ಶ್ರದ್ಧೆಭಕ್ತಿಯಿಂದ ಜರುಗಿದ ಶ್ರೀ ಹನುಮದ್ ವೃತ.
Shri Hanumad Vritta was observed with devotion.
ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದಲ್ಲಿ. ಮಂಗಳವಾರದಂದು ಶ್ರೀ ಹನುಮದ್ ವೃತ ಅಪಾರ ಭಕ್ತಾದಿಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ಆಚರಣೆಯ ಪ್ರಯುಕ್ತ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ. ವೈವಿಧ್ಯಮಯ ಹೂಗಳಿಂದ ಅಲಂಕಾರ ವಾಯುಸ್ತುತಿ ಪಾರಾಯಣ ಸೇರಿದಂತೆ ಕಳೆದ ಐದು ದಿನಗಳಿಂದ ಜರುಗಿದ ಜ್ಞಾನ ಸತ್ರ ಪ್ರವಚನ ಕಾರ್ತಿಕ್ ಆಚಾರ್ಯ ಜೋಶಿ ಅವರಿಂದ ಸಂಪನ್ನಗೊಂಡಿತು. ಬಳಿಕ ಭಜನೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ಜರುಗಿತು. ಆಚರಣೆಯ ಕುರಿತು ಸೇವಾ ಸಮಿತಿಯ ಅಧ್ಯಕ್ಷ ಮುರಳಿದರ ಗಂಗಾನಾಳ. ಮಾತನಾಡಡಿ. ಪ್ರತಿ ವರ್ಷ ದಂತೆ ಈ ವರ್ಷವೂ ಸಹ ಶ್ರೀ ಯೋಗೇಶ್ವರಯಾಜ್ಞವಲ್ಕ್ಯ ಸೇವಾ ಟ್ರಸ್ಟ್ ನೇತ್ರತ್ವದಲ್ಲಿ ಹನುಮದ್ ವೃ ತ ಆಚರಣೆಯನ್ನು ಸರ್ವ ಜನಾಂಗದ ಸಕಲ ಸದ್ಭಕ್ತರ ಸಹಕಾರದಿಂದ ಆಚರಿಸಲಾಗುತ್ತಿದ್ದು ಧಾರ್ಮಿಕ ಆಚರಣೆಯ ಜೊತೆಗೆ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ. ಧರ್ಮ ರಕ್ಷಣೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು ಪ್ರವಚನಕಾರರಾದ ವೇದಮೂರ್ತಿ ಕಾರ್ತಿಕ್ ಜೋಷಿ ಮಾತನಾಡಿ. ಹನುಮದ್ ವೃತ ಆಚರಣೆಯ ಮೂಲ ಉದ್ದೇಶ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಮಹಾಸಂಕಲ್ಪವನ್ನು ಹೊಂದಿದೆ. ಹಲವು ದಿವಸಗಳ ಕಾಲ ಹನುಮಲೆ ಹಾಕಿಕೊಳ್ಳುವುದು. ಬಳಿಕ ವಿಸರ್ಜಿಸುವುದು. ಮಾಲಾಧಾರಿಗಳ ಸಂಕಲ್ಪವನ್ನು ಆಚರಿಸುವುದರ ಮೂಲಕ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುವುದು.
ವಾಯುಪುತ್ರನಾದ ಶ್ರೀ ಆಂಜನೇಯ ಶ್ರೀರಾಮನ ಬಂಟನಾಗಿ ಸರ್ವಕಾಲಕ್ಕೂ ಸೂರ್ಯ ಚಂದ್ರ ಇರುವವರಿಗೆ ಭಕ್ತರ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಎಂದು ಆಚರಣೆಯ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ತಿರುಮಲ್ ರಾವ್ ಆಲಂಪಲ್ಲಿ. ರಂಗನಾಥ ವಟಗಲ್ ಗೋಪಿನಾಥ ದಿನ್ನಿ. ಜಗನ್ನಾಥ್ ಆಲಂಪಲ್ಲಿ. ಕೃಷ್ಣ ಪ್ರಸನ್ನ. ವಿಜಯಕುಮರ. ನರಸಿಂಹ ಆಲಮ್ಪಲ್ಲಿ ರಾಮರಾವ. ರಮೇಶ್ ಪ್ರಸಾದ ಸಾಲಗುಂದಿ ಸೇರಿದಂತೆ ವಿಪ್ರ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
Kalyanasiri Kannada News Live 24×7 | News Karnataka
