳಿಗ್ಗೆ ಧರ್ಮ ಧ್ವಜಾರೋಹಣ ಮತ್ತು ವಚನ ಗ್ರಂಥ ಮಹಾರಥೋತ್ಸವ ಆಯೋಜಿಸಲಾಗಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮಕ್ಕೆ ಆಗಮಿಸುವ ಸಕಲ ಭಕ್ತಾಧಿಗಳಿಗೆ ಮಹಾದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ನಂತರ ಚಿಕ್ಕಜಂತಕಲ್ ಗ್ರಾಮಕ್ಕೆ ಭೇಟಿ ನೀಡಿದ ಶ್ರೀಗಳನ್ನು ಗ್ರಾಮಸ್ಥರು ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಗ್ರಾಮದ ಬಸ್ ನಿಲ್ದಾಣ ಪಕ್ಕದ ಅಂಬಿಗರ ಚೌಡಯ್ಯನವರ ನಾಮಫಲಕವನ್ನು ಶ್ರೀಗಳು ಉದ್ಘಾಟಿಸಿದರು.
ಈ ವೇಳೆ ಸಮುದಾಯದ ಮುಖಂಡರಾದ ಬಿ.ಅಶೋಕ, ತಾಲೂಕು ಗೌರವ ಅಧ್ಯಕ್ಷ ಕಾಪು ಹುಲುಗಪ್ಪ, ಹನುಮಂತಪ್ಪ ಮನಗುಳಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಬಟಾರಿ, ತಾಲೂಕು ಉಪಾಧ್ಯಕ್ಷ ದೊಡ್ಡ ಭರಮಣ್ಣ, ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕು ಅಧ್ಯಕ್ಷ ಭೈರೇಶ, ಪತ್ರಕರ್ತ ದೇವರಾಜ, ಮರಳಿ ಗ್ರಾಮದ ಸಮುದಾಯದ ಅಧ್ಯಕ್ಷ ಹೊನ್ನಪ್ಪ, ಕುಂಟೋಜಿ ರಾಮಣ್ಣ, ಬಿ.ದೇವಪ್ಪ, ಆಗಲಗಡ್ಡಿ ಬಸವರಾಜ, ಕಬ್ಬೇರ್ ಮಾರೆಣ್ಣ, ಸುಣಗಾರ ಲಕ್ಷ್ಮಣ, ಫಕೀರಪ್ಪ ಸೇರಿದಂತೆ ಮರಳಿ, ಬಸಾಪಟ್ಟಣ, ಚಿಕ್ಕಜಂತಕಲ್, ಅಯೋಧ್ಯೆ, ನಾಗರಳ್ಳಿ, ಹೆಬ್ಬಾಳ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಮುದಾಯದ ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು.
ಬಾಕ್ಸ್
ಅಂಬಿಗರ 10ನೇ ಶರಣ ಸಂಸ್ಕøತಿ ಉತ್ಸವ-2026 ಮತ್ತು ವಚನ ಗ್ರಂಥ ಮಹಾರಥೋಥ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ಎಸ್.ಟಿ. ಮೀಸಲಾತಿಗಾಗಿ ನಮ್ಮ ಸಮುದಾಯು 50 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಶರಣ ಸಂಸ್ಕøತಿ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕುರಿತಂತೆ ಹಕ್ಕೊತ್ತಾಯ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಈ ಕುರಿತಂತೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ನಾಡಿನ ಸಮಸ್ತ ಗಂಗಾಮತ ಸಮುದಾಯದ ಬಂಧುಗಳು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕೋಟ್
ಹಲವು ವರ್ಷಗಳಿಂದ ಎಸ್.ಟಿ. ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದೆ. ನಮ್ಮ ಸಮುದಾಯವು ಯಾವುದೇ ಪಕ್ಷದ ಪರ ಇಲ್ಲ. ನಮ್ಮ ಹೋರಾಟಕ್ಕೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ಯಾವುದೇ ಪಕ್ಷವಿದ್ದರೂ ಆ ಪಕ್ಷವನ್ನು ನಮ್ಮ ಸಮುದಾಯ ಬೆಂಬಲಿಸುತ್ತದೆ. ಶರಣ ಸಂಸ್ಕøತಿ ಉತ್ಸವದಲ್ಲಿ ತಾಲೂಕಿನ ಸಾವಿರಾರು ಜನ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು.
– ಹನುಮೇಶ ಬಟಾರಿ,
ಗಂಗಾಮತ ಸಮುದಾಯದ ತಾಲೂಕು ಅಧ್ಯಕ್ಷ
Kalyanasiri Kannada News Live 24×7 | News Karnataka